ಕಾಂತಾರ ಚಿತ್ರತಂಡ ಚಿತ್ರೀಕರಣಕ್ಕೆ ಅನುಮತಿ ಪಡೆದಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಇಂದು ಹೊಸನಗರ ತಹಶೀಲ್ದಾರ್ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಹೇಳಿದ್ದಾರೆ
ಜೂನ್ 15 ರಂದು ಶಿವಮೊಗ್ಗ ಜಿಲ್ಲೆ ಮಾಣಿ ಡ್ಯಾಂ ಹಿನ್ನೀರಿನಲ್ಲಿನ ನಿರ್ಬಂಧಿತ ವಲಯದಲ್ಲಿ ಕಾಂತಾರ 1 ಶೂಟಿಂಗ್ ನಡೆಯುತ್ತಿತ್ತು. ಆ ವೇಳೆ ದೋಣಿ ಮಗುಚಿ ಬಿದ್ದು ಸುಮಾರು 30 ಜನ ನೀರಿಗೆ ಬಿದ್ದಿದ್ದರು ಎನ್ನಲಾಗಿತ್ತು. ಇದರಿಂದಾಗ ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಕಾಂತಾರ ಚಿತ್ರತಂಡ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಕುರಿತು ಕಾಂತಾರ ಸಿನಿಮಾ ತಂಡಕ್ಕೆ ನೋಟಿಸ್ ನೀಡಿದ್ದರು.
kanthara 1 shooting :ಈ ಕುರಿತು ಇಂದು ಮಾಧ್ಯಮದವರಿಗೆ ಮಾಹಿತಿ ನೀಡಿದ ಆವರು ಜೂನ್ 15 ರಂದು ಈಗಾಗಲೇ ಸ್ಥಳಕ್ಕೆ ಸ್ಥಳೀಯ ಇನ್ಸ್ಪೆಕ್ಟರ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅವಘಡದ ಬಗ್ಗೆ ಕಾಂತಾರ ಸಿನಿಮಾದ ಪೊಡಕ್ಷನ್ ಟೀಮ್ ಕೂಡ ಮಾಹಿತಿ ನೀಡಿದೆ. ಚಿತ್ರೀಕರಣದ ವೇಳೆ ದೋಣಿ ಪಲ್ಟಿಯಾಗಿಲ್ಲ.. ಚಿತ್ರೀಕರಣಕ್ಕೆ ಹಾಕಿದ್ದ ಸೆಟ್ ಬಿದ್ದಿದಾಗಿ ಮಾಹಿತಿ ನೀಡಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆದ ಬಗ್ಗೆಯೂ ತಿಳಿಸಿದ್ದಾರೆ. ಆದರೇ, ತಂಡ ಅನುಮತಿ ಪಡೆದ ಸಂಬಂಧ ಮಾಹಿತಿ ನೀಡಲು ಹೊಸನಗರ ತಹಶೀಲ್ದಾರ್ ನೋಟಿಸ್ ಕೊಡ್ತಿದ್ದೇವೆ. ಇಂದು ತಹಶೀಲ್ದಾರ್ ಅದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

kanthara 1 shooting : ಮುಂಜಾಗೃತ ಕ್ರಮ ಕೈಗೊಂಡು ಚಿತ್ರೀಕರಣ ಮಾಡಲಿ
ಹಾಗೆಯೇ ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮವನ್ನ ಕೂಡ ಅವಲಂಬಿಸಿದೆ.ಈ ರೀತಿ ಚಿತ್ರೀಕರಣ ಆದಾಗ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಅನುಕೂಲ ಆಗುತ್ತೇ.ಆದರೇ ನಾವು ಬಯಸೋದು ಯಾವುದೇ ಅವಘಡ ಆಗಬಾರದು ಅನ್ನೋದಷ್ಟೇ.ಮುಂಜಾಗ್ರತಾ ಕ್ರಮಕೈಗೊಂಡು ಚಿತ್ರೀಕರಣ ಮಾಡಲಿ ಎಂದರು.