ನುಗ್ಗೆಕಾಯಿ ವಿಚಾರಕ್ಕೆ ಕಿರಿಕ್/ ಆನಂದಪುರ ಸಮೀಪ ಕಾರು ಪಲ್ಟಿ/ ಮೊಮ್ಮಗನ ವಿರುದ್ದ ಅಜ್ಜಿ ದೂರು,ನೆರವಾದ ಪೊಲೀಸ್

Kirik over drumstick, Car overturns near Anandpur, Grandmother complains against grandson

ನುಗ್ಗೆಕಾಯಿ ವಿಚಾರಕ್ಕೆ ಕಿರಿಕ್/ ಆನಂದಪುರ ಸಮೀಪ ಕಾರು ಪಲ್ಟಿ/ ಮೊಮ್ಮಗನ ವಿರುದ್ದ ಅಜ್ಜಿ ದೂರು,ನೆರವಾದ ಪೊಲೀಸ್
Kirik over drumstick, Car overturns near Anandpur, Grandmother complains against grandson

Shivamogga | Feb 11, 2024 |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ನ್ಯೂಟೌನ್ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ನುಗ್ಗೆಕಾಯಿ ಕೀಳುವ ವಿಚಾರಕ್ಕೆ ಜಗಳವಾದ ಬಗ್ಗೆ ವರದಿಯಾಗಿದೆ. ಬೆಳೆದ ನುಗ್ಗೆಕಾಯಿ ಕೀಳುವ ವಿಚಾರದಲ್ಲಿ ನೆರೆಹೊರೆಯವರ ನಡುವೆ ಜಗಳವಾಗಿದೆ. ವಿಷಯ ಪೊಲೀಸರಿಗೆ ಮುಟ್ಟಿದೆ. ತಕ್ಷಣ ಸ್ಥಳಕ್ಕೆ ಬಂದ 112 ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಇದೇ ವಿಚಾರವಾಗಿ ಪೊಲೀಸ್ ಸ್ಟೇಷನ್​ಗೆ ದೂರು ಕೊಡಲು ಒಂದು ಕಡೆಯವರು ತೆರಳಿದ್ದಾರೆ. ಇನ್ನೊಂದು ಪಾರ್ಟಿಯವರಿಗೂ ಸ್ಟೇಷನ್​ಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ. 

ಆನಂದಪುರದ ಬಳಿಯಲ್ಲಿ ಅಪಘಾತ

ಇನ್ನು ನಿನ್ನೆ ಆನಂದಪುರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬಗ್ಗೆ ವರದಿಯಾಗಿದೆ. ಅಪಘಾತವಾದ ರಭಸಕ್ಕೆ ಕಾರು ಉಲ್ಟಾ ಪಲ್ಟಿಯಾಗಿ ನಿಂತಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿದ್ದ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಹನವನ್ನ ಪೊಲೀಸ್ ಸ್ಟೇಷನ್​ಗೆ ಶಿಫ್ಟ್ ಮಾಡಿಸಿ ಪ್ರಕರಣ ದಾಖಲಿಸಿದ್ದಾರೆ. ಮಲೆನಾಡು ಟುಡೆ

ಮೊಮ್ಮಗ ಕುಡಿದು ಬರ್ತಾನೆಂದು ದೂರು ಕೊಟ್ಟ ಅಜ್ಜಿ

ಇತ್ತ ಹೊಳೆಹೊನ್ನೂರು ಪೊಲೀಸ್ ಸ್ಠೇಷನ್​ ಲಿಮಿಟ್ಸ್​ ನಲ್ಲಿ ಅಜ್ಜಿಯೊಬ್ಬರು ತಮ್ಮ ಮೊಮ್ಮಗ ಕುಡಿದು ಬಂದು ಗಲಾಟೆ ಮಾಡುತ್ತಾನೆ ಎಂದು ಪೊಲೀಸರ ಬಳಿ ಅಸಹಾಯಕವಾಗಿ ದೂರು ಹೇಳಿಕೊಂಡ ಘಟನೆ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಅಜ್ಜಿಯ ಬೆಂಬಲಕ್ಕಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಅಜ್ಜಿಯ ಮೊಮ್ಮಗನಿಗೆ ತಿಳುವಳಿಕೆ ಹೇಳಿದ್ದಾರೆ. ಅಲ್ಲದೆ ಮತ್ತೆ ಕಿರಿಕ್ ಮಾಡಿದರೆ, ಬಂದು ದೂರು ಹೇಳುವಂತೆ ಅಜ್ಜಿಗೆ ತಿಳಿಸಿ ಮೊಮ್ಮಗನಿಗೆ ಎಚ್ಚರಿಕೆ ನೀಡಿದ್ದಾರೆ.