hosanagara Landslide / ಹೊಸನಗರದಲ್ಲಿ ಭೂ ಕುಸಿತ / ರಸ್ತೆಯಲ್ಲೆ 5 ಅಡಿ ತಗ್ಗಿಗಿಳಿದ ಮಣ್ಣು

Malenadu Today

hosanagara Landslide Hosangara news

ಹೊಸನಗರ: ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತದ ಆತಂಕ ಮತ್ತೆ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ  ಭೂಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. 

ಅರಮನೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಸುಮಾರು 200 ಮೀಟರ್ ನಷ್ಟು ಉದ್ದ ಮತ್ತು ಒಂದೂವರೆ ಅಡಿಯಷ್ಟು ಆಳದಲ್ಲಿ ಭೂಮಿ ಕುಸಿದಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು. 

ಭೂ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಈ ರೀತಿಯ ಘಟನೆಗಳು ಮಲೆನಾಡು ಭಾಗದ ನಿವಾಸಿಗಳಿಗೆ ಹೊಸ ಸವಾಲುಗಳನ್ನು ಒಡ್ಡಿವೆ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

hosanagara Landslide Hosangara news
hosanagara Landslide Hosangara news

ಮಲೆನಾಡು ಪ್ರದೇಶದ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಓದಲು, ಗೆ ಭೇಟಿ ನೀಡಿ ಮಲೆನಾಡು ಟುಡೆ   

ಹೊಸನಗರ ತಾಲ್ಲೂಕಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿಕಿಪೀಡಿಯಾ

 

ಮಲೆನಾಡಿನಲ್ಲಿ ಭೂಕುಸಿತ ಆತಂಕ: ಹೊಸನಗರದ ಕುಂದಗಲ್‌ನಲ್ಲಿ ರಸ್ತೆ ಕುಸಿತ!

 

Share This Article