irctc timetable jana janashadhabhi express 12089 : ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಅಪ್​ಡೇಟ್! ಈ ಮಾಹಿತಿ ತಿಳಿದುಕೊಳ್ಳಿ

Malenadu Today

ಬೆಂಗಳೂರು-ಹುಬ್ಬಳ್ಳಿ & ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್​ಪ್ರೆಸ್​ ರೈಲು ತಿಪಟೂರಲ್ಲಿ ನಿಲುಗಡೆಗೊಳಿಸುವುದುನ್ನು ಮುಂಧುವರಿಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ (ಬೆಂಗಳೂರು, ಮೇ 17,  2025) ಪ್ರಕಟಣೆ ನೀಡಿದೆ. 

irctc timetable jana janashadhabhi express
irctc timetable jana janashadhabhi express

irctc timetable jana janashadhabhi express ಪ್ರಮುಖ ವಿವರ:

ನೈಋತ್ಯ ರೈಲ್ವೆ ವಲಯವು ಬೆಂಗಳೂರು-ಹುಬ್ಬಳ್ಳಿ (12079/12080) ಮತ್ತು ಬೆಂಗಳೂರು-ಶಿವಮೊಗ್ಗ ಟೌನ್ (12089/12090) ಜನಶತಾಬ್ದಿ ಎಕ್ಸ್ಪ್ರೆಸ್‌ ರೈಲುಗಳನ್ನು ತಿಪಟೂರು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸುತ್ತಿತ್ತು. ಇದೀಗ ಈ ತಾತ್ಕಾಲಿಕ ನಿಲ್ದಾಣದ ಅವಧಿಯನ್ನು 6 ತಿಂಗಳ ಕಾಲ (ಮೇ 16, 2025 ರಿಂದ ನವೆಂಬರ್ 15, 2025 ವರೆಗೆ) ಮುಂದುವರಿಸಲು ನಿರ್ಧರಿಸಿದೆ. ಪ್ರಸ್ತುತ ವೇಳಾಪಟ್ಟಿಯಂತೆಯೇ ಈ ರೈಲುಗಳು ತಿಪಟೂರಲ್ಲಿ ನಿಲ್ಲುತ್ತವೆ.

- Advertisement -
Share This Article