ಕಾಡಿನಲ್ಲಿ ಹೆಚ್ಚಾದ ಲಂಟಾನ ಗಿಡಗಳ ಪೊದೆಪೊಟರು : ಕಾಡಾನೆಗಳ ಪಥ ಬದಲು

prathapa thirthahalli
Prathapa thirthahalli - content producer

jp story : ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ರೈತರ ಹೊಲಗದ್ದೆಗಳು ನಾಶವಾಗುತ್ತಿದೆಯಲ್ಲದೆ, ಮಾನವ ಪ್ರಾಣ ಹಾನಿಯಾಗುತ್ತಿದೆ. ಪ್ರತಿದಿನ ಮಲೆನಾಡಿನಲ್ಲಿ ಕಾಡಾನೆಗಳು ಒಂದಿಲ್ಲೊಂದು ದಿಕ್ಕಿನಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ದಿಗಿಲು ಮೂಡಿಸುತ್ತಿದೆ. ಕಾಡಾನೆಗಳನ್ನು ಹಿಡಿಯುವಂತೆ ಗ್ರಾಮಸ್ಥರಿಂದ ಪ್ರತಿಭಟನೆ ಬಂದ್​ಗಳು ನಡೆಯುವುದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಮೇಲೆ ಒತ್ತಡ ಹಾಕುವುದು ನಂತರ  ಸರ್ಕಾರ ಕಾಡಾನೆ ಹಿಡಿಯಲು ಅನುಮತಿ ನೀಡುವುದು ಸಾಮಾನ್ಯ ಎಂಬಂತಾಗಿದೆ. ಕಾಡಾನೆಗಳ ದಿಕ್ಕು ಬದಲಾಗುತ್ತಿರುವುದೇಕೆ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಹಿಂಡಿನಿಂದ ಬೇರ್ಪಟ್ಟೋ..ಅಥವಾ ಸಾಂಪ್ರದಾಯಿಕ ಪಥ ಬದಲಾದಾಗ ಆನೆಗಳು ಸಹಜವಾಗಿ ಕಾಡಂಚಿನ ರೈತರ ಹೊಲ ಗದ್ದೆಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಜೀವಹಾನಿ ಮಾಡುತ್ತಿವೆ. 

jp story :  ಕೇಂದ್ರ ಸರ್ಕಾರದ ಮಹತ್ವದ ಆನೆ ಯೋಜನೆಯಲ್ಲಿ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು  ಮೀಸಲು ಅರಣ್ಯ ಗಳಲ್ಲಿ ಆನೆಗಳ ಆವಾಸ ಸ್ಥಾನಗಳ ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ. ಆನೆ ನಿರೋಧಕ ಕಂದಕ ಸೌರವಿದ್ಯುತ್ ಬೇಲಿಗಳ ನಿರ್ಮಾಣ ಮತ್ತು ನಿರ್ವಹಣೆ.ರ್ಯಾಪಿಡ್ ಆಕ್ಷನ್ ಫೋರ್ಸ್ ರಚನೆ, ಕಳ್ಳ ಬೇಟೆ ತಡೆ ಶಿಬಿರಗಳು ಆನೆ ಹಿಮ್ಮೆಟ್ಟಿಸುವ ಶಿಬಿರಗಳ ರಚನೆ ಮತ್ತು ನಿರ್ವಹಣೆ, ಹಾವಳಿ ನಡೆಸುವ ಪುಂಡಾನೆ ಸೆರೆಹಿಡಿದು ಸ್ಥಳಾಂತರಿಸುವುದು. ಗಾಯಗೊಂಡ ಆನೆಗಳ ಶೂಶ್ರೂಷೆ ಮಾಡುವುದು ಮರಣೋತ್ತರ ಪರೀಕ್ಷೆ ಮತ್ತು ಮುಂತಾದ ವಿಚಾರಗಳಲ್ಲಿ ಪಶುವೈದ್ಯರಿಗೆ ತರಬೇತಿ ನೀಡುವುದು, ಆನೆ ಆವಾಸ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ವಿವರಣೆ ನೀಡಲಾಗಿದೆ.

ಆನೆಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿದೆಯಾದರೂ,,ಅವುಗಳ ಕಾರಿಡಾರ್ ಸುತ್ತಮುತ್ತಲ ಪ್ರದೇಶದಲ್ಲಿ ಅವುಗಳ ಹೊಟ್ಟೆ ತುಂಬಿಸಲು ಯಾವ ಕಾರ್ಯ ಕೈಗೊಂಡಿದೆ. ರಾಷ್ಟ್ರೀಯ ಉದ್ಯಾನವನಗಳು ಅಭಯಾರಣ್ಯ ಪ್ರದೇಶಗಳ ಒಳಹೊಕ್ಕರೆ ಇಂದು ಲಂಟಾನ ಗಿಡಗಳೇ ಕೈಬೀಸಿ ಕರೆಯುತ್ತಿವೆ. ಲಂಟಾನ ಗಿಡ ಅವ್ಯಾಹಿತವಾಗಿ ಬೆಳೆದು ಮಾಂಸಹಾರಿ ಪ್ರಾಣಿಗಳಿಗೆ ಅಡಗುದಾಣಗಳಾಂತಾಗಿದೆ. ಬಂಡಿಪುರ ನಾಗರಹೊಳೆ ಭದ್ರಾ ಅಭಯಾರಣ್ಯ ಪ್ರದೇಶಗಳು ಲಂಟಾನ ಕಾಡುಗಳಾಗುತ್ತಿವೆ. ಕಾಡು ಮಾರ್ಗದ ಅಕ್ಕಪಕ್ಕದಲ್ಲಿ ಲಂಟಾನ ವೀಡಿಂಗ್ ಮಾಡಿದಂತೆ ಕಾಣುತ್ತದೆಯಾದ್ರೂ, ಕಾಡನ್ನೇ ಸಂಪೂರ್ಣ ಲಂಟಾನ ಮುಕ್ತ ಮಾಡಲು ಸರ್ಕಾರ ಯಾವ ಯೋಜನೆ ಹಾಕಿಕೊಂಡಿದೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

jp story : ಲಂಟಾನ ಆಹಾರದ ಕೊರತೆಗೆ ಕಾರಣವಾಗುತ್ತದೆ

ಮಧ್ಯ ಮತ್ತು ದಕ್ಷಿಣ ಅಮೇರಿಕಾ ಮೂಲದ ಲಂಟಾನ ಕಳೆ ಸಸ್ಯವಾಗಿ ಗುರುತಿಸಿಕೊಂಡಿದೆ.ಲಂಟಾನಾ ಗಿಡವು ಇತರೆ ಪ್ರಭೇದದ ಗಿಡಗಳನ್ನು ಹಿಂದಿಕ್ಕಿ ಬೆಳೆಯುವ ಕಾಡು ಕಳೆಯಾಗಿದ್ದು, ಜೀವವೈವಿಧ್ಯವನ್ನು ಹಾಳು ಮಾಡುತ್ತದೆ. ಲಂಟಾನ ಬೆಳೆದ ಜಾಗದಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ.ಯಾವ ಕಾಡು ಜಾತಿಯ ಗಿಡಗಳು ಹುಟ್ಟುವುದಿಲ್ಲ. ಇದು ಆನೆ ಜಿಂಕೆಯಂತ ಸಸ್ಯಹಾರಿ ವನ್ಯಪ್ರಾಣಿಗಳಿಗೆ ಆಹಾರದ ಕೊರತೆಯನ್ನು ಎದುರಿಸುವಂತೆ ಮಾಡುತ್ತೆ. ಇತ್ತೀಚಿನ  ವರ್ಷದಲ್ಲಿ ಕಾಡಿನಲ್ಲಿರುವ ಲಂಟಾನ ಸವರಿದಂತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ನಂತರ ನಿರಾಳರಾದಂತಿದೆ.

jp story
jp story

 

TAGGED:
Share This Article