ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಮನೆಮನೆಗೆ ಪೊಲೀಸ್ ಅಭಿಯಾನದಿಂದ ಮತ್ತೊಂದು ಅನುಕೂಲವಾಗಿದೆ. ಈ ಹಿಂದೆ ಮನೆ ಮನೆಗೆ ಪೊಲೀಸ್ ಅಭಿಯಾನದಲ್ಲಿ ರಕ್ಷಣೆ ಅವಶ್ಯಕತೆ ಇದ್ದ ಮಕ್ಕಳಿಗೆ ಪೊಲೀಸರು ಆಸರೆ ಒದಗಿಸುವಲ್ಲಿ ಶ್ರಮಿಸಿದ್ದರು. ಇದೀಗ ಕಾರ್ಗಲ್ ಪೊಲೀಸರ ಮನೆಮನೆ ಭೇಟಿಯಿಂದಾಗಿ ಈ ಭಾಗದಲ್ಲಿ ಬಿಎಸ್ಎನ್ಎಲ್ ಟವರ್ ವರ್ಕ್ ಆಗುವಂತಾಗಿದೆ. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, ವರದಿಯನ್ನ ಎಸ್ಪಿ ಮಿಥುನ್ ಕುಮಾರ್ರವರು ಮಾಧ್ಯಮ ಗ್ರೂಪ್ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಮೊಬೈಲ್ ನೆಟ್‌ವರ್ಕ್ ನಡುವೆ ಯಾವುದೇ ನೇರ ಸಂಬಂಧವಿಲ್ಲದಿದ್ದರೂ, ಕಾರ್ಗಲ್ ಪೊಲೀಸರು ತಮ್ಮ ‘ಮನೆಮನೆ ಪೊಲೀಸ್’ ಯೋಜನೆಯ ಮೂಲಕ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಬಿಎಸ್‌ಎನ್‌ಎಲ್ ಮೊಬೈಲ್ ಸಿಗ್ನಲ್ ಅನ್ನು ಪುನಃಸ್ಥಾಪಿಸಲು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅರಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಅರಳಗೋಡು, ಬಿದರೂರು ಮತ್ತು ಕಾಳಮಂಜಿಯಲ್ಲಿ ಬಿಎಸ್ಎನ್‌ಎಲ್ ಸಿಗ್ನಲ್ ಸಮರ್ಪಕವಾಗಿ ಇರಲಿಲ್ಲ. ಈ ಸಂಬಂಧ ‘ಮನೆಮನೆಗೆ ಪೊಲೀಸ್’ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮಕ್ಕೆ ಭೇಟಿದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ‘
ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಅವರೊಂದಿಗೆ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಷ್ಟೆ ಅಲ್ಲದೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದ್ದರು. ವಿಚಾರ ತಿಳಿದು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಕರೆ ಮಾಡಿದ ಪಿಎಸ್‌ಐ ಸಮಸ್ಯೆ ಬಗ್ಗೆ ತಿಳಿಸಿ, ಇತ್ಯರ್ಥ ಪಡಿಸಿ ಎಂದು ಮನವಿ ಮಾಡಿದ್ದರು. ಅಲ್ಲದೆ ವಿಚಾರವನ್ನು ಫಾಲೋಅಪ್ ಮಾಡಿ ಅಧಿಕಾರಿಗಳ ಗಮನ ಸೆಳೆದರು. ಪರಿಣಾಮವಾಗಿ ಮೊಬೈಲ್ ಟವರ್ ಅನ್ನು ದುರಸ್ತಿಗೊಂಡು ಬಿಎಸ್ಎನ್ಎಲ್ ಸಿಗ್ನಲ್ ಸಿಗುವಂತಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
How Kargal Police Restored BSNL Signal