ಕಿಮ್ಮನೆ ರತ್ನಾಕರ್​, ಆರ್​.ಎಂ. ಮಂಜುನಾಥ್ ಗೌಡ ಇಬ್ಬರು ವಿಧಾನಸೌಧಕ್ಕೆ ! ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿನ ಒಡಕಿಗೆ ಡಿಕೆಶಿ ಟಾನಿಕ್

ಪ್ರಜಾಧ್ವನಿ ಬಸ್ ಯಾತ್ರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ಗೂ (congress) ಹೊಸ ಹುರಪ್ಪನ್ನ ನೀಡಿದೆ. ಅದರಲ್ಲಿಯು ನಿನ್ನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ (thitrthahalli) ತಾಲ್ಲೂಕಿನಲ್ಲಿ ಅಚ್ಚುಕಟ್ಟಾಗಿ ನಡೆದ ಕಾಂಗ್ರೆಸ್​ನ ಈ ಯಾತ್ರೆ ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದ್ದಷ್ಟೆ ಅಲ್ಲದೆ ಒಂದು ಮಟ್ಟಿನ ಒಡಕಿಗೆ ಟಾನಿಕ್ ಆಯ್ತು. ತೀರ್ಥಹಳ್ಳಿಯ ನಾಯಕರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್ ಗೌಡರ ನಡುವಿನ ಭಿನ್ನಮತ ಇತ್ಯರ್ಥವಾಗುವುದು ಕಷ್ಟಸಾಧ್ಯ ಎಂಬಂತಾಗಿತ್ತು. ಅದರಲ್ಲಿಯು ಇತ್ತೀಚೆಗೆ ನಡೆದ ಕಾಂಗ್ರೆಸ್ ಜಿಲ್ಲಾದ್ಯಕ್ಷ ಹೆಚ್​.ಸುಂದರೇಶ್, ನಡೆಸಿದ ಸಂಧಾನದ ಹಾಗೂ ಸುದ್ದಿಗೋಷ್ಟಿಯಲ್ಲಿಯೇ ಕಾರ್ಯಕರ್ತರು ಕಚ್ಚಾಡಿಕೊಂಡಿದ್ದರು. 

#SAVEVISL ವಿಐಎಸ್​ಎಲ್ ಕಾರ್ಖಾನೆ ಬಗ್ಗೆ ಫೆಬ್ರವರಿ 27 ರ ಒಳಗೆ ರಾಜ್ಯ ಸರ್ಕಾರದ ನಿರ್ಧಾರ? ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ಧೇನು!?

ಆದರೆ ನಿನ್ನೆ ತೀರ್ಥಹಳ್ಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಬ್ಬರು ನಾಯಕರನ್ನ ವಿಧಾನಸೌಧದಲ್ಲಿ ಕೂರಿಸುವ ಮಾತನಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಡಿಕೆಶಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಡಾ.ಆರ್.ಎಂ. ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ಇಬ್ಬರ ಹೆಸರು ಇದೆ. ನಾವು ಇಬ್ಬರಿಗೂ ವಿಧಾನಸೌಧದಲ್ಲಿ ಕೂರಿಸುತ್ತೆವೆ. ಈ ಬಗ್ಗೆ ತೀರ್ಥಹಳ್ಳಿ ಜನರಿಗೆ ಅನುಮಾನ ಬೇಡ. ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದ್ರು. ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್ ನಾಯಕ ಅಭ್ಯರ್ಥಿಯಾರು ಎನ್ನುವುದನ್ನ ಸ್ಪಷ್ಟಪಡಿಸಲ್ಲವಾದರೂ, ಇಬ್ಬರನ್ನು ವಿಧಾನಸೌಧದಲ್ಲಿ ಕೂರಿಸುವ ಮಾತನಾಡಿದ್ದು, ಕುತೂಹಲ ಮೂಡಿಸಿದೆ. 

ಬೈಕ್​ನಲ್ಲಿ ಹೋಗುವಾಗ ಸೀರೆ ಜಾಗ್ರತೆ! ನೆರಿಗೆ ಚಕ್ರಕ್ಕೆ ಸಿಲುಕಿ ಏನಾಯ್ತು ನೋಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು