ಸೀತಾನದಿಯಲ್ಲಿ ಮುಳುಗಿ ಕೊಪ್ಪದ ವೈದ್ಯ ಶಿವಮೊಗ್ಗದ ಉದ್ಯಮಿ ಸಾವು!ಇನ್ನೊಬ್ಬರ ಜೀವ ಉಳಿಸಿದ ಬೇರು

Malenadu Today

SHIVAMOGGA  Feb 26, 2024  ಪ್ರವಾಸಕ್ಕೆಂದು ಹೆಬ್ರಿಗೆ ತೆರಳಿದ್ದ ಯುವಕ ತಂಡದ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಘಟನೆಯಲ್ಲಿ ಓರ್ವರು ಶಿವಮೊಗ್ಗದವರು ಇನ್ನೊಬ್ಬರು ಕೊಪ್ಪ ದ ಡಾಕ್ಟರ್​ ಸಾವನ್ನಪ್ಪಿದ್ದಾರೆ

ಸೋಮೇಶ್ವರ ಸಮೀಪ ಸೀತಾನದಿಯಲ್ಲಿ ಈ ಘಟನೆ ನಡೆದಿದೆ.ಹೆಬ್ರಿಯ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿ ಘಟನೆ ಸಂಭವಿಸಿದ್ದು, ಈಜಲು ಬಾರದೇ ನೀರಿಗೆ ಇಳಿದಿದ್ದು ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. 

ಮೃತರನ್ನ ಡಾ.ದೀಪಕ್ ಕೊಪ್ಪ ಮತ್ತು ಶೈನು ಡೇನಿಯಲ್ ಎಂದು ಗುರುತಿಸಲಾಗಿದೆ. ದೀಪಕ್ ಶೃಂಗೇರಿ ವೈದ್ಯರಾಗಿದ್ದಾರೆ. ಶೈನು ಶಿವಮೊಗ್ಗದಲ್ಲಿ ವ್ಯವಹಾರ ಮಾಡಿಕೊಂಡಿದ್ದಾರೆ. 

 ಡಾ| ವಿನ್ಸೆಂಟ್‌ ಎಂ.ಸಿ. ಮೋಹನ್‌ ಜತೆಗೆ ಶಿವಮೊಗ್ಗದ ಶೈನು ಡೇನಿಯಲ್​ ಪ್ರವಾಸಕ್ಕೆ ಅಂತಾ ಹೆಬ್ರಿಗೆ ಬಂದಿದ್ದರು ಈ ಕಡೆ ಮಣಿಪಾಲ್​ ನಿಂದ ದೀಪಕ್​ ಇಬ್ಬರನ್ನ ಸೇರಿಕೊಂಡಿದ್ದರು, ಹೆಬ್ರಿಯಲ್ಲಿ ಊಟ ಮುಗಿಸಿ ಸೋಮೇಶ್ವರಕ್ಕೆ ತೆರಳಿದ ಮೂವರು ಸೀತಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಶೈನು ನೀರಿಗಿಳಿಯುತ್ತಾ ಮುಂದಕ್ಕೆ ಸಾಗಿದ್ದಾರೆ. ಅವರು ಆಯತಪ್ಪಿದ್ದನ್ನ ನೋಡಿದ ದೀಪಕ್ ನೀರಿಗೆ ಹಾರಿದ್ದಾರೆ. ಇಬ್ಬರು ಸಹ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಇದನ್ನ ಗಮನಿಸಿದ ವಿನ್ಸೆಂಟ್ ಕೂಡ ನೀರಿಗೆ ಹಾರಿದ್ದು, ಅವರಿಗೂ ಈಜು ಬರುತ್ತಿರಲಿಲ್ಲ. ಕೊನೆಗೆ ಮರದ ಬೇರು ಹಿಡಿದು ಜೀವ ಉಳಿಸಿಕೊಮಡಿದ್ದಾರೆ ಎನ್ನಲಾಗಿದೆ. 

ಘಟನೆ ಸಂಬಂಧ ಹೆಬ್ರಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 

Share This Article