jyothi rani : ಪಾಕ್​ ಪರ ಗೂಡಾಚಾರ, ಯಾರಿದು ಯೂಟ್ಯೂಬರ್​ ಜ್ಯೋತಿ ರಾಣಿ 

prathapa thirthahalli
Prathapa thirthahalli - content producer

jyothi rani : ಜ್ಯೋತಿ ಮಲ್ಹೋತ್ರಾ ಅಲಿಯಾಸ್ ಈ ಜ್ಯೋತಿ ರಾಣಿ ಯಾರು? ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪ ಈಕೆ ಮೇಲೆ ಇದೆ. ಇದೇ ಕಾರಣಕ್ಕಾಗಿ ಭಾರತೀಯ ಯೂಟ್ಯೂಬರ್​ಳನ್ನು ಬಂಧಿಸಲಾಗಿದೆ. ಕಳೆದ ಶನಿವಾರ ಮಧ್ಯಾಹ್ನ ಹಿಸಾರ್ ಪೊಲೀಸರು  ಜ್ಯೋತಿ ರಾಣಿ ಎಂದೂ ಕರೆಯಲ್ಪಡುವ ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಿದ್ದಾರೆ. ಈ ಪ್ರಖ್ಯಾತ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್. ಸದ್ಯದ ಮಾಹಿತಿ ಪ್ರಕಾರ, ಈಕೆ ಪೆಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಗೂ ಮೊದಲೇ ಅಲ್ಲಿನ ಸ್ಥಿತಿಗತಿಗಳನ್ನು ಹಾಗೂ ಎಂಟ್ರಿ ಪಾಯಿಂಟ್​ಗಳನ್ನು ಯೂಟ್ಯೂಬ್​ನಲ್ಲಿ ವಿವರಿಸಿದ್ದಳು ಎನ್ನಲಾಗುತ್ತಿದೆ.  ಹಿಸಾರ್‌ನ ಅಗರ್ಸೆನ್ ಎಕ್ಸ್‌ಟೆನ್ಶನ್ ನಿವಾಸಿ ಜ್ಯೋತಿ ಮಲ್ಹೋತ್ರಾ ತಮ್ಮ ಟ್ರಾವೆಲ್​ ವ್ಕಾಗರ್​  ಚಾನೆಲ್ ಮೂಲಕ ಖ್ಯಾತಿಯನ್ನು ಗಳಿಸಿದ್ದರು. ಇದರ ಹೊರತಾಗಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. 

jyothi rani : ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕ

ಪಾಕಿಸ್ತಾನ ಹೈಕಮಿಷನ್‌ನಲ್ಲಿ ಅಧಿಕಾರಿಯಾಗಿರುವ ಡ್ಯಾನಿಶ್ ಅವರೊಂದಿಗಿನ ಸಂಪರ್ಕವು ತನಿಖೆಯ ಪ್ರಮುಖ ಕೇಂದ್ರಬಿಂದುವಾಗಿದೆ. ಮಲ್ಹೋತ್ರಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ಡ್ಯಾನಿಶ್ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ, ಅಲ್ಲಿ ಅವರು ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ  ಮಾಹಿತಿ ರವಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇಲಾಗಿ ಈಕೆ ತನ್ನ ಯೂಟ್ಯೂಬ್ ಚಾನೆಲ್ ಅನ್ನು ರಹಸ್ಯ ಕಾರ್ಯಾಚರಣೆಗಳನ್ನು ಕವರ್ ಮಾಡಲು ಬಳಸಿಕೊಳ್ಳಲುತ್ತಿದ್ದಳು ಎಂದು ಶಂಕಿಸಲಾಗಿದೆ.

ಮಲ್ಹೋತ್ರಾ ಬಂಧನವು ಶಂಕಿತ ಗೂಢಚಾರರ ವಿರುದ್ಧದ ಕೇಂದ್ರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕ್ರಮದ ಒಂದು ಭಾಗವಾಗಿದೆ. ಇಲ್ಲಿಯವರೆಗೆ, ಪಂಜಾಬ್ ಮತ್ತು ಹರಿಯಾಣದ ಮಲೇರ್ಕೋಟ್ಲಾದಿಂದ ಕನಿಷ್ಠ ಆರು ಪಾಕಿಸ್ತಾನಿ ಗೂಢಚಾರರನ್ನು ಬಂಧಿಸಲಾಗಿದೆ, ಅವರೆಲ್ಲರೂ ಡ್ಯಾನಿಶ್ ಜೊತೆ ಸಂಬಂಧ ಹೊಂದಿದ್ದಾರೆಂದು ನಂಬಲಾಗಿದೆ. ಭಾರತದೊಳಗೆ ದೊಡ್ಡ ಬೇಹುಗಾರಿಕೆ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

TAGGED:
Share This Article