heavy vehicle traffic banned Agumbe Ghat /ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಆಗುಂಬೆ ಘಾಟಿಯಲ್ಲಿ ಹೆವಿ ವೆಹಿಕಲ್​ಗಳಿಗೆ ನಿರ್ಬಂಧ

Malenadu Today

heavy vehicle traffic banned Agumbe Ghat 

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಜೋರಾಗುತ್ತಿದೆ. ಈ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಮತ್ತು ದೊಡ್ಡ ವಾಹನಗಳ ಸಂಚಾರದಿಂದಾಗಿ ಘಾಟಿಯಲ್ಲಿ ಭೂಕುಸಿತದ ಸಂಭವಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಷೇಧವು ಜಲ್ಲಿ ಮತ್ತು ಇತರ ಸರಕುಗಳನ್ನು ಸಾಗಿಸುವ ಲಾರಿಗಳಿಗೆ ಅನ್ವಯಿಸುತ್ತದೆ.ನಿರ್ಬಂಧಿತ ಅವಧಿಯಲ್ಲಿ ಹೆವಿ ವೆಹಿಕಲ್​ಗಳು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು  ಸೂಚಿಸಿದ್ದಾರೆ. ಶಿಫಾರಸು ಮಾಡಲಾದ ಮಾರ್ಗಗಳು ಹೀಗಿವೆ:

ಉಡುಪಿ–ಕುಂದಾಪುರ–ಸಿದ್ದಾಪುರ– ಮಾಸ್ತಿಕಟ್ಟೆ–ತೀರ್ಥಹಳ್ಳಿ,  

heavy vehicle traffic banned Agumbe Ghat /
agumbe ghat traffic jam

 

Share This Article