ಹಲೋ ಶಿವಮೊಗ್ಗ ಹೀಗೂ ಆಗುತ್ತೆ! ಅದಲು ಬದಲಾಯ್ತು ಒಂದೇ ಥರದ Apache ಬೈಕ್​! ಮಾಲೀಕರು ಶಾಕ್

SHIVAMOGGA  |  Jan 26, 2024  |  ನಂಬುವುದು ಬಿಡುವುದು ನಿಮಗೆ ಸೇರಿದ್ದು.  ಶಿವಮೊಗ್ಗದಲ್ಲಿ ನಡೆದ ಘಟನೆಯು ವಿಶೇಷವಾಗಿ ಅಚ್ಚರಿ ಮೂಡಿಸ್ತಿದೆ. ಹೀಗೂ ಆಗುತ್ತಾ ಕೇಳುವಂತೆ ಮಾಡ್ತಿದೆ. ಒಂದೇ ರೀತಿಯ ಇರುವ ಎರಡು ಬೈಕ್​ಗಳು ಅದಲು ಬದಲಾಗಿದ್ದರ ಬಗ್ಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಿಂದ ವರದಿಯಾಗಿದೆ. 

ಹೌದು, ಇಂತಹದ್ದೊಂದು ಘಟನೆ ನಡೆದಿದೆ. ಈ ಸಂಬಂಧ ಪೊಲೀಸರಿಗೆ ದೂರು ಸಹ ಬಂದಿದ್ದು, ಸ್ಥಳಕ್ಕೆ ತೆರಳಿದ್ದ ಪೊಲೀಸರು ಸಮಸ್ಯೆಯನ್ನು ತಮ್ಮ ತಾಂತ್ರಿಕತೆಯ ಸಹಾಯ ಪಡೆದು ಸ್ಥಳದಲ್ಲಿಯೇ ಬಗೆಹರಿಸಿದ್ದಾರೆ. 

ಏನಾಯ್ತು?

ಶಿವಮೊಗ್ಗ ನಗರದಲ ಏರಿಯಾ ಒಂದರಲ್ಲಿ   ದಿ:24.01.2024 ರಂದು ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಕರೆ ಮಾಡಿ ಸರ್​, ನನ್ನ ಬೈಕ್​ ಅದಲು ಬದಲಾಗಿದೆ ಎಂದಿದ್ದಾರೆ. ಬೈಕ್​ ಚಾಲಕರೊಬ್ಬರು ತಮ್ಮ ಗಮನಕ್ಕೆ ಬಾರದೇ  Apache ಬೈಕನ್ನು ಅದಲು ಬದಲು ಮಾಡಿಕೊಂಡು  ಹೋಗಿದ್ದಾರೆ. ಈಗ ಏನು ಮಾಡಬೇಕು ಎಂದು ತಿಳಿತ್ತಿಲ್ಲ ಎಂದಿದ್ದಾರೆ. 

MCCTNS app

ವಿಚಾರದ ಬಗ್ಗೆ ಮೊದಲೇ ಸ್ಪಷ್ಟ ಮಾಹಿತಿಯನ್ನು ಪಡೆದ ಪೊಲೀಸರು 112 ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ, ಬೈಕ್ ಮಾಲೀಕನ ದಾಖಲೆಗಳನ್ನ ಪಡೆದು ಅದನ್ನು ಖಾತರಿಪಡಿಸಿಕೊಂಡಿದ್ದಾರೆ. ಆನಂತರ  MCCTNS app ನಾ ಮೂಲಕ ಬದಲಾಗಿದ್ದ ಬೈಕ್​ನ ಮಾಲೀಕನ  ಮೊಬೈಲ್ ನಂಬರನ್ನು ಪತ್ತೆ ಹಚ್ಚಿದ್ದಾರೆ. 

ಆ ಬಳಿಕ ಆತನಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ್ಧಾರೆ. ಆ ಕಡೆಯಿಂದ ವಿಚಾರ ತಿಳಿದು ಸ್ಥಳಕ್ಕೆ ವ್ಯಕ್ತಿ ಬಂದಿದ್ದಾನೆ. ಇಬ್ಬರು ಬೈಕ್​ ಮಾಲೀಕರನ್ನ  ವಿಚಾರಿಸಿದ ಪೊಲೀಸರು ಬೈಕ್​ ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಆನಂತರ ಅವರವರ ಬೈಕ್​ನ್ನ ಅವರವರಿಗೆ ಕೊಟ್ಟಿದ್ದಾರೆ. ಇಬ್ಬರು ವ್ಯಕ್ತಿಗಳ ಮಾಹಿತಿಯನ್ನ ಪಡೆದುಕೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.  


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು