k s eshwarappa 0 : ರಾಜ್ಯ ಸರ್ಕಾರ ಧರ್ಮಕ್ಕೆ ಹಾಗೂ ಸಂವಿಧಾನಕ್ಕೆ ಅನ್ಯಾಯ ಮಾಡ್ತಿದೆ | ಕೆ ಎಸ್​ ಈಶ್ವರಪ್ಪ

prathapa thirthahalli
Prathapa thirthahalli - content producer

k s eshwarappa : ಕಾಂಗ್ರೆಸ್​ ಸರ್ಕಾರ ಧರ್ಮಕ್ಕೆ ಹಾಗೂ ಸಂವಿಧಾನಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.

ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ಸರ್ಕಾರ ತನ್ನ ಮನಸ್ಥಿತಿಯನ್ನು ಬಲಿಸಿಕೊಳ್ಳಬೇಕು ಇಲ್ಲದಿದ್ದರೆ ಅವರನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ 43 ಪ್ರಕರಣಗಳನ್ನು ವಾಪಸ್​ ಪಡೆದಿತ್ತು. ಆದರೆ ಹೈಕೋರ್ಟ್​ ಆ ಆದೇಶವನ್ನು ರದ್ದುಗೊಳಿಸಿದೆ.  ಒಂದು ಸರ್ಕಾರಕ್ಕೆ  ಸಂವಿಧಾನ ಹಾಗೂ ಕಾನೂನು ಬಾಹಿರ ಎಂದು ಕೋರ್ಟ್ ಛೀಮಾರಿ ಹಾಕಿದ್ದು ಇದೇ ಮೊದಲು ಎಂದರು.

- Advertisement -

ಮಂಗಳೂರಿನಲ್ಲಿ ನಡೆದ ಕೊಲೆ ಬಗ್ಗೆ ಕಾಂಗ್ರೆಸ್​ ನಾಯಕರು ಸ್ಫರ್ಧಾರ್ತ್ಮಕವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ.ಸುಹಾಸ್​ ಶೆಟ್ಟಿ ಕೊಲೆಯಾದಾಗ ನಾವು ರೌಡಿ ಶೀಟರ್​ ಮನೆಗೆ ಭೇಟಿ ನೀಡಬೇಕೆ ಎಂದು ಕೇಳಿದ್ದರು. ಆದರೆ ಈಗ ಮಂಗಳೂರಿನಲ್ಲಿ ಶಾಂತಿ ನೆಲೆಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

k s eshwarappa  : ಮಂಗಳೂರು ಕೊಲೆ ಹಿನ್ನೆಲೆ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ರಾಜಿನಾಮೆ ನೀಡುವಂತೆ ಮುಸಲ್ಮಾನರು ಆಗ್ರಹಿಸಿದ್ದಾರೆ.ಹಾಗಾಗಿ ಈಗ ಕಾಂಗ್ರೆಸ್​ ನಾಯಕರು ಮುಸಲ್ಮಾನರ ಹೆದರಿಕೆಯಿಂದ ರಾಜ್ಯದ ಜನರು ಶಾಂತಿ ಕಾಪಾಡಬೇಕೆಂದು ಹೇಳುತ್ತಿದ್ದಾರೆ.ಈ ಕಾಂಗ್ರೆಸ್ ಸರ್ಕಾರಕ್ಕೆ ಧರ್ಮ ದೇಶ ಯಾವುದೂ ಬೇಡ. ಮಂಗಳೂರು ಎಸ್.ಪಿ., ಕಮಿಷನರ್  ಯಾವ ಪುರುಷಾರ್ಥಕ್ಕೆ ಟ್ರಾನ್ಸ್ವರ್​ ಮಾಡಿದ್ದಾರೆ ಎಂದು ಗೊತ್ತಿಲ್ಲ. ಮೊದಲು ಇಂತಹ ಕೃತ್ಯಗಳನ್ನು ನಡೆಸುತ್ತಿರುವ ಮುಸಲ್ಮಾನ್ ವ್ಯಕ್ತಿಗಳನ್ನು  ಎತ್ತಂಗಡಿ  ಮಾಡಿ ಎಂದರು.

k s eshwarappa : ನಕ್ಸಲ್​ ನಿಗ್ರಹ ಪಡೆಗಳಿಗೆ ಸಂಬಳ ನಿಮ್ಮನೆಯಿಂದ ತಂದು ಕೊಡ್ತೀರಾ

ಸೂಕ್ಷ್ಮ ಪ್ರದೇಶಗಳಾಗಿರುವ ಮಂಗಳೂರು, ಉಡುಪಿ, ಶಿವಮೊಗ್ಗಕ್ಕೆ ವಿಶೇಷ ಪೊಲೀಸ್ ಪಡೆ ರಚಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಪೊಲೀಸ್ ಪಡೆಗೆ ಉನ್ನತ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳನ್ನು ನೇಮಿಸುವುದಾಗಿ ಹೇಳಿದ್ದಾರೆ. ಅವರಿಗೆ  ಸಂಬಳ ನಿಮ್ಮನೆಯಿಂದ ತಂದು ಕೊಡ್ತಿರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಕಾಂಗ್ರೆಸ್ ಗಲಭೆ ಸೃಷ್ಟಿಸುವ  ಕೇಂದ್ರವಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.   ಓಟ್ ಬ್ಯಾಂಕ್ ಗಾಗಿ ಹಿಂದು-ಮುಸಲ್ಮಾನರನ್ನು ಎತ್ತಿ ಕಟ್ಟುತ್ತಿದ್ದು ಕೇವಲ ಓಟಿಗಾಗಿ ರಾಜಕೀಯ ಮಾಡಿ ಗಲಭೆ ಸೃಷ್ಟಿಸಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ. ಈ ಸರ್ಕಾರ ಯಾವಾಗ ಪತನವಾಗುತ್ತೋ ಗೊತ್ತಿಲ್ಲ ಎಂದು ಅಭಿಪ್ರಾಯ ಪಟ್ಟರು.

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *