karnataka state police 11-06-25 : ಪೊಲೀಸ್​ ಇಲಾಖೆಯಿಂದ ಡ್ರಗ್​ ಫ್ರೀ ಕರ್ನಾಟಕ ಆ್ಯಪ್​ ಲಾಂಚ್ | ಏನಿದರ ವಿಶೇಷತೆ

karnataka state police : ಪೊಲೀಸ್​ ಇಲಾಖೆಯಿಂದ ಡ್ರಗ್​ ಫ್ರೀ ಕರ್ನಾಟಕ ಆ್ಯಪ್​ ಲಾಂಚ್ | ಏನಿದರ ವಿಶೇಷತೆ

karnataka state police : ರಾಜ್ಯಾಧ್ಯಂತ ಅನೇಕ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆ ಪೊಲೀಸರು ಅನೇಕ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೂ ಸಹ ಇಂತಹ ಅನೈತಿಕ ಘಟನೆಗಳಿಗೆ ಕಡಿವಾಣ ಹಾಕವು ಕಷ್ಟಸಾಧ್ಯವಾಗಿದೆ. ಇದರ ನಡುವೆ   ಕರ್ನಾಟಕ ಪೊಲೀಸ್​ ಇಲಾಖೆಯು ಇದೀಗ ಡ್ರಗ್​ ಫ್ರೀ ಕರ್ನಾಟಕ ಎಂಬ ಆ್ಯಪ್​ ಅಭಿವೃದ್ದಿ ಪಡಿಸಿ ಲಾಂಚ್​ ಮಾಡಿದೆ. ಈ ಆ್ಯಪ್​ನ ಮೂಲಕ ಸಾರ್ವಜನಿಕರು   ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳ  ಬಗ್ಗೆ ಗೌಪ್ಯವಾಗಿ  ದೂರನ್ನು ನೀಡಬಹುದಾಗಿದೆ.

ಗೂಗಲ್​ ಪ್ಲೇಸ್ಟೋರ್​ಗೆ ಹೋಗಿ ಡ್ರಗ್​  ಫ್ರೀ ಕರ್ನಾಟಕ ಎಂದು ಸರ್ಚ್​ ಮಾಡಿದರೆ ಆ್ಯಪ್​ ಸಿಗುತ್ತದೆ. ನಂತರ ಅದನ್ನು ಡೌನ್ಲೋಡ್​ ಮಾಡಿ ಸಾರ್ವಜನಿಕರು ತಮ್ಮ ಸುತ್ತಮುತ್ತಲು ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಅದರಲ್ಲಿ ದೂರನ್ನು ನೀಡಬಹುದು. ದೂರನ್ನು ಪರಿಶೀಲಿಸಿದ ಪೊಲೀಸರು ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು, ವ್ಯಸನ ಮುಕ್ತ ಚಿಕಿತ್ಸೆ ನೀಡುವ ಕಾರ್ಯವನ್ನ ಮಾಡುತ್ತಾರೆ. ಸಾರ್ವಜನಿಕರು ನೀಡಿರುವ ಮಾಹಿತಿಯನ್ನು ಪೊಲೀಸ್​ ಇಲಾಖೆ ಗೌಪ್ಯವಾಗಿ ಇಡಲಿದೆ.

 

 

Leave a Comment