ipl postpone / ಐಪಿಎಲ್​ ಗೆ ಒಂದು ವಾರದ ಬ್ರೇಕ್​ , ಕಾರಣವೇನು ಗೊತ್ತಾ

Malenadu Today

ipl postpone ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ಬಿಗಾಡಿಯಿಸಿದ ಪರಿಣಾಮ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿದೆ.  ಐಪಿಎಲ್‌ ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳನ್ನು ಒಂದು ವಾರ ಮುಂದೂಡಲಾಗಿದೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿದೆ. ಪಂದ್ಯಗಳ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. 

ipl postpone / ಐಪಿಎಲ್ ಮುಂದೂಡಿಕೆ

ನಿನ್ನೆ ತಡರಾತ್ರಿಯಲ್ಲಿ ಪಾಕ್‌ ಪಡೆಗಳು ಭಾರತದ ನಾಲ್ಕು ರಾಜ್ಯ 24 ನಗರಗಳನ್ನು ಗುರಿ ಮಾಡಿಕೊಂಡು ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಸಹ ದಾಳಿ ನಡೆಸಿತ್ತು. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್‌ ಕಿಂಗ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯವನ್ನು ರದ್ದು ಪಡಿಸಲಾಗಿತ್ತು. ಇದೀಗ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿದೆ.  ಇದೇ ಮೇ 25ರಂದು ಫೈನಲ್‌ ನಿಗದಿಯಾಗಿತ್ತು.ಟೂರ್ನಿಯು ಅಂತಿಮ ಹಂತಕ್ಕೆ ತಲುಪಿತ್ತು. ಲೀಗ್‌ ಹಂತದಲ್ಲಿ 12 ಹಾಗೂ ಕ್ವಾಲಿಫೈಯರ್‌, ಎಲಿಮಿನೇಟರ್, ಫೈನಲ್‌ ಪಂದ್ಯಗಳಷ್ಟೇ ಬಾಕಿ ಇದ್ದವು.

Share This Article