KARNATAKA NEWS/ ONLINE / Malenadu today/ May 22, 2023 SHIVAMOGGA NEWS
ತೀರ್ಥಹಳ್ಳಿ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಷರತ್ತುಗಳ ಅನ್ವಯ ಸ್ಟೇಷನ್ಗೆ ಹ್ಯಾಂಡ್ ಓವರ್ ಮಾಡಿದ್ದ ಬಂದೂಕು ಹಾಗೂ ಪಿಸ್ತೂಲ್ಗಳನ್ನ ದಿನಾಂಕ May 23, 2023 ರಿಂದ ಅವುಗಳ ಮಾಲೀಕರಿಗೆ ನೀಡಲಾಗ್ತಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನ ಪೊಲೀಸರು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ಧಾರೆ.
ತೀರ್ಥಹೋಳ್ಳಿ ತಾಲ್ಲೂಕು ವ್ಯಾಪ್ತಿ ಒಂದರಲ್ಲಿಯೇ ಸುಮಾರು 800 ಕ್ಕೂ ಹೆಚ್ಚ ಬಂದೂಕು, ಪಿಸ್ತೂಲ್ಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಷನ್ನಲ್ಲಿ ಸೆರೆಂಡರ್ ಮಾಡಲಾಗಿತ್ತು. ಇದೀಗ ಯಾರು ಸೆರೆಂಡರ್ ಮಾಡಿದ್ದರೋ ಅವರೇ ಬಂದು ತಮ್ಮ ತಮ್ಮ ಕೋವಿಗಳನ್ನ ತೆಗೆದುಕೊಂಡು ಹೋಗಲು ತಿಳಿಸಲಾಗಿದೆ. ಸಮರ್ಪಕ ಗುರುತಿನ ಚೀಟಿ ತೋರಿಸಿ ಶಸ್ತ್ರಗಳನ್ನು ಕೊಂಡೊಯ್ಯಲು ಸೂಚಿಸಲಾಗಿದೆ.
