Kote police station : ಪೊಲೀಸ್ ಠಾಣೆಗೆ ಬಂದು ತನ್ನನ್ನು ಜೈಲಿಗೆ ಕಳುಹಿಸುವಂತೆ ಮರವೇರಿದ ಯುವಕ : ಕಾರಣವೇನು ಗೊತ್ತಾ
ಅಪರಿಚಿತ ವ್ಯಕ್ತಿಯೊಬ್ಬ ಕೋಟೆ ಪೊಲೀಸ್ ಠಾಣೆಯ ಆವರನದಲ್ಲಿರುವ ಮರವನ್ನೇರಿ ಕುಳಿತಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೂಡಲೇ ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಮರವೇರಿ ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆತನಿಗೆ ಮರದಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ. ಆದರೆ ಆತ ನಾನು ಕೆಳಗೆ ಇಳಿಯುವುದಿಲ್ಲ, ನನ್ನನ್ನು ಕೊಲ್ಲುತ್ತಾರೆ, ನನ್ನನ್ನು ಜೈಲಿಗೆ ಹಾಕಿ ಎಂದು ಹೇಳಿದ್ದಾನೆ ಎನ್ನಲಾಗಿದೆ.
Kote police station ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಮರವೇರಿದ್ದ ವ್ಯಕ್ತಿಯನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಎಷ್ಟೇ ಮನವಿ ಮಾಡಿದರೂ ಆತ ಮರದಿಂದ ಕೆಳಗಿಳಿಯಲು ಒಪ್ಪಲಿಲ್ಲ.
ಕೊನೆಗೆ, ಅಗ್ನಿಶಾಮಕ ದಳದ ಸಿಬ್ಬಂದಿ ಆತನಿಗೆ “ನೀನು ಕೆಳಗಿಳಿದರೆ ನಿನ್ನನ್ನು ಜೈಲಿಗೆ ಹಾಕುತ್ತಾರೆ” ಎಂದು ಸಮಾಧಾನಪಡಿಸಿ, ಏಣಿ ಹಾಕಿ ಮರವನ್ನೇರಿ ಆತನನ್ನು ಕೆಳಗಿಳಿಸಿದ್ದಾರೆ. ನಂತರ, ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ವಿಚಾರಣೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ DFO ಅಶೋಕ್ ಕುಮಾರ್, IC AFSO ಮುಕ್ತುO ಉಸೇನ್,AFSO ವಿಲ್ಫ್ರೆಡ್ ಗಾನ್ಸ್ಲಾವಿಸ್, LF ಲೋಹಿತ್ ಕುಮಾರ್, FD ಶರತ್ ಕುಮಾರ್,FM ಮಾರುತಿ T R, ಎರ್ರಿ ಸ್ವಾಮಿ ,ಕಿರಣ್ ಕುಮಾರ್, ಯಶ್ವಂತ್ ಭಾಗಿಯಾಗಿದ್ದರು.
