ಶಿವಮೊಗ್ಗದಲ್ಲಿ ಕಟ್ಟೆಚ್ಚರ: ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಶ್ವಾನದಳದಿಂದ ಬಿಗಿ ತಪಾಸಣೆ : ಕಾರಣವೇನು

prathapa thirthahalli
Prathapa thirthahalli - content producer

High Alert in Shivamogga ನವೆಂಬರ್ 11, 2025 | ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್ : ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಬಿಗಿ ಬಂದೋಬಸ್ತ್‌ಗಾಗಿ ಸೂಚನೆ ನೀಡಲಾಗಿದೆ. ಇದರನ್ವಯ,ಶಿವಮೊಗ್ಗ ನಗರದಲ್ಲೂ ಅಹಿತಕರ ಘಟನೆಗಳನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.

ಬ್ಯಾಂಕ್ ಸಿಬ್ಬಂದಿಯಿಂದ ಅಸಭ್ಯ ನಡೆ! ಅಪಪ್ರಚಾರ! ಉಡುಪಿ ಜಿಲ್ಲೆಯ ದೂರು, ಶಿವಮೊಗ್ಗಕ್ಕೆವರ್ಗ!

ಸರ್ಕಾರದ ಸೂಚನೆಯಂತೆ, ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ಹಾಗೂ ರೈಲ್ವೆ ಪೊಲೀಸರು ಜಂಟಿಯಾಗಿ ತಪಾಸಣೆ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ರೈಲ್ವೆ ನಿಲ್ದಾಣದ ಪ್ರತೀ ಮೂಲೆ, ಮೂಲೆಯಲ್ಲಿ ಶ್ವಾನದಳ (ಡಾಗ್ ಸ್ಕ್ವಾಡ್) ಮತ್ತು ಬಾಂಬ್ ನಿಷ್ಕ್ರಿಯ ದಳದ (ಬಾಂಬ್ ಸ್ಕ್ವಾಡ್) ತಂಡಗಳು ಪರಿಶೀಲನೆ ನಡೆಸುತ್ತಿವೆ. ಪ್ರಯಾಣಿಕರ ಲಗ್ಗೇಜ್‌ಗಳು ಮತ್ತು ಇತರೆ ಸರಂಜಾಮುಗಳನ್ನು ಪರಿಶೀಲಿಸಲಾಗುತ್ತಿದೆ.

High Alert in Shivamogga
High Alert in Shivamogga

ರೈಲ್ವೆ ನಿಲ್ದಾಣದ ಜೊತೆಗೆ, ನಗರದ ಹೆಚ್ಚಿನ ಜನಸಂದಣಿ ಸೇರುವ ಪ್ರದೇಶಗಳಾದ ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಮಾಲ್‌ಗಳು ಹಾಗೂ ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳ ಪತ್ತೆಗಾಗಿ ಶ್ವಾನದಳವನ್ನು ಬಳಸಿಕೊಂಡು ಈ ಪ್ರದೇಶಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ.

High Alert in Shivamogga Following Delhi Red Fort Blast Security Tightened at Railway Station and Public Places

High Alert in Shivamogga

Share This Article