ಆರ್​.ಎಂ.ಮಂಜುನಾಥ್​ ಗೌಡರ ಬಗ್ಗೆ ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ , ಆಯನೂರು ಮಂಜುನಾಥ್ ಹೇಳಿದ್ದೇನು? ನಾಲ್ಕು ಮಾತು!

Malenadu Today

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS

Shivamogga |  ಹಿರಿಯ ಸಹಕಾರಿ ಧುರೀಣ ಹಾಗೂ ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕ ಆರ್. ಎಂ. ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ( ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ) ನೂತನ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಸಹಕಾರಿ ವೇದಿಕೆ ಮೂಲಕ ಅವರ ಅಭಿಮಾನಿಗಳು ಸೋಮವಾರ ತೀರ್ಥಹಳ್ಳಿಯಲ್ಲಿ  ತೌರೂರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಗೋಪಾಲ ಕೃಷ್ಣ ಬೇಳೂರು, ಮಾಜಿ ಸಂಸದ ಹಾಗೂ ಕೆಪಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡರಿಗೆ ಅವರ ಅಭಿಮಾನಿಗಳು ಅಭಿನಂದಿಸಿ, ತೌರೂರ ಸನ್ಮಾನ ನೀಡಿ ಗೌರವಿಸಿದರು.

ಸನ್ಯಾಸಿದ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಆರ್.ಎಂ. ಮಂಜುನಾಥ ಗೌಡರನ್ನು ಸಹಕಾರ ಕ್ಷೇತ್ರದಿಂದಲೇ ಮುಗಿಸಿಬಿಡಬೇಕು ಎಂಬ ಹುನ್ನಾರಗಳೆಲ್ಲ ಈಗ ಮುಗಿದುಹೋಗಿವೆ. ಅವರು ಮತ್ತಷ್ಟು ಗಟ್ಟಿಯಾಗಿ ದ್ದಾರೆ. ಸಹಕಾರ ಕ್ಷೇತ್ರವನ್ನು ದಶಕಗಳ ಕಾಲ ಕಟ್ಟಿ ಬೆಳೆಸಿ ರೈತರ, ಬಡವರ ಪರವಾಗಿ ನಿಂತವರು. ಖಾಸಗಿ ಸಂಸ್ಥೆಗಳ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿದ್ದ ರೈತರನ್ನು ಸಹಕಾರ ಕ್ಷೇತ್ರದ ಮೂಲಕ ಉಳಿಸಿಕೊಂಡವರು ಎಂದು ಬಣ್ಣಿಸಿದರು.

ಮಾಜಿ ಸಂಸದ ಹಾಗೂ ಕೆಪಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಂಜುನಾಥ ಗೌಡರ ಅಧ್ಯಾಯ ಮುಗಿದೇ ಹೋಯಿತು. ಎನ್ನುವ ಹಂತದಿಂದ ಮೇಲೆ ಎದ್ದು ಬಂದವರು ಮಂಜುನಾಥ ಗೌಡರು. ಅವರುಸವಾಲುಗಳನ್ನು ಸ್ವೀಕರಿಸಿದವರು. ಕಷ್ಟಗಳನ್ನು ಅರಗಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಮೂಡಿಸಿದವರು. ತೀರ್ಥಹಳ್ಳಿ ಹೇಳಿಕೇಳಿ ಬುದ್ದಿವಂತರ ರಾಜಕೀಯ ಕ್ಷೇತ್ರ, ಅಂತಹ ಕ್ಷೇತ್ರದಲ್ಲಿ ವರ್ಣರಂಜಿತ ರಾಜಕಾರಣಿಯಾಗಿ ಕಾಣಿಸಿಕೊಂಡವರು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಈ ಹಿಂದೆ ಆರ್. ಎಂ. ಮಂಜುನಾಥ ಗೌಡರನ್ನು ನಾನು ವಿರೋಧಿಸುವ ವೇಳೆ ನೇರವಾಗಿ ವಿರೋಧಿಸಿರುವೆ. ಆದರೆ ಅವರ ಸಂಕಷ್ಟದ ಕಾಲದಲ್ಲಿ ಬೆನ್ನಿಗೆ ಚೂರಿಗೆ ಹಾಕುವ ಕೆಲಸ ನಾನು ಮಾಡಿಲ್ಲ. ನಾನು ಹೆಚ್ಚಾಗಿ ವಿರೋಧಿಸಿರುವುದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರನ್ನು. ಹಾಗಂತ ಅವರ ವಿರುದ್ಧದ ವಿರೋಧಗಳು ವ್ಯಕ್ತಿಗತದ್ದಲ್ಲ, ಅವು ಅವರ ವಿರುದ್ಧ ತಾತ್ವಿಕ ವಿರೋಧಗಳು ಮಾತ್ರ ಎಂದರು. 


Share This Article