ನಾನು ಲೋಕಸಭೆ ಚುನಾವಣೆಗೆ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಸಚಿವ ರಾಜಣ್ಣ ಹೇಳಿಕೆ
I am a strong aspirant candidate for the Lok Sabha elections Minister Rajanna's statement ನಾನು ಲೋಕಸಭೆ ಚುನಾವಣೆಗೆ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಸಚಿವ ರಾಜಣ್ಣ ಹೇಳಿಕೆ
KARNATAKA NEWS/ ONLINE / Malenadu today/ Nov 14, 2023 SHIVAMOGGA NEWS
Shivamogga | ನಾನು ಲೋಕಸಭೆ ಚುನಾವಣೆಗೆ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ಸಚಿವ ರಾಜಣ್ಣ ಹೇಳಿಕೆ
ನಾವು ಸಹಕಾರ ಸಪ್ತಾಹಕ್ಕೆ ಬಂದಿರುವವರು. ನಾವು ಎಲ್ಲಾ ರಾಜಕೀಯ ಪಕ್ಷದ ಸಹಕಾರಿಗಳು ಸೇರಿ ಆಚರಣೆ ಮಾಡುವಂತ ಉತ್ಸವ. ಸಹಕಾರಿ ಆಂದೋಲನದಲ್ಲಿ ರಾಜಕಾರಣ ಇರಬಾರದು ಎಂಬುದು ನಮ್ಮೆಲ್ಲರ ಭಾವನೆ, ರಾಜಕೀಯ ಹೊರತು ಪಡಿಸಿ ಈ ಕಾರ್ಯಕ್ರಮ ಏರ್ಪಡಿಸಿದ್ದೇವೆ.
READ : ವಿವಾಹ-ವಿಚಾರ | ಈಡಿಗ ವಧು-ವರರ ಅನ್ವೇಷಣೆ ಕೇಂದ್ರ ಆರಂಭ!
ಈ ಉತ್ಸವ ಯಶಸ್ವಿಯಾಗಿ ನಡೆಯಬೇಕು. ಲೋಕಸಭೆ ಆಕಾಂಕ್ಷಿ ಅಭ್ಯರ್ಥಿ ಬಗ್ಗೆ ಪ್ರತಿಕ್ರೀಯಿಸಿ ಮಾತನಾಡಿದ ರಾಜಣ್ಣ, ನಾನು ಲೋಕಸಭಾ ಚುನಾವಣೆಯ ಪ್ರಭಲ ಆಕಾಂಕ್ಷಿಯಾಗಿದ್ದೇನೆ,. ಹೈಕಮಾಂಡ್ ಹೇಳಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಾನು ಹೈಕಮಾಂಡ್ ಗೆ ಕೇಳಿದ್ದೇನೆ.ಅವರು ಸ್ಪರ್ಧಿಸಿ ಎಂದು ಹೇಳಿದರೆ. ಚುನಾವಣೆಗೆ ಸ್ಪರ್ಧಿಸುತ್ತೇನೆ.
ಸಚಿವರಾದವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬುದೇನಾದ್ರೂ ಇದೆಯಾ..ಸಚಿವ ಸ್ಥಾನದಲ್ಲಿ ನಿಮಗೆ ಆಸಕ್ತಿ ಇಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರೀಯಿಸಿದ ರಾಜಣ್ಣ...ಹಾಗೇನಿಲ್ಲ ನೀವು ಏನೋ ಊಹೆ ಮಾಡೋದಕ್ಕೆ ಹೋಗಬೇಡಿ.ರಾಜಕಾರಣದ ಪ್ರಶ್ನೆಗಳಿಗಳಿಗೆಲ್ಲಾ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ಕೊಡುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.