ವೆಂಕ, ನಾಣಿ, ಸೀನಾ! ಕಾಂಗ್ರೆಸ್ಸೆ ಕೊನೆಯಾಗುತ್ತೆ!? ಡಿಕೆಶಿಗೆ ವಿರೋಧ, ಸಿಎಂ ಮೇಲೆ ಕಳಕಳಿ! ಶಿವಮೊಗ್ಗದಲ್ಲಿ ರಾಜಕಾರಣದ ಲೇಟೆಸ್ಟ್ ಮಾತು ಓದಿ

ajjimane ganesh

ನವೆಂಬರ್ 22,  2025 : ಮಲೆನಾಡು ಟುಡೆ :  ರಾಜ್ಯ ಕಾಂಗ್ರೆಸ್​ ಸರ್ಕಾರದ ನಾಯಕತ್ವಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರು ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ  ಎಂಎಲ್‌ಸಿ ಡಿ.ಎಸ್. ಅರುಣ್​   ರಾಜ್ಯ ಕಾಂಗ್ರೆಸ್​ ಸರ್ಕಾರವು ಕಳೆದ 2.5 ವರ್ಷಗಳಿಂದ ಒಂದಲ್ಲಾ ಒಂದು ಗೊಂದಲಗಳನ್ನು ಸೃಷ್ಟಿಸುತ್ತಿದೆ ಅಂತಾ ಆರೋಪಿಸಿದರು. ಅಲ್ಲದೆ ಡಿಕೆ ಶಿವಕುಮಾರ್ ಸಿಎಂ ಆಗಬಾರದು, ಅವರು ಆಗೋದು ಇಲ್ಲ. ಅವರ ಬಳಿ ಇರೋದು ವೆಂಕ ನಾಣಿ ಸೀನಾ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ. 

 If DK Shivakumar becomes CM Congress finished
If DK Shivakumar becomes CM Congress finished

ಶಿವಮೊಗ್ಗ ರೌಡಿಸಂಗೆ ಇನ್ನೊಂದು ವಾರ್ನಿಂಗ್! ವಲ್ಲು@ ವಲಂಗಾ@ಮಂಜುನಾಥ್​ನ ಕಾಲಿಗೆ ಪೊಲೀಸ್ ಬುಲೆಟ್! ಎಸ್​ಪಿ ಹೇಳಿದ್ದೇನು?

ಅಭಿವೃದ್ಧಿ ಕಾರ್ಯದ ಬಗ್ಗೆ ಮಾತಿಲ್ಲ

ರಾಜ್ಯದಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಅಭಿವೃದ್ಧಿಯ ವಿಷಯವನ್ನು ಬೇರೆಡೆಗೆ ತಿರುಗಿಸಲು ಈ ರೀತಿಯ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ.   ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರೆ, ತಕ್ಷಣವೇ ಇಂತಹ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ದೂರಿದ ಡಿಎಸ್​ ಅರುಣ್  , ಸರ್ಕಾರ ಅಧಿಕಾರಕ್ಕೆ ಬಂದು 2.5 ವರ್ಷಗಳ ನಂತರವೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಆಡಳಿತದಲ್ಲಿನ ಅಸ್ಥಿರತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯ ಪಟ್ಟರು ‘

ಸರ್ಕಾರದಲ್ಲಿ ಕ್ಯಾಬಿನೆಟ್​ ಪುನರ್‌ರಚನೆ ಮಾಡುವುದು ಸಹಜ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಸಚಿವರ ಪುನರ್‌ರಚನೆಯು ಸಾಮಾನ್ಯ ಪ್ರಕ್ರಿಯೆ. ಆದರೆ, ಕಾಂಗ್ರೆಸ್​ ಸರ್ಕಾರದಲ್ಲಿ ನಡೆಯುತ್ತಿರುವುದು ಸಚಿವರ ಬದಲಾವಣೆಯಲ್ಲ, ಬದಲಿಗೆ ಸಿಎಂ ಬದಲಾವಣೆಯ ವಿಚಾರ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾದುದಲ್ಲ ಎಂದರು.  

 ವೆಂಕ, ನಾಣಿ, ಸೀನಾ/DK Shivakumar becomes CM

ಇದೇ ವೇಳೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರಂತಹ ವ್ಯಕ್ತಿಗಳು ಮುಖ್ಯಮಂತ್ರಿ ಆಗಬಾರದು. ಒಂದು ವೇಳೆ ಅವರು ಸಿಎಂ ಆಗುವಂತಹ ಸಂದರ್ಭ ಬಂದರೆ, ಸಿದ್ದರಾಮಯ್ಯನವರೇ ಕಾಂಗ್ರೆಸ್ ಅನ್ನು ಮುಕ್ತಗೊಳಿಸುತ್ತಾರೆ ಎಂದು ಭವಿಷ್ಯ ಹೇಳಿದರು. ಡಿ.ಕೆ. ಶಿವಕುಮಾರ್‌ ರವರಿಗೆ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಸಕರ ಬೆಂಬಲ ಸಿಂಗಲ್ ಡಿಜಿಟ್‌ನಲ್ಲಿತ್ತು. ಈಗ ಬೇರೆ ಬೇರೆ ಕಾರಣಗಳಿಂದ ಕೆಲವರು ಅವರ ಜೊತೆಗಿದ್ದಾರೆ. ಆದರೆ, ಅವರು ಸಿಎಂ ಆಗಬೇಕು ಎಂದು ನೇರವಾಗಿ ಹೇಳುತ್ತಿರುವವರು ಕೆಲವರು ಮಾತ್ರ. ವೆಂಕ, ನಾಣಿ, ಸೀನ ಎಂಬ ಮೂರು ಜನರನ್ನು ಹೊರತುಪಡಿಸಿದರೆ ಬೇರೆ ಯಾರೊಬ್ಬರೂ ಡಿ.ಕೆ. ಶಿವಕುಮಾರ್‌ರವರ ಜೊತೆಗಿಲ್ಲ ಎಂದು ವ್ಯಂಗ್ಯವಾಡಿದರು.

Thirthahalli news, ಜುಲೈ 08 ತೀರ್ಥಹಳ್ಳಿ: ಟಿಂಬರ್‌ ನಾಟ ಬಿದ್ದು ವ್ಯಕ್ತಿ ಸಾವು

ಸಿದ್ದರಾಮಯ್ಯ ಕಳಕಳಿ ಹೊಂದಿರುವ ಸಿಎಂ

ರಾಜ್ಯದಲ್ಲಿನ ಕಾಂಗ್ರೆಸ್‌ನ ನಾಯಕತ್ವವು ಕಿತ್ತೋಗಿದ್ದು, ಯಾವ ನಾಯಕತ್ವದಲ್ಲಿಯೂ ಭರವಸೆ ಕಾಣಿಸುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಕಷ್ಟ ಎದುರಾಗಿದೆ ಎಂದು ಎಂಎಲ್‌ಸಿ ಅರುಣ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಸಾಮಾಜಿಕ ಕಳಕಳಿ ಮತ್ತು ಸಮಾಜವಾದದ ಗುಣಗಳನ್ನು ಹೊಂದಿದಂತಹ ವ್ಯಕ್ತಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡುವುದಿಲ್ಲ. ಅಂತಹ ಸ್ಥಿತಿ ಬಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ಸಹಜವಾಗಿಯೇ ನಿರ್ಮಾಣವಾಗುತ್ತದೆ. ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಟ್ಟ ದಿನವೇ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಂತ್ಯ ಹಾಡುತ್ತಾರೆ. ಆ ಭರವಸೆ ತಮಗಿದೆ ಎಂದರು.

 If DK Shivakumar becomes CM Congress finished
If DK Shivakumar becomes CM Congress finished

ಅಭಿವೃದ್ಧಿ ಹಣವಿಲ್ಲ, ಗುಂಡಿಗಳನ್ನ ಮುಚ್ಚಿಲ್ಲ

ಪ್ರಸ್ತುತ ತಮ್ಮಂತಹ ಶಾಸಕರಿಗೆ ಸಾಕಷ್ಟು ಒತ್ತಡವಿದೆ ಎಂದ ಡಿಎಸ್​ ಅರುಣ್ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದ ತಮ್ಮ ವ್ಯಾಪ್ತಿಯಲ್ಲಿ 10 ತಾಲ್ಲೂಕುಗಳಿವೆ. ಆದರೆ ಅಭಿವೃದ್ಧಿ ಕಾರ್ಯಗಳಿರಲಿ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಸಹ ಸರ್ಕಾರದಿಂದ ಹಣವಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ನಡೆಯುತ್ತಿವೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಒಂದು ಕಡೆಯಾದರೂ ಹಣ ಬಿಡುಗಡೆ ಮಾಡಿದೆಯಾ? ಅಥವಾ ಯಾರಾದರೂ ಗುದ್ದಲಿ ಪೂಜೆ ಮಾಡಿರುವ ಒಂದು ಫೋಟೋವನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದರು. 

ಕಾಂಗ್ರೆಸ್​ ಸರ್ಕಾರ ಬಿದ್ದೋಗುತ್ತೆ/DK Shivakumar becomes CM

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಷ್ಟ್ರಭಕ್ತ ಬಳಗದ ಮುಖಂಡ ಹಾಗೂ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಅಭಿವೃದ್ಧಿಯ ಬಗ್ಗೆ ಈಗ ಪ್ರಶ್ನೆಯೇ ಇಲ್ಲ ಎಂಬಂತಾಗಿದೆ.  ಯಾವ ಶಾಸಕರೂ ಸಹ ಸಚಿವರು, ಡಿಸಿಎಂ, ಸಿಎಂರನ್ನ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಳುವ ಸ್ಥಿತಿಯಲ್ಲಿಲ್ಲ. ಒಂದು ಜಲ್ಲಿ ಕಾಳನ್ನು ಕೇಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಈಶ್ವರಪ್ಪನವರು ಆಪಾದಿಸಿದರು. ಶಾಸಕರಿಗೆ ಅಭಿವೃದ್ಧಿ ಕಾರ್ಯಗಳ ಕುರಿತು ಧೈರ್ಯವಾಗಲಿ ಅಥವಾ ಆಸಕ್ತಿಯಾಗಲಿ ಎರಡು ಸಹ ಇಲ್ಲ. ಎಲ್ಲರೂ ಕೇವಲ ಅಧಿಕಾರಕ್ಕಾಗಿ ಪರಸ್ಪರ ಗುದ್ದಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ತಾಳಿ ಸರ ಕಳೆದುಕೊಂಡ ಮೈಸೂರು ಮಹಿಳೆ | ಅಸ್ವಸ್ಥಗೊಂಡ ಹೊಸನಗರ ನಿವಾಸಿ | RPF ನಿಂದ ಬೇಷ್‌ ಕೆಲಸ

ಮುಂದಿನ ದಿನಗಳಲ್ಲಿ ಸಿಎಂ ಆಗಿ ಸಿದ್ದರಾಮಯ್ಯನವರು ಮುಂದುವರೆಯುತ್ತಾರೋ ಅಥವಾ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಾರೋ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಲ್ಲ ಆದರೆ,ಕಾಂಗ್ರೆಸ್ ನೇತೃತ್ವದ ಈ ಸರ್ಕಾರ  ಆದಷ್ಟು ಬೇಗನೆ ಪತನವಾಗಲಿದೆ. ದೇಶದ ಭೂಪಟವನ್ನು ಗಮನಿಸಿದರೆ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಳಿದಿದೆ. ಮಹಾತ್ಮ ಗಾಂಧೀಜಿಯವರಿಗೆ ಕಾಂಗ್ರೆಸ್ ಪಕ್ಷವನ್ನುವಿಸರ್ಜಿಸಬೇಕು  ಎಂಬ ಕನಸಿತ್ತು. ಇಂತಹ ಪರಿಸ್ಥಿತಿ ಇದೀಗ ಕಾಂಗ್ರೆಸ್​ಗೆ ಎದುರಾಗಿದೆ.

 If DK Shivakumar becomes CM Congress finished
If DK Shivakumar becomes CM Congress finished

ಬಿಹಾರದ ಚುನಾವಣೆಯಂತೆ ಪಶ್ಚಿಮ ಬಂಗಾಳ ಚುನಾವಣೆ/DK Shivakumar becomes CM

ಮೊನ್ನೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದೆ. ಬಿಹಾರದ ಫಲಿತಾಂಶವನ್ನು ನೋಡಿ ಕಾಂಗ್ರೆಸ್ಸಿಗರು ಸುಮ್ಮನಾಗಿದ್ದಾರೆ. ಅಲ್ಲಿ ನಡೆದಿದೆ ಎನ್ನಲಾದ ಕಳ್ಳ ಮತದಾನದಂತಹ ಟೀಕೆಗಳು ಈಗ ಮರೆಮಾಚಿ ಹೋಗಿವೆ.   125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಈಗ ಸಿಂಗಲ್ ಡಿಜಿಟ್‌ಗೆ ಇಳಿದಿದೆ. ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸುವ ತೀರ್ಮಾನವನ್ನು ಈಗಾಗಲೇ ಮಾಡಿದ್ದಾರೆ ಎಂದ ಕೆಎಸ್​ ಈಶ್ವರಪ್ಪ ಮುಂದೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿಯು ಹೀಗೆ ಆಗಲಿದೆ ಎಂದರು. 

BREAKING NEWS : ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ, ಕ್ಷೇತ್ರಗಳು ಫಿಕ್ಸ್​/ ಎಷ್ಟು ಕ್ಷೇತ್ರಗಳಿವೆ, ಯಾವ್ಯಾವ ಊರುಗಳು ವ್ಯಾಪ್ತಿಯಲ್ಲಿ ಬರುತ್ತವೆ? ಕಂಪ್ಲೀಟ್​ ವಿವರ ಇಲ್ಲಿದೆ ಓದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 If DK Shivakumar becomes CM Congress finished : MLC D.S. Arun Siddaramaiah and DK Shivakumar will dissolve Congress K.S. Eshwarappa

Share This Article