ಶಿವಮೊಗ್ಗದಲ್ಲಿಯೇ ತೆರೆಯಲಿದೆ ಕಂಠೀರವ ಸ್ಟುಡಿಯೋ! ಬೇಗ ಬರಲಿದೆ ಸರ್ಕಾರಿ OTT, ಫಿಲ್ಮ್​ ಸಿಟಿ

ajjimane ganesh

ನವೆಂಬರ್ 24,  2025 : ಮಲೆನಾಡು ಟುಡೆ :  ಇನ್ನುಂದೆ ಶಿವಮೊಗ್ಗದಲ್ಲಿಯು ಸಿನಿಮೂ ಶೂಟಿಂಗ್​ಗೆ ಹೆಚ್ಚು ಅವಕಾಶ ಸಿಗಬಹುದು ಏಕೆಂದರೆ ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೊ ಸ್ಥಾಪನೆಯಾಗಲಿದೆ. ಹೌದು ಅದರ ಕುರಿತಾಗಿಯೇ ಈ ಸುದ್ದಿ.

Kanteerava Studio in Shivamogga
Kanteerava Studio in Shivamogga ,ಕಂಠೀರವ ಸ್ಟುಡಿಯೊ ನಿರ್ಮಾಣದ ಕುರಿತಾಗಿ ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷ ಮೆಹಬೂಬ್ ಭಾಷಾ ಸುದ್ದಿಗೋಷ್ಟಿ ನಡೆಸ್ತಿರುವುದು

ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೊ ನಿರ್ಮಾಣಕ್ಕೆ ಸಿದ್ಧತೆ

ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಾಧುನಿಕವಾದ ಕಂಠೀರವ ಸ್ಟುಡಿಯೊವನ್ನು ನಿರ್ಮಾಣ ಮಾಡಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಅಂತಾ ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷರಾದ ಮೆಹಬೂಬ್ ಭಾಷಾ ನಿನ್ನೆ ದಿನ ತಿಳಿಸಿದ್ದಾರೆ. ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ಅವರು, ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಕಂಠೀರವ ಸ್ಟುಡಿಯೊವನ್ನು ನಿರ್ಮಿಸಲು ಯೋಜನೆಯನ್ನ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 

25 ಎಕರೆ ಭೂಮಿ ಮಂಜೂರಾತಿಗೆ ಮನವಿ

ತಮ್ಮ ಮಾತನ್ನು ಮುಂದುವರಿಸಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಕಂಠೀರವ ಸ್ಟುಡಿಯೊಗಳನ್ನು ವಿಸ್ತರಣೆ ಮಾಡುವ ಮಹತ್ವದ ಉದ್ದೇಶ ನಿಗಮಕ್ಕಿದೆ. ಪೂರಕವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸ್ಟುಡಿಯೊ ಸ್ಥಾಪನೆಗೆ ಬಹಳಷ್ಟು ಬೇಡಿಕೆ ಬಂದಿವೆ.  ಈ ಪೈಕಿ, ಶಿವಮೊಗ್ಗ ನಗರವನ್ನು ಕಂಠೀರವ ಸ್ಟುಡಿಯೋ ಸ್ಥಾಪನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಈ  ಸ್ಟುಡಿಯೊ ನಿರ್ಮಾಣಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ರಾಜ್ಯ ಅಥವಾ ಜಿಲ್ಲಾ ಹೆದ್ದಾರಿ ಪಕ್ಕದಲ್ಲಿ ಸುಮಾರು 25 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಕೋರಲಾಗಿದೆ ಅಂತಾ ಮೆಹಬೂಬ್ ಭಾಷಾ ವಿವರ ನೀಡಿದರು.

ಉದ್ಯೋಗ ಸೃಷ್ಟಿ, ಪ್ರತಿಭೆಗಳಿಗೆ ಪ್ರೋತ್ಸಾಹ

ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೊ ನಿರ್ಮಾಣವಾದರೆ, ಇಲ್ಲಿ ನಡೆಯುವ ಹೊರಾಂಗಣ ಮತ್ತು ಒಳಾಂಗಣ ಚಲನಚಿತ್ರ ಚಿತ್ರೀಕರಣಗಳಿಗೆ ಅನುಕೂಲವಾಗಲಿದೆ. ಅಲ್ಲದೆ  ಇದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ಸಿಗಲಿದೆ. ಮೇಲಾಗಿ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞಾನ ಸಿಬ್ಬಂದಿ ಸೇರಿದಂತೆ ಹಲವರಿಗೆ ಉದ್ಯೋಗ ಹಾಗೂ ವ್ಯಾಪಾರದ ಅವಕಾಶ ಸಿಗಲಿದೆ ಎಂದು ವಿವರಿಸಿದರು,. 

ಶಿವಮೊಗ್ಗ ನಗರವನ್ನು ಹೊರತುಪಡಿಸಿ, ಮಧ್ಯ ಕರ್ನಾಟಕ ವಲಯದ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಹೊಸದಾಗಿ ರೂಪುಗೊಂಡ ವಿಜಯನಗರ ಜಿಲ್ಲೆಗಳಲ್ಲೂ ಸ್ಟುಡಿಯೊಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದೆ ಎಂದ ಮೆಹಬೂಬ್ ಪಾಷಾ, ಇದಕ್ಕಾಗಿ ಸರ್ಕಾರ  ಬಜೆಟ್‌ನಲ್ಲಿ 5 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದೆ ಎಂದರು 

Kanteerava Studio in Shivamogga
Kanteerava Studio in Shivamogga

ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲಿ ಮೈಸೂರಿನಲ್ಲಿ ಫಿಲ್ಮ್‌ ಸಿಟಿ/ Kanteerava Studio in Shivamogga

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲೇ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮೈಸೂರಿನಲ್ಲಿ ಭವ್ಯವಾದ ಫಿಲ್ಮ್‌ ಸಿಟಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಸುಮಾರು 160 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಫಿಲ್ಮ್‌ ಸಿಟಿ ರೂಪುಗೊಳ್ಳಲಿದೆ ಎಂದು ಮೆಹಬೂಬ್​ ಪಾಷಾ ತಿಳಿಸಿದ್ದಾರೆ.  

ಕನ್ನಡ ಓಟಿಟಿ ಆರಂಭಕ್ಕೆ ರಾಜ್ಯ ಸರ್ಕಾರದ ಬೆಂಬಲ/ Kanteerava Studio in Shivamogga

ಇನ್ನೂ ಸದ್ಯದಲ್ಲಿಯೇ ಕನ್ನಡದಲ್ಲಿ ಓಟಿಟಿ  ಪ್ರಾರಂಭಿಸುವ ಬಗ್ಗೆ ನಿಗಮದಿಂದ ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಈ ಯೋಜನೆ ಜಾರಿಗೆ ಬಂದರೆ ಸಾಕಷ್ಟು ಅನುಕೂಲವಾಗಲಿದೆ ಎಂದರು.  

Kanteerava Studio in Shivamogga
Kanteerava Studio in Shivamogga

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Kanteerava Studio in Shivamogga: 25 Acres Land Request and Update on Kannada OTT – Mehaboob Basha

Share This Article