ಕಾರ್ತಿಕ ಪೌರ್ಣಿಮೆ: ನವೆಂಬರ್ 5 2025ರ ದ್ವಾದಶ ರಾಶಿಗಳ ಅದೃಷ್ಟ ಮತ್ತು ಪಂಚಾಂಗ ಫಲ

ajjimane ganesh

Karthika Pournami /ನವೆಂಬರ್, 05, 2025 ರ ಮಲೆನಾಡು ಟುಡೆ ಸುದ್ದಿ :  ಕಾರ್ತಿಕ ಮಾಸದ ಕಾರ್ತಿಕ ಹುಣ್ಣಿಮೆಯ ದಿನ ಇವತ್ತು. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಅಶ್ವಿನಿ ನಕ್ಷತ್ರದ ಇವತ್ತಿನದ ದಿನದಲ್ಲಿ ಅಮೃತ ಘಳಿಗೆ ಮಧ್ಯಾಹ್ನ 4.10 ರಿಂದ 5.41 ರವರೆಗೆ ಇರಲಿದೆ. ರಾಹು ಕಾಲವು ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರುತ್ತದೆ ಮತ್ತು ಯಮಗಂಡ ಕಾಲವೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರುತ್ತದೆ.

Todays Rashi Bhavishya November 5 2025: Karthika Pournami Panchanga and Horoscope for 12 Signs
Todays Rashi Bhavishya November 5 2025: Karthika Pournami Panchanga and Horoscope for 12 Signs

Karthika Pournami / ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ :  ಹೊಸ ವಿಷಯ ತಿಳಿದುಬರುವ ಸಾಧ್ಯತೆ ಇದೆ. ಪ್ರತಿಭೆಯು ಬೆಳಕಿಗೆ ಬರುವುದು, ಖ್ಯಾತಿಯು ಹೆಚ್ಚಾಗುತ್ತದೆ.  ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಹೊಸ ಸುದ್ದಿ ಕೇಳಿಬರಲಿದೆ. 

- Advertisement -

ವೃಷಭ : ಆದಾಯಕ್ಕೆ ಮೀರಿದ ಖರ್ಚು. ಸಂಬಂಧಿಕರೊಂದಿಗೆ ಅನಗತ್ಯ ಜಗಳ. ಆಲೋಚನೆಗಳಲ್ಲಿ ಗೊಂದಲ, ದೀರ್ಘ ಪ್ರಯಾಣ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಅಡೆತಡೆ 

ಮಿಥುನ : ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಆಸ್ತಿ ಸಂಬಂಧಿತ ವಿವಾದ ಪರಿಹಾರಗೊಳ್ಳುತ್ತವೆ. ಶುಭ ಕಾರ್ಯ. ಹೊಸ ಜನರ ಪರಿಚಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಎದುರಾಗಿದ್ದ ಒತ್ತಡ ನಿವಾರಣೆ. 

ಕರ್ಕಾಟಕ : ಕುಟುಂಬದಲ್ಲಿ ಮಂಗಳ ಕಾರ್ಯ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಭೂಮಿ ಮತ್ತು ವಾಹನ ಖರೀದಿ ಯೋಗವಿದೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಸ್ಪಷ್ಟ ಪ್ರಗತಿ 

Karthika Pournami : ಸಿಂಹ : ಸಾಲದ ಪ್ರಯತ್ನಗಳಿಗೆ ಹೆಚ್ಚು ಒತ್ತು ಕೊಡಬೇಡಿ, ದೇವಾಲಯಗಳಿಗೆ ಭೇಟಿ. ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆ,  ವ್ಯವಹಾರ ಸ್ವಲ್ಪ ನಿಧಾನವಾಗಬಹುದು. ಕೆಲಸದಲ್ಲಿ ಕೆಲಸದ ಹೊರೆ ಹೆಚ್ಚುತ್ತದೆ 

Todays Rashi Bhavishya November 5 2025: Karthika Pournami Panchanga and Horoscope for 12 Signs
Todays Rashi Bhavishya November 5 2025: Karthika Pournami Panchanga and Horoscope for 12 Signs

ಕನ್ಯಾ : ದೂರದ ಪ್ರಯಾಣ. ಚಿಂತೆ ಹೆಚ್ಚಾಗಬಹುದು. ಕೆಲವು ಕೆಲಸಗಳಲ್ಲಿ ಅಡೆತಡೆ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.. ವ್ಯವಹಾರದಲ್ಲಿ ಕೆಲವು ಸಮಸ್ಯೆಗಳಿದ್ದು, ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿ ಹೆಗಲಿಗೆ ಬೀಳುತ್ತವೆ. 

ತುಲಾ : ಉದ್ಯೋಗ ಅಥವಾ ಇತರೆ ಅವಕಾಶ ಹುಡುಕಿಬರುವುದು. ವ್ಯವಹಾರದಲ್ಲಿ ಯಶಸ್ಸು. ಪ್ರೀತಿಪಾತ್ರರ ಸಲಹೆ ಸ್ವೀಕರಿಸಿ. ಆಸ್ತಿ ಲಾಭ. ಅನುಕೂಲಕರ ವಾತಾವರಣ ಮತ್ತು ಉದ್ಯೋಗದಲ್ಲಿ ಖುಷಿಯ ದಿನ ಕಾಣುವಿರಿ,

ವೃಶ್ಚಿಕ : ಮನರಂಜನೆಯಲ್ಲಿ ಭಾಗಿಯಾಗುವಿರಿ. ಕೈಗೊಂಡ ಕೆಲಸ ಯಶಸ್ವಿಯಾಗಿ ಮುಂದುವರಿಯುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬೆಳವಣಿಗೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರೋತ್ಸಾಹ

ಧನು : ಕೈಗೊಂಡ ಕೆಲಸಗಳಲ್ಲಿ ಅಡಚಣೆ. ಆದಾಯಕ್ಕಿಂತ ಹೆಚ್ಚಿನ ಖರ್ಚು. ಸಂಬಂಧಿಕರೊಂದಿಗೆ ಸಣ್ಣಪುಟ್ಟ ಜಗಳ. ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಣ್ಣಪುಟ್ಟ ಕಿರಿಕಿರಿ

ಮಕರ : ಆಸ್ತಿ ವಿವಾದ. ಹಣಕಾಸಿನ ವ್ಯವಹಾರದಲ್ಲಿ ಏರಿಳಿತ. ಹಠಾತ್ ಪ್ರಯಾಣ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಡೆತಡೆ, ಅನಾರೋಗ್ಯ ಸಮಸ್ಯೆ ಕಾಡಬಹುದು. 

Todays Rashi Bhavishya November 5 2025: Karthika Pournami Panchanga and Horoscope for 12 Signs
Todays Rashi Bhavishya November 5 2025: Karthika Pournami Panchanga and Horoscope for 12 Signs

ಕುಂಭ :ಹೊಸ ಶೈಕ್ಷಣಿಕ ಅವಕಾಶ ನಿಮ್ಮನ್ನು ಹುಡುಕಿ ಬರುತ್ತವೆ. ಮನರಂಜನೆಯಲ್ಲಿ ಭಾಗಿಯಾಗುವಿರಿ. ಕಠಿಣ ಪರಿಶ್ರಮದಲ್ಲಿ ಯಶಸ್ಸು ಸಿಗುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ  ತೃಪ್ತಿಕರ. 

ಮೀನ : ಅನಿರೀಕ್ಷಿತ ಪ್ರಯಾಣ. ಸಂಬಂಧಿಕರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಕೆಲಸದಲ್ಲಿ ವಿಳಂಬ. ಆರೋಗ್ಯ ಸಮಸ್ಯೆ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸವಾಲು ಎದುರಾಗುವ ಸಾಧ್ಯತೆ ಇದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Todays Rashi Bhavishya November 5 2025: Karthika Pournami Panchanga and Horoscope for 12 Signs

Share This Article