ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವ ವಹಿಸಿಕೊಂಡ ಶ್ವೇತಾ ಬಂಡಿ! ಇವರ ಬಗ್ಗೆ ಇಂಟರ್​ಸ್ಟಿಂಗ್ ಮಾಹಿತಿ 

ajjimane ganesh

kpcc  Who is Shweta Bandi Shivamogga District Congress Womens Wing President ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವ ವಹಿಸಿಕೊಂಡ ಶ್ವೇತಾ ಬಂಡಿ! ಇವರ ಬಗ್ಗೆ ಇಂಟರ್​ಸ್ಟಿಂಗ್ ಮಾಹಿತಿ 

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶ್ವೇತಾ ಬಂಡಿ [Shweta Bandi] ಅವರನ್ನು ನೇಮಿಸಲಾಗಿದೆ. ಪಕ್ಷವು ತಮ್ಮ ಮೇಲಿಟ್ಟಿರುವ ಈ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶ್ವೇತಾ ಬಂಡಿ ತಿಳಿಸಿದ್ದಾರೆ. 

ಉತ್ಸಾಹಿ ಮತ್ತು ಪದವೀಧರೆಯಾಗಿರುವ ಶ್ವೇತಾ ಬಂಡಿ, ಉತ್ತಮ ಕೆಲಸಗಾರ್ತಿ ಮತ್ತು ಮೃದುಭಾಷಿ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ಕಾಂಗ್ರೆಸ್‌ನ ನಿಷ್ಠಾವಂತ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ ಅವರ ಪುತ್ರಿ.

ಹೊಸನಗರದ ಬಿದರಹಳ್ಳಿಯವರಾದ ಶ್ವೇತಾ, ಖ್ಯಾತ ಪಬ್ಲಿಕ್ ಪ್ರಾಸಿಕ್ಯೂಟರ್ ವಿ. ಮೂರ್ತಿರಾವ್ ಅವರ ಪುತ್ರ ಭರತ್ ಅವರನ್ನು ವಿವಾಹವಾಗಿದ್ದು, ಹೊಸನಗರದ ಹಾರೋಹಿತ್ತಲು ಗ್ರಾಮದ ಸೊಸೆಯಾಗಿದ್ದಾರೆ. ಪ್ರಸ್ತುತ ಅವರು ತಮ್ಮ ಪತಿಯೊಂದಿಗೆ ಶಿವಮೊಗ್ಗ ನಗರದಲ್ಲಿ ವಾಸಿಸುತ್ತಿದ್ದಾರೆ.

ಶ್ವೇತಾ ಬಂಡಿ ಅವರು 2016 ರಿಂದ 2021 ರ ಅವಧಿಯಲ್ಲಿ ಕೆರೆಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ (Zilla Panchayat member) ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. 

kpcc  Who is Shweta Bandi Shivamogga District Congress Womens Wing President
kpcc  Who is Shweta Bandi Shivamogga District Congress Womens Wing President

ತಮ್ಮ ತಂದೆ ಬಿ.ಪಿ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ಕಲಿತಿದ್ದರಿಂದ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಶ್ವೇತಾ ಅವರ ತಂದೆ ಬಿ.ಪಿ. ರಾಮಚಂದ್ರ ಅವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಬಂಗಾರಪ್ಪ ಅವರು ಪಕ್ಷ ಬಿಟ್ಟ ಸಂದರ್ಭದಲ್ಲಿಯೂ ರಾಮಚಂದ್ರ ಅವರು ಕಾಂಗ್ರೆಸ್‌ನಲ್ಲೇ ಉಳಿದು ಪಕ್ಷ ನಿಷ್ಠೆ ತೋರಿದ್ದರು. 

kpcc  Who is Shweta Bandi 

ಹೊಸನಗರ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ಬಿ.ಪಿ. ರಾಮಚಂದ್ರ ಅವರಿಗೆ ರಾಜಕೀಯ ಕಾರಣಗಳಿಂದ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಇದೀಗ ಅವರ ಪುತ್ರಿ ಶ್ವೇತಾ ಅವರಿಗೆ ಮಹಿಳಾ ಜಿಲ್ಲಾಧ್ಯಕ್ಷೆ ಸ್ಥಾನ ದೊರೆತಿದ್ದು, ಇದು ಅವರ ಕುಟುಂಬದ ಪಕ್ಷ ನಿಷ್ಠೆಗೆ ಸಂದ ಗೌರವವಾಗಿದೆ.

ಹೊಸನಗರದ ಕೆರೆಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಶ್ವೇತಾ ಬಂಡಿ, ಪಕ್ಷದಲ್ಲಿ ಇದೀಗ ಗುರುತರ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಪಕ್ಷದಲ್ಲಿ ಯಾವುದೇ ಮಹತ್ತರ ಹುದ್ದೆಯನ್ನು ನಿರ್ವಹಿಸದಿದ್ದರೂ, ಇದೀಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ (District Congress Women’s Wing) ಏರಿರುವುದು ಗಮನಾರ್ಹ.

kpcc 

ತಮ್ಮ ತಂದೆ, ಹಿರಿಯ ಕಾಂಗ್ರೆಸ್ಸಿಗ ಬಿ.ಪಿ. ರಾಮಚಂದ್ರ ಅವರ ಮಾರ್ಗದರ್ಶನ ಮತ್ತು ಪಕ್ಷದ ಹಿರಿಯ ನಾಯಕರ ಬೆಂಬಲದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಸಂಘಟನೆಯನ್ನು ಬಲಪಡಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.  

kpcc  Who is Shweta Bandi Shivamogga District Congress Womens Wing President

ಶ್ವೇತಾ ಬಂಡಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ, ಹೊಸನಗರ, ಕೆಪಿಸಿಸಿ, ಬಿ.ಪಿ. ರಾಮಚಂದ್ರ ,Shweta Bandi, Shivamogga District Congress Womens Wing, #ShivamoggaCongress #KarnatakaPolitics 

 

Share This Article