ಶಿವಮೊಗ್ಗ ಲೋಕಸಭಾ ಚುನಾವಣೆ | ಬೇಳೂರು ಗೋಪಾಲಕೃಷ್ಣ ಬಳಿಕ ನಾನು ಸಹ ಆಕಾಂಕ್ಷಿ ಎಂದ ಮತ್ತೊಬ್ಬ ಮುಖಂಡ

HS Sundaresh said that I am also an aspirant for Lok Sabha ticket in Congress ಕಾಂಗ್ರೆಸ್​ನಲ್ಲಿ ನಾನು ಸಹ ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಹೆಚ್​.ಎಸ್​ ಸುಂದರೇಶ್ ಹೇಳಿದ್ದಾರೆ

ಶಿವಮೊಗ್ಗ ಲೋಕಸಭಾ ಚುನಾವಣೆ | ಬೇಳೂರು ಗೋಪಾಲಕೃಷ್ಣ  ಬಳಿಕ  ನಾನು ಸಹ ಆಕಾಂಕ್ಷಿ ಎಂದ  ಮತ್ತೊಬ್ಬ ಮುಖಂಡ

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA |  ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ನಿಕ್ಕಿಯಾಗಲು ಇನ್ನೂ ಸಹ ಸಾಕಷ್ಟು ಸಮಯವಿದೆ. ಇದರ ನಡುವೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಇತ್ತೀಚೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಸಹ ನಾನು ಸಹ ಸಂಸದ ಸ್ಥಾನದ ಟಿಕೆಟ್ ಆಕಾಂಕ್ಷಿ ಎಂದಿದ್ದರು. ಇದರ ಬೆನ್ನಲ್ಲೆ ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

READ : ಬೇಳೂರು ಗೋಪಾಲಕೃಷ್ಣ V/s ಮಧು ಬಂಗಾರಪ್ಪ | ವಿರೋಧಕ್ಕೆ ಏನಂದ್ರು ಗೊತ್ತಾ ಉಸ್ತುವಾರಿ ಸಚಿವರು

ಕಳೆದ ಬಾರಿ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಕಾರಣ ಜೆಡಿಎಸ್‌ನಲ್ಲಿದ್ದ ಮಧು ಬಂಗಾರಪ್ಪ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಈ ಬಾರಿ ಲೋಕ ಸಮರಕ್ಕೆ ಜಿಲ್ಲೆಯಿಂದ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ್ ಗೌಡ ಅವರ ಹೆಸರು ಆರಂಭದಲ್ಲಿ ಕೇಳಿ ಬಂದಿತ್ತು. ಬಳಿಕ ಕುಮಾ‌ ಬಂಗಾರಪ್ಪ ಕಾಂಗ್ರೆಸ್‌ಗೆ ಬರುತ್ತಾರೆ. ಅವರೇ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯೂ ಹರಡಿತ್ತು. ಇದರ ಬೆನ್ನಲ್ಲೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಈ ಬಾರಿ ಟಿಕೆಟ್ ಫಿಕ್ಸ್ ಎಂಬ ಧ್ವನಿ ಗಟ್ಟಿಯಾಗಿ ಕೇಳಿ ಬಂದಿತ್ತು.  

READ : ಮಧು ಬಂಗಾರಪ್ಪ V/s ಬೇಳೂರು ಗೋಪಾಲಕೃಷ್ಣ! ಏನು ನಡೆಯುತ್ತಿದೆ ಶಿವಮೊಗ್ಗ ಕಾಂಗ್ರೆಸ್​ನಲ್ಲಿ?

ಮೊನ್ನೆಯಷ್ಟೇ ಬೇಳೂರು ಗೋಪಾಲಕೃಷ್ಣ ಅವರು ನಾನು ಆಕಾಂಕ್ಷಿನೇ, ಪಕ್ಷ ಅವಕಾಶ ಕೊಟ್ಟರೆ ರಾಘವೇಂದ್ರ ವಿರುದ್ಧ ನಾನು ಗೆದ್ದು ತೋರಿಸುತ್ತೇನೆ. ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಎಲ್ಲ ಬೆಳೆವಣಿಗೆಯ ನಡುವೆಯೇ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

37 ವರ್ಷಗಳಿಂದ ಪಕ್ಷ ಕಟ್ಟುವುದರ ಮೂಲಕ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತನಾಗಿ ಪಕ್ಷ ನೀಡಿದೆ. ಹಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ.ಕಳೆದಚುನಾವಣೆಯಲ್ಲೂ ಸಹಆಕಾಂಕ್ಷಿಯಾಗಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಕೈ ತಪ್ಪಿತ್ತು, ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.