ಶಿವಮೊಗ್ಗ ತುಂಗಾ ನದಿಗೆ ನಾಲ್ಕನೇ ಸೇತುವೆ ಉದ್ಘಾಟನೆ! ಆಯನೂರು ಮಂಜುನಾಥ್​ ಆಕ್ಷೇಪ! ಕಾರಣ ಇಲ್ಲಿದೆ

Inauguration of fourth bridge over Shimoga Tunga river. Ayanur Manjunath objects! Here's the reason

ಶಿವಮೊಗ್ಗ ತುಂಗಾ ನದಿಗೆ ನಾಲ್ಕನೇ ಸೇತುವೆ ಉದ್ಘಾಟನೆ! ಆಯನೂರು ಮಂಜುನಾಥ್​ ಆಕ್ಷೇಪ! ಕಾರಣ ಇಲ್ಲಿದೆ

SHIVAMOGGA|  Dec 18, 2023  |  ಶಿವಮೊಗ್ಗದ ಎನ್​ಟಿ ರೋಡ್​ಗೆ ಹೊಂದಿಕೊಂಡಿರುವ ಬೈಪಾಸ್ ರಸ್ತೆಯ ಸೇತುವೆಯನ್ನ ಸಂಸದ ಬಿ.ವೈ.ರಾಘವೇಂದ್ರರವರು ಉದ್ಘಾಟಿಸಿದ್ದರು. ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆ.ಪಿ.ಸಿ.ಸಿ.ವಕ್ತಾರ  ಆಯನೂರು ಮಂಜುನಾಥ್  ಸಂಸದ ಬಿ.ವೈ. ರಾಘವೇಂದ್ರರವರು ಶಿಷ್ಟಚಾರವನ್ನು ಉಲಂಘಿಸಿ ಬೈಪಾಸ್ ರಸ್ತೆಯ ಸೇತುವೆಯನ್ನು ಉದ್ಘಾಟಿಸಿದ್ದಾರೆ. ನಡೆದಿದ್ದು ಸರ್ಕಾರಿ ಕಾರ್ಯಕ್ರಮವಲ್ಲ ಬಿಜೆಪಿ ಕಾರ್ಯಕ್ರಮ ಎಂದು ಆರೋಪಿಸಿದ್ದಾರೆ. 

ಕಾಮಗಾರಿ ಮುಗಿದಿದೆ ಎಂದು ಅಧಿಕಾರಿಗಳ ಪ್ರಮಾಣ ಪತ್ರ ಇಲ್ಲದೆ ಟೇಪು ಕಟ್​ ಮಾಡಿ ಉದ್ಘಾಟನೆ ಮಾಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಮಾಹಿತಿ ಇರುವುದಿಲ್ಲ ಎಂದು ದೂರಿದ ಆಯನೂರು ಮಂಜುನಾಥ್ ನಿನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿಷ್ಟಚಾರದ ಪ್ರಕಾರ ಹಲವನ್ನು ಆಹ್ವಾನಿಸಿಲ್ಲ. ಇನ್ನೂ ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತೇ ಇಲ್ಲ ಎನ್ನುತ್ತಾರೆ.

READ : ಕರೆಂಟ್​ ಸಮಸ್ಯೆನಾ ಯಾರಿಗೆ ಹೇಳೋದು? ಯಾವ ಏರಿಯಾದವರು ಯಾರನ್ನ ಸಂಪರ್ಕಿಸಬೇಕು? ಇಲ್ಲಿದೆ ಮೆಸ್ಕಾಂನ ಕಾಂಟಾಕ್ಟ್​ ಮಾಡುವ ವಿವರ

ಹಾಗಾದರೆ, ನಡೆದಿದ್ದ ಸರ್ಕಾರದ ಕಾರ್ಯಕ್ರಮವಲ್ಲವೇ ಎಂದು ಪ್ರಶ್ನಿಸಿದ ಕೆಪಿಸಿಸಿ ವಕ್ತಾರರು, ಅಧಿಕಾರಿಗಳು ಈ ಕಾರ್ಯಕ್ರಮವನ್ನು ರೂಪಿಸಬೇಕು. ಅದನ್ನು ಬಿಟ್ಟು ಕೇವಲ ಕೆಲವು ಬಿಜೆಪಿ ಮುಖಂಡರನ್ನು ಇಟ್ಟುಕೊಂಡು ಈ ರೀತಿ ಉದ್ಘಾಟನೆಗಳನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮಾಡುತ್ತಾಹೊರಟಿರುವುದು ಸರಿಯಲ್ಲ ಎಂದರು. 

ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಬಿಜೆಪಿ ನಾಯಕರ, ಮನೆಗಳ ಇಲ್ಲವೇ ಆಸ್ತಿಗಳ ಸುತ್ತ ತಿರುಗಿ ಅತ್ಯಂತ ಶೀಘ್ರವಾಗಿ ನಡೆಯುತ್ತವೆ. ರಿಂಗ್‌ ರೋಡ್ ಆಗಲಿ, ರಸ್ತೆಗಳಾಗಲಿ, ಬಿಜೆಪಿ ನಾಯಕರಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತವೆ ಎಂದು ಆರೋಪಿಸಿದ ಅವರು, ಈ ಕಾಮಗಾರಿಗಳು ಪೂರ್ಣ ಮುಗಿಯದೇ ಇದ್ದರೂ ಕೂಡ ಏಕೆ ಅವಸರದಿಂದ ಉದ್ಘಾಟನೆ ಮಾಡುತ್ತಾರೋ ಗೊತ್ತಿಲ್ಲ ಎಂದು ದೂರಿದ್ದಾರೆ.