MALENADUTODAY.COM |SHIVAMOGGA| #KANNADANEWSWEB
ಬಿಜೆಪಿ ಭ್ರಷ್ಟಾಚಾರದ ಪಾರ್ಟಿ ಅನ್ನುತ್ತಿದ್ದ ಕಾಂಗ್ರೆಸ್ನ ಒಳಗೆ ಹಣಕ್ಕಾಡಿ ಡಿಮ್ಯಾಂಡ್ ಮಾಡಲಾಗ್ತಿದೆ ಎಂದು ಕಾಂಗ್ರೆಸ್ ಮುಖಂಡನೇ ಆರೋಪವೊಂದನ್ನ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರೇ, ಎಷ್ಟು ಹಣ ಕೊಡ್ತೀರಾ ಅಂತಾ ಕೇಳುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಡಬೆ ದುಡ್ಡಿದವರಿಗೆ ಮಾತ್ರವೇ ಬೆಲೆ, ಕಾಂಗ್ರೆಸ್ನಲ್ಲಿ ಕೇವಲ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಅಂತಾ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರ.ಎ
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಕೇವಲ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ, ಚುನಾವಣೆಗೆ ನಿಲ್ಲುತ್ತೇನೆ ಎಂದರೆ, ಎಷ್ಟು ಹಣ ಇದೆ, ಎಷ್ಟು ಹಣ ಕೊಡ್ತಿರಾ ಎಂದು ಕೇಳ್ತಾರೆ, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಹಡಬೆ ದುಡ್ಡಿದ್ದವರಿಗೆ ಮಾತ್ರ ಬೆಲೆ, ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು. ಎಷ್ಟು ಹೋರಾಟ, ಎಷ್ಟು ನ್ಯಾಯ ಕೊಡಿಸಿದ್ದೇನೆ, ಎಷ್ಟು ಕೆಲಸ ಮಾಡಿದ್ದೇನೆ ಎಂದು ಕೇಳುತ್ತಿಲ್ಲ ಎಂದು ದೂರಿದ್ಧಾರೆ.
38 ವರ್ಷದಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೇನೆ. ಜೆಡಿಎಸ್ ನಿಂದ ಬಂದ ಮಧು ಬಂಗಾರಪ್ಪಗೆ ಮೂರು ಹುದ್ದೆ ನೀಡಲಾಗಿದೆ ಎಂದು ಆರೋಪಿಸಿ ತೀನಾಶ್ರೀನಿವಾಸ್ ನಾನು ಜಿಲ್ಲಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ಪಕ್ಷ ನನ್ನನ್ನು ಕಡಗಣಿಸಲಾಯಿತು. ಕಾಗೋಡು ತಿಮ್ಮಪ್ಪ ಅವರ ಕೋರಿಕೆ ಮೇರೆಗೆ ನಾನು ಕಾಂಗ್ರೆಸ್ ಸೇರಿದ್ದೆ ಆದರೆ, ಈಗ ಪಕ್ಷದಲ್ಲಿ ಜಾತಿ, ಹಣ ಇದ್ದವರಿಗೆ ಮಾತ್ರ ಮನ್ನಣೆ ಸಿಗುತ್ತಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಯಾರಿಂದಲೂ ರೈತರಿಗೆ ನ್ಯಾಯ ಸಿಕ್ಕಿಲ್ಲ. ಶರಾವತಿ ಸಂತ್ರಸ್ತರು ಹಾಗೂ ರೈತರಿಗೆ ನ್ಯಾಯ ಕೊಡಿಸುವಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ವಿಫಲವಾಗಿವೆ. ಹಾಗಾಗಿ ನಾನು ಮಲೆನಾಡು ರೈತ ಹೋರಾಟ ಸಮಿತಿ ರಚಿಸಿಕೊಂಡು ರೈತರ ಸಂಘಟನೆಯಲ್ಲಿ ತೊಡಗಿದ್ದೇನೆ. ಸಾಗರ-ಹೊಸನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದಿದ್ದಾರೆ.
![]()
ಅವರು, ಕಾಂಗ್ರೆಸ್ ಪಕ್ಷದ ಇತ್ತೀಚಿನ ಬೆಳವಣಿಗೆ ಸರಿಯಿಲ್ಲ , ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿ ಟಿಕೆಟ್ ಅರ್ಜಿ ಸಲ್ಲಿಸಿರುವವರಿಗೆ ನಿಮ್ಮ ಬಳಿ ಎಷ್ಟು ಹಣ ಇದೆ, ನೀವು ಎಷ್ಟು ಹಣ ಖರ್ಚು ಮಾಡಬಲ್ಲೀರಿ ಎಂದು ಪಕ್ಷದ ಮುಖಂಡರು ಕೇಳಿದ್ದಾರೆ, ಕಾಂಗ್ರೆಸ್ ನಲ್ಲಿ ಎಲ್ಲಾ ಸ್ಥಾನ ಮಾನ ಕೇವಲ ಹಣ ಮತ್ತು ಜಾತಿಯ ಬಲವಿದ್ದವರಿಗೆ ಸಿಗುತ್ತಿದೆ ಎಂದು ದೂರಿದ್ದಾರೆ. ಮಾಜಿ ಸಿ.ಎಂ. ಪುತ್ರನಿಗೆ ಮೂರು, ಮೂರು ಹುದ್ದೆಗಳನ್ನು ನೀಡಿರುವುದೇ ಇದಕ್ಕೆ ಸಾಕ್ಷಿ ಎಂದರು. ಇದರಿಂದ ಬೇಸತ್ತು ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೆನೆ ಎಂದಿರುವ ತೀ.ನಾ.ಶ್ರೀನಿವಾಸ್, ವಾರದ ಹಿಂದೆಯೇ ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೆ ರವಾನಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಬರುವ ಚುನಾವಣೆಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿ ಪರವಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
