ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಬೈಕ್ವೊಂದಕ್ಕೆ ಗುದ್ದಿ ಎಸ್ಕೇಪ್ ಆಗುತ್ತಿದ್ದ ವಾಹನವನ್ನು ಪೊಲೀಸರೇ ಹಿಂಬಾಲಿಸಿ ಹಿಡಿದು, ಚಾಲಕ ಹಾಗೂ ವೆಹಿಕಲ್ನ್ನ ವಶಕ್ಕೆ ಪಡೆದ ಘಟನೆಯೊಂದು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದಿದ್ದೇನು?
ಮಾಳೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ 15 ನೇ ಮೈಲಿಕಲ್ಲು ಬಳಿ ತೀರ್ಥಹಳ್ಳಿಗೆ ಬೈಕ್ನಲ್ಲಿ ಹೋಗುತ್ತಿದ್ದ ಸವಾರನೊಬ್ಬರಿಗೆ ಅಶೋಕಾ ಲೈಲಾಂಡ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿದ್ದ ಪಿಕಪ್ ಚಾಲಕ, ಆಕ್ಸಿಡೆಂಟ್ ಮಾಡಿದರೂ, ಅಲ್ಲಿ ವಾಹನ ನಿಲ್ಲಿಸದೇ ಮುಂದಕ್ಕೆ ಸಾಗಿದ್ದಾನೆ. ಈ ನಡುವೆ ಸ್ಥಳದಲ್ಲಿದ್ದ ಸ್ಥಳೀಯರು ಅಪಘಾತಕ್ಕೀಡಾದ ಬೈಕ್ ಸವಾರನ ಆರೈಕೆ ಮುಂದಾದರು. ಆತನನ್ನು ಕಾರಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ ಸ್ಥಳೀಯರು ತಕ್ಷಣವೇ ಮಾಳೂರು ಪೊಲೀಸ್ ಸ್ಟೇಷನ್ಗೆ ಫೋನಾಯಿಸಿದ್ದಾರೆ. ಡ್ಯೂಟಿಯಲ್ಲಿದ್ದ ಎಸ್ಐ ಕುಮಾರ್ ಹಾಗೂ ಮುಖ್ಯಪೇದೆ ಅಭಿ ಅಪಘಾತವೆಸಗಿದ ಪಿಕಪ್ನ್ನ ಬೆನ್ನಟ್ಟಿ ಹೊರಟಿದ್ದಾರೆ. ಬಳಿಕ ಬೇಗುವಳ್ಳಿ ಬಳಿಯಲ್ಲಿ ಪಿಕಪ್ ಅಡ್ಡಗಟ್ಟಿದ ಪೊಲೀಸರು ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಹಿಟ್ ಆಂಡ್ ರನ್ ಕೇಸ್ನಲ್ಲಿ ಅಪಘಾತಕ್ಕೀಡು ಮಾಡಿದ ವಾಹನವನ್ನ ವಶಕ್ಕೆ ಪಡೆದ ಹಾಗೂ ತುರ್ತು ಸಂದರ್ಭದಲ್ಲಿ ನೆರವಾದ ಪೊಲೀಸ್ ಸಿಬ್ಬಂದಿ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತವಾಗಿದೆ.

ಅರ್ಜೆಂಟಿಗೆ ಸಿಗದ 108 ಆಂಬುಲೆನ್ಸ್
ಇನ್ನೂ ಈ ಭಾಗದಲ್ಲಿ ಪ್ರತಿದಿನ ಒಂದಲ್ಲ ಒಂದು ಆಕ್ಸಿಡೆಂಟ್ ಆಗುತ್ತಲೇ ಇರುತ್ತದೆ. ಆದರೆ ಮಾಳೂರಿನಲ್ಲಾಗಲಿ, ಬೆಜ್ಜವಳ್ಳಿಯಲ್ಲಾಗಲಿ, ಇತ್ತ ಮಂಡಗದ್ದೆಯಲ್ಲಾಗಲಿ 108 ಆಂಬುಲೆನ್ಸ್ಗಳು ಇಲ್ಲ. ಒಂದೊ ತೀರ್ಥಹಳ್ಳಿಯಿಂದ ಬರಬೇಕು, ಇಲ್ಲವಾದರೆ ಶಿವಮೊಗ್ಗದಿಂದ 108 ಆಂಬುಲೆನ್ಸ್ನ್ನು ಕರೆಸಿಕೊಳ್ಳಬೇಕು. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಅರ್ಜೆಂಟಿಗೆ 108 ಲಭ್ಯವಾಗದೇ ಇರುವುದರಿಂದ ಗಾಯಗೊಂಡವರನ್ನ ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸುವುದು ಕಷ್ಟವಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಖಾಸಗಿ ವಾಹನಗಳನ್ನೆ ಅವಲಂಭಿಸಬೇಕಾಗಿದೆ. ಇವತ್ತು ಸಹ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಲು ವಾಹನದ ಏರ್ಪಾಡು ಮಾಡುವಷ್ಟರಲ್ಲಿ ಸಾಕ್ಬೇಕಾಯ್ತು ಎನ್ನುತ್ತಿದ್ದಾರೆ ಸ್ಥಳೀಯರು. ಸಂಬಂಧಪಟ್ಟ ಆಡಳಿತ ಈ ಬಗ್ಗೆ ಗಮನಹರಿಸಲಿ ಎನ್ನುವ ಸ್ಥಳೀಯರು, ತುರ್ತು ಸಂದರ್ಭದಲ್ಲಿ ನೆರವಾಗುವ ಜವಾಬ್ದಾರಿ ಸ್ಥಳಿಯರದ್ದೆ ಅಷ್ಟೆಅಲ್ಲದೆ ಸ್ಥಳೀಯ ಆಡಳಿತ ವ್ಯವಸ್ಥೆಯದ್ದು ಆಗಿರುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
