ಮೋದಿ ಸಮಾವೇಶಕ್ಕಾಗಿ ಫ್ರೀಡಂ ಪಾರ್ಕ್‌ ತಲುಪುವುದು ಹೇಗೆ? ಇಲ್ಲಿದೆ ರೂಟ್‌ ಮ್ಯಾಪ್! ಪಾರ್ಕಿಂಗ್‌ ವಿವರ ತಿಳಿದುಕೊಳ್ಳಿ

Shivamogga Mar 17, 2024   How To Reach Freedom Park  ನಾಳೆ ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಹಿನ್ನೆಲೆಯಲ್ಲಿ :ಕಾರ್ಯಕ್ರಮಕ್ಕೆ  ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇಷ್ಟೆ ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರು ಹೇಗೆ ಬರಬೇಕು, ಎಲ್ಲಿ ವಾಹನಗಳನ್ನ ನಿಲ್ಲಿಸಬೇಕು ಎಂಬುದನ್ನ ಸಹ ಸ್ಪಷ್ಟಪಡಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ತಿಳಿಸಿರುವ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದ ವಿವರಗಳು ಇಲ್ಲಿದೆ 

ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:- ನ್ಯೂ ಮಂಡ್ಲಿ ಎಡಕ್ಕೆ ತಿರುಗಿ ಗೋಪಾಳ ಸರ್ಕಲ್ ಅಯ್ಯೋಳ ಸರ್ಕಲ್ ಬಲಕ್ಕೆ ತಿರುಗಿ ಎ.ಪಿ.ಎಂ.ಸಿ ಒಳ ಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳ ಭಾಗದಲ್ಲಿ ಪಾರ್ಕಿಂಗ್ ಮಾಡುವುದು.

ನಗರ ಹೊಸನಗರ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:- ಅಯ್ಯೋಳ ಸರ್ಕಲ್ ಸಾಗರ ರಸ್ತೆ ಅಯ್ಯೋಳ ಸರ್ಕಲ್ ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಮತ್ತು ಸೋಮಿನಕೊಪ್ಪ ಆದರ್ಶನಗರ ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು.

ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-ಬಸವನಗಂಗೂರು-ಬೊಮ್ಮನಕಟ್ಟೆ ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್,ಕೆ ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು.

ಹೊನ್ನಾಳಿ, ಹರಿಹರ ದಾವಣಗೆರೆ ಹಾವೇರಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-ಸವಳಂಗ ಬಸವನಗಂಗೂರು-ಬೊಮ್ಮನಕಟ್ಟೆ- ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು.

ಭದ್ರಾವತಿ-ಚಿಕ್ಕಮಗಳೂರು ಎನ್ ಆರ್ ಪುರ ಕೊಪ್ಪ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:- ಎಂ.ಆರ್, ಎಸ್ ಸರ್ಕಲ್ -ಬೈ ಪಾಸ್ ರಸ್ತೆ ಸಂದೇಶ್ ಮೋಟಾರ್ ಸರ್ಕಲ್ ನ್ಯೂ ಮಂಡ್ಲಿ ಸರ್ಕಲ್ -ಗೋಪಾಳ ಸರ್ಕಲ್ – ಆಡ್ಕೊಳ ಸರ್ಕಲ್ ಬಲಕ್ಕೆ – ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.

ಹೊಳೆಹೊನ್ನೂರು ಚನ್ನಗಿರಿ ಚಿತ್ರದುರ್ಗದ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು: ಹೊಳೆಹೊನ್ನೂರು ಸರ್ಕಲ್ ಶಂಕರ ಮಠ ಸರ್ಕಲ್-ಕೆ.ಇ.ಬಿ. ಸರ್ಕಲ್ -ರೈಲ್ವೇ ನಿಲ್ದಾಣ ರಸ್ತೆ -ಉಷಾ ಸರ್ಕಲ್ ಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ನೆಹರು ಕ್ರೀಡಾಂಗಣ ಶುವೆಂಪು ರಂಗಮಂದಿರ,ಎನ್.ಇ.ಎಸ್ ಮೈದಾನ ಶೇಷಾದ್ರಿಪುರಂ ಗೂಡ್ಸ್ ಶೆಡ್, ಸೈನ್ಸ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು