kannada movie review ಇತ್ತೀಚಿನ ವರ್ಷದಲ್ಲಿ ಕನ್ನಡದಲ್ಲಿ ತೆರೆಕಂಡ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳು ಸಾಲು ಸಾಲಾಗಿ ನೆಲಕಚ್ಚಿವೆ. ಇದಕ್ಕೆ ಕಾರಣ ಸರಿಯಾಗಿ ಸಿನಿಮಾ ನಿರ್ಮಾಣ ಮಾಡಲು ಇಲ್ಲದ ಪೂರ್ವ ತಯಾರಿ ಹಾಗು ಸಿನಿಮಾ ಕಥೆಗೆ ಜೀವಕಟ್ಟಿಕೊಡುವಲ್ಲಿ ವಿಫಲನಾಗುತ್ತಿರುವ ನಿರ್ದೇಶಕ.
ಈಗ ಶೃಜನಶೀಲವಾಗಿ ಸಿನಿಮಾ ಮಾಡುವ ಕಥೆಗಾರರು, ನಿರ್ದೇಶಕರು ನಿರ್ಮಾಪಕರಿಗೆ ತರಬೇತಿ ನೀಡಬೇಕು ಎಂದು ಇತ್ತೀಚೆಗೆ ಪ್ರಜಾವಾಣಿ ನಡೆಸಿದ ಸಂವಾದದಲ್ಲಿ ಕೆಲ ಹಿರಿಯ ನಿರ್ದೆಶಕರು ಅಬಿಪ್ರಾಯ ವ್ಯಕ್ತಪಡಿಸಿದ್ದರು. ಕಥಾ ನಾಯಕನಾಗಬೇಕೆಂದರೆ ಸಿಕ್ಸ್ ಪ್ಯಾಕ್ ಬಾಡಿ ಇರಬೇಕು, ಆರು ಅಡಿ ಎತ್ತರವಿರಬೇಕು..ನಾಯಕ ನಟನಿಗಾಗಿಯೇ ಸ್ಕ್ರಿಪ್ಟ್ ಬರೆಯಬೇಕು. ಬಿಲ್ಡ್ ಅಪ್ ಸಾಂಗ್ ಹಾಕಬೇಕು ಎಂಬ ಮಾನದಂಡಗಳು ಕನ್ನಡ ಸಿನಿಮಾಗಳನ್ನು ನೆಲಕಚ್ಚುವಂತೆ ಮಾಡುತ್ತಿದೆ. ಇನ್ನು ಹೊಸ ಸಿನಿಮಾ ಮಾಡಬೇಕೆಂಬ ಉದ್ದೇಶದಿಂದ ಸಿನಿಮಾ ರಂಗ ಪ್ರವೇಶಿಸುವ ಯುವಕರಿಗೆ ತರಬೇತಿ ಕೊರತೆ ಎದ್ದು ಕಾಣುತ್ತಿದೆ. ಒಟ್ಟಾರೆ ಸಿನಿಮಾ ಮಾಡಿದರೆ ಮುಗಿಯಿತು, ಜನ ನೋಡುತ್ತಾರೆ ಎಂಬ ತಪ್ಪು ಅಭಿಪ್ರಾಯದಲ್ಲಿದ್ದಾರೆ.
kannada movie review : ಓಟಿಟಿ ವೀಕ್ಷಕರೆ ನಿರ್ಣಾಯಕ
ಇತ್ತಿಚ್ಚೆಗೆ ಓಟಿಟಿಯಲ್ಲಿ ಮಲಯಾಳಂ ತಮಿಳು ತೆಲುಗು ಸಿನಿಮಾಗಳು ಹೆಚ್ಚು ವಿಜೃಂಭಿಸುತ್ತಿವೆ. ಇದಕ್ಕೆ ಕಾರಣ ಗಟ್ಟಿಯಾದ ಕಥೆ, ನಮ್ಮ ಸುತ್ತಮುತ್ತಲೇ ನಡೆದಿರುವಂತ ನೈಜ ಕಥೆಯ ಭಾವುಕತೆ ನೋಡುಗರನ್ನು ಆಕರ್ಷಿಸುತ್ತದೆ. ಇಲ್ಲಿ ಕಥೆಯೇ ನಾಯಕ ಹೊರತು ನಾಯಕ ನಟನಲ್ಲ. ಪಾತ್ರಧಾರಿಗಳು ಕಥೆಗೆ ಜೀವ ತುಂಬುತ್ತಾರೆ.ಒಂದು ರೀತಿಯಲ್ಲಿ ನೈಜ ಕಾದಂಬರಿಯನ್ನೇ ಓದಿದ ಅನುಭವವಾಗುತ್ತದೆ.ಭಾವುಕತೆಗೆ ಇಲ್ಲಿ ಮೊದಲ ಸ್ಥಾನ.

ಮಲಯಾಳಂ ತಮಿಳು ಸಿನಿಮಾದ ಇತ್ತೀಚಿನ ನಟ ನಟಿಯರು ಸಿಕ್ಸ್ ಪ್ಯಾಕ್ ಬಾಡಿ ಉಳ್ಳವರಿಲ್ಲ. ವಿಶ್ವ ಸುಂದರಿ ಪ್ರಶಸ್ತಿ ಪಡೆದ ನಾಯಕಿಯರಿಲ್ಲ. ನೈಜವಾಗಿರೋ ಕಥಾ ಹಂದರವುಳ್ಳ ಚಿತ್ರಕಥೆಗೆ ಎಂತವರೂ ಜೀವ ತುಂಬಬಹುದು ಎಂಬುದಕ್ಕೆ ಈ ಭಾಷೆಯ ಸಿನಿಮಾಗಳು ಸಾಕ್ಷಿಯಾಗಿದೆ. ಇವುಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಹುದಾದ ಕನ್ನಡ ಸಿನಿಮಾ ಇದ್ದರೆ ಅದು ಇತ್ತೀಚೆಗೆ ತೆರೆಕಂಡ 19,20, 21 ಸಿನಿಮಾ.
ಮಲೆನಾಡಿನಲ್ಲಿ ನಕ್ಸಲಿಸಂ ಹೆಚ್ಚಾಗಿದ್ದ ಸಂದರ್ಭದಲ್ಲಿ ಆದಿವಾಸಿ ಯುವಕನೊಬ್ಬ ನಕ್ಸಲ್ ನಂಟಿನ ಆರೋಪ ಹೊತ್ತು,ತನ್ನ ಓದಿದಾಗಿ ಏನೆಲ್ಲಾ ಕಷ್ಟಪಡುತ್ತಾನೆ. ಆತನಿಗೆ ಪ್ರಭುತ್ವ ಹೇಗೆ ನ್ಯಾಯ ಓದಿಗಿಸುತ್ತದೆ ಎಂಬ ನೈಜ ಕಥೆಯುಳ್ಳ ಚಿತ್ರ ಇದಾಗಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ನೆಟಿವಿಟಿಗೆ ಹತ್ತಿರವಾಗುವಂತೆ ನಿರ್ದೇಶಕರು ಶ್ರಮಿಸಿರುವುದು ಚಿತ್ರದಲ್ಲಿ ಭಾಸವಾಗುತ್ತದೆ. ಈ ಸಿನಿಮಾದಲ್ಲಿ ಯಾವ ನಟರ ಹೆಸರು ಹೇಳುವುದು ಬೇಡ..ಈ ಸಿನಿಮಾದಲ್ಲಿ ನಾಯಕ ನಟನಾಗಿರುವ ಯುವಕನು ಹಳ್ಳಿಯವನೇ ಆಗಿದ್ದಾನೆ. ಎಲ್ಲರೂ ಕಥೆ ಗಟ್ಟಿತನಕ್ಕಾಗಿ ಪಾತ್ರಕ್ಕಾಗಿ ಜೀವ ತುಂಬಿದ್ದಾರೆ. ಮಲೆನಾಡಿನಲ್ಲಿ ನಕ್ಸಲಿಸಂ ಹೇಗಿತ್ತು. ಎ.ಎನ್.ಎಫ್ ಕೂಂಬಿಗ್, ರಾತ್ರಿ ಗಸ್ತು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಎ.ಎನ್,ಎಪ್ ನಿಂದ ಸ್ಥಳೀಯ ಆದಿವಾಸಿಗಳು ಅನುಭವಿಸುತ್ತಿದ್ದ ಅನ್ಯಾಯವನ್ನು ಕೂಡ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.
ಒಂದು ಶಿಕ್ಷಣ ವ್ಯವಸ್ಥೆಯನ್ನೇ ಹಕ್ಕನ್ನಾಗಿ ಕೂದಲೆಳೆಯಾಗಿಟ್ಟುಕೊಂಡು ಕಥೆ ಸಾಗುವುದೇ ಈ ಸಿನಿಮಾದ ರೋಚಕತೆ. ಮಂಜು ಎನ್ನುವ ಮಲೆಕೂಡಿಯ ಆದಿವಾಸಿ ಯುವಕನಿಗೆ ನಕ್ಸಲ್ ನಂಟಿದೆ ಎಂದು ಎ.ಎನ್.ಎಫ್ ಹಾಕುವ ಕೇಸಿನ ನಂತರ ಆತ ಓದನ್ನು ನಿಲ್ಲಿಸಬೇಕಾಗುತ್ತದೆ. ಆತನ ಮುಂದಿನ ವ್ಯಾಸಂಗಕ್ಕಾಗಿ ಪತ್ರಕರ್ತ ಹಾಗು ಪ್ರಗತಿಪರ ಸ್ನೇಹಿತರು ನಡೆಸುವ ಹೋರಾಟ. ಕೊನೆಗೆ ತಾರ್ಕಿಕ ಜಯ ಸಿಗುವವರೆಗೂ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.ಟೈಟ್ ಎಡಿಟಿಂಗ್ ಸಿನಿಮಾದ ಹೈಲೈಟ್ ಗಳಲ್ಲಿ ಒಂದು.
kannada movie review : ಹರಿತ ನ್ಯಾಯಲಾಯದ ವಾದ-ಪ್ರತಿವಾದ
ತಮಿಳು ಮಲಯಾಳಂ ತೆಲುಗು ಸಿನಿಮಾ ಮಾದರಿಯಲ್ಲಿ ಈ ಸಿನಿಮಾದಲ್ಲಿ ಕೂಡ ನ್ಯಾಯಾಲಯದ ವಾದ ಪ್ರತಿವಾದದ ಸನ್ನಿವೇಶಗಳನ್ನು ತೋರಿಸಲಾಗಿದೆ. ನೈಜವಾಗಿ ನ್ಯಾಯಲಯದಲ್ಲಿ ನಡೆದ ವಾದವನ್ನೇ ಸಿನಿಮಾದಲ್ಲಿ ಬಣ್ಣಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಹರಿತವಾದ ವಾದ ಪ್ರತಿವಾದಕ್ಕೆ ಆರ್ಟಿಕಲ್ 19, 20, 21 ಸಾಕ್ಷಿಯಾಗಿದೆ. ವಾಕ್ ಸ್ವಾತಂತ್ರ (Article 19), ಅಪರಾಧದ ತೀವೃತೆಗೆ ಅನುಗುಣವಾಗಿ ಶಿಕ್ಷೆ (Article 20) ಹಾಗು ತನ್ನ ಜೀವನ ಹಕ್ಕಿಗಾಗಿ ಹೋರಾಡುವ ಸ್ವಾತಂತ್ರ (Article 21) ವನ್ನು ಎತ್ತಿ ಹಿಡಿಯುವ ಸಿನಿಮಾವನ್ನು ಗಟ್ಟಿಯಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕ ಮಂಸೋರೆ ಯಶಸ್ವಿಯಾಗಿದ್ದಾರೆ.
kannada movie review ಯೂಟೂಬ್ ನಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಹೊಂದಿರುವ ಈ ಸಿನಿಮಾ ನೆಟ್ ಫ್ಲಿಕ್ಸ್ ಅಥವಾ ಅಮೇಜಾನ್ ಪ್ರೈಂ ನಲ್ಲಿ ವಿವಿಧ ಭಾಷೆಗಳಲ್ಲಿ ತೆರೆಕಂಡರೆ ಐಎಂಬಿಪಿಎಸ್ ರೇಟಿಂಗ್ ನಲ್ಲಿ ಟಾಪ್ ಟೆನ್ ವಲ್ಲಿ ಬಂದರೂ ಅಚ್ಚರಿಯಿಲ್ಲ..ದಯವಿಟ್ಟು ಇಂತಹ ಸಿನಿಮಾವನ್ನು ನೋಡಿ ಕನ್ನಡ ಸಿನಿಮಾವನ್ನು ಪ್ರೊತ್ಸಾಹಿಸಿ..ಇದು ಮಲೆನಾಡು ಟುಡೆ ಕಳಕಳಿ.