KARNATAKA NEWS/ ONLINE / Malenadu today/ Jun 21, 2023 SHIVAMOGGA NEWS
ಪರಾಭವಗೊಂಡ ಜನಪ್ರತಿನಿಧಿ ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂಧಿಸಿದರೆ, ಮುಂದೆ ಅದು ಅವರ ಗೆಲುವಿಗೆ ಸೋಪಾನವಾಗುತ್ತೆ..ಚುನಾವಣೆಗಳಲ್ಲಿ ಸೋಲುಗಳನ್ನೇ ಉಂಡ ಮಧು ಬಂಗಾರಪ್ಪ ಇದಕ್ಕೆ ಸಾಕ್ಷಿ..ಹೇಗಂತಿರಾ ಈ ಸ್ಟೋರಿ ಓದಿ.
ಮಾಜಿ ಮುಖ್ಯಮಂತ್ರಿ ದಿವಂಗಂತ ಎಸ್ ಬಂಗಾರಪ್ಪನವರು ರಾಜ್ಯ ರಾಜಕಾರಣವನ್ನು ತಮ್ಮ ಮೂಗಿನ ನೇರಕ್ಕೆ ಸೊರಬದ ಕುಬಟೂರಿನಲ್ಲೇ ಕೂತು ನಿಯಂತ್ರಿಸುತ್ತಿದ್ದರು. ಜನರ ಪಾಲಿಗೆ ಕಿಂದರಜೋಗಿಯಂತಿದ್ದ ಬಂಗಾರಪ್ಪ ಎಲ್ಲೇ ಹೋದರೂ, ಜನ ಸಾಗರವೇ ಸೇರುತ್ತಿತ್ತು.
ಅವರ ಭಾಷಣ ಕೇಳಿ ಬೆರಗಾಗುತ್ತಿತ್ತು. ಅಂತರಾಷ್ಟ್ರೀಯ ಮಟ್ಟದ ವಿಚಾರಗಳಿಂದ ಹಿಡಿದು ರಾಷ್ಟ್ರ ರಾಜ್ಯ ಜಿಲ್ಲೆ ನಂತರ ಹಳ್ಳಿಯವರಿಗೆ ಅವರು ಸರಳವಾಗಿ ಜನರಿಗೆ ಅರ್ಥವಾಗುವಂತೆ ಭಾಷಣ ಮಾಡುತ್ತಿದ್ದರು.
ಬಂಗಾರಪ್ಪರ ರಾಜಕೀಯ ಹಾದಿಯಲ್ಲಿ ಪುತ್ರರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಈಗ ಮುನ್ನೆಡೆಯುತ್ತಿದ್ದಾರೆ. ತಂದೆಯವರ ರಾಜಕೀಯ ಕೃಪೆಯಿಂದ ಕುಮಾರ್ ಬಂಗಾರಪ್ಪ ಎಳೆ ವಯಸ್ಸಿನಲ್ಲಿಯೇ ಸಚಿವ ಸ್ಥಾನ ಆಲಂಕರಿಸಿದರು. ಬಂಗಾರಪ್ಪರು ತಮ್ಮ ಎರಡನೇ ಪುತ್ರ ಮಧು ಬಂಗಾರಪ್ಪ ರಿಗೆ ತಡವಾಗಿ ರಾಜಕೀಯಕ್ಕೆ ರಂಗ ಪ್ರವೇಶ ಮಾಡಿಸಿದ್ರು.
2008 ರಲ್ಲಿ ಮೊದಲು ಸಮಾಜವಾದಿ ಪಾರ್ಟಿಯಿಂದ ಸೊರಬದಲ್ಲಿ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಹರತಾಳು ಹಾಲಪ್ಪ ಎದುರು ಸೋಲು ಕಂಡರು. ಮಗನ ಸೋಲು ಬಂಗಾರಪ್ಪರಿಗೆ ನುಂಗಲಾರದ ತುತ್ತಾಗಿತ್ತು.
ಬಂಗಾರಪ್ಪರ ಸಾವಿನ ನಂತರ 2013 ರಲ್ಲಿ ಮಧು ಬಂಗಾರಪ್ಪ ಅನುಕಂಪದ ಅಲೆಯಲ್ಲಿ ಗೆದ್ದರು.2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡರು,.ಎಂಪಿ ಚನಾವಣೆ ನಂತರದ ಲೋಕಸಭೆ ಉಪ ಚುನಾವಣೆಗಳಲ್ಲಿ ಸತತವಾಗಿ ಮೂರು ಸೋಲುಗಳನ್ನು ಕಂಡ ಮಧು ಬಂಗಾರಪ್ಪ ಎದೆಗುಂದಲಿಲ್ಲ.
ಸೋಲಿನ ಅವಧಿಯಲ್ಲಿಯೇ ಕ್ಷೇತ್ರದಲ್ಲಿ ಬೀಡುಬಿಟ್ಟು ಬಗರ್ ಹುಕುಂ ರೈತ ಪರ ಹೋರಾಟ ನೀರಾವರಿ ಯೋಜನೆಗಳಾಗಾಗಿ ಹೋರಾಟ ಮತ್ತು ಪಾದಯಾತ್ರೆ ಮಾಡಿದ ಮಧು ಬಂಗಾರಪ್ಪ, ಜನರಿಗೆ ಧ್ವನಿಯಾಗಿ ನಿಂತರು.
ಸತತ ಸೋಲುಗಳನ್ನು ಕಂಡಿದ್ದ ಮಧು ಬಂಗಾರಪ್ಪರ ರಾಜಕೀಯ ಜೀವನವೇ ಮುಗಿಯಿತು ಎಂದು ಮೂಗು ಮುರಿದವರು ಇದ್ದಾರೆ. ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳದ ಮಧು ಬಂಗಾರಪ್ಪ ತಮ್ಮ ಸತತ ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡರು.
ಶಾಸಕರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವ ತಾಲೂಕುಗಳಲ್ಲೂ ಮಂಜೂರಾಗದಷ್ಟು ಬಗರ್ ಹುಕುಂ ಅರ್ಜಿ ದಾರರಿಗೆ ಸೊರಬ ಕ್ಷೇತ್ರದಲ್ಲಿ ಹಕ್ಕುಪತ್ರ ನೀಡಿದ್ರು. ಸರ್ಕಾರಿ ಅಧಿಕಾರಿಗಳ ಜೊತೆಗೆ ಸಮನ್ವಯತೆ ಕಾಯ್ದುಕೊಂಡಿದ್ದರು.
ಕ್ಷೇತ್ರದಲ್ಲಿ ಅರಣ್ಯ ಇಲಾಖೆಯವರು ಒತ್ತುವರಿ ತೆರವಿಗೆ ಬಂದ ಸಂದರ್ಭಗಳಲ್ಲಿ ಮಧು ಬಂಗಾರಪ್ಪ ಅಕ್ಷರಸಹ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಕೆರೆಹಳ್ಳಿಯಿಂದ ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜುವರೆಗೆ ನಡೆಸಿದ ಪಾದಯಾತ್ರೆ..ಅವರ ರಾಜಕೀಯ ಬದುಕಿನ ಆಯಾಮವನ್ನೇ ಬದಲಿಸಿತು. ತಂದೆಯಂತೆ ಸದಾ ನಗುಮೊಗದಿಂದಲೇ ಜನತೆಯನ್ನು ಮಾತನಾಡಿಸುವ, ಮಧು ಬಂಗಾರಪ್ಪರಿಗೆ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಗೆಲುವು ಕಷ್ಟ ಎಂದೆನಿಸಾಗ, ಕಾಂಗ್ರೇಸ್ ಪಕ್ಷ ಸೇರಿದರು.
2023 ರ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ ಮಧು ಬಂಗಾರಪ್ಪ ದಾಖಲೆಯ 44 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು. ಮಧು ಬಂಗಾರಪ್ಪ ಗೆದ್ದ ನಂತರ ಶಿಕ್ಷಣ ಸಚಿವರಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.
ಗೆದ್ದ ನಂತರ ಅವರಿಗೆ ಈ ಹಿಂದೆ ಮೂಗು ಮುರಿದವರೆ ಇಂದು ಸುತ್ತಲು ಆವರಿಸಿಕೊಂಡಿದ್ದಾರೆ.ಆ ವರಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡ ಕೆಲ ನಾಯಕರುಗಳನ್ನು ನೋಡಿದಾಗ ಈ ವಿಚಾರ ಅಕ್ಷರಶಃ ನಿಜವೆನಿಸುತ್ತದೆ. ಸೂಕ್ಷ್ಮಮತಿ ಯಾಗಿರುವ ಮಧು ಬಂಗಾರಪ್ಪ ಇಂತವರಿಗೆ ಮಣೆ ಹಾಕುವುದಿಲ್ಲ ಎಂಬ ವಿಶ್ವಾಸ ದೂರದಿಂದ ಹಾರೈಸುವ ಮನಸ್ಸುಗಳಿಗಿದೆ.

