ರಿಪ್ಪನ್​ ಪೇಟೆ : ಸೌದಿ ಅರೇಬಿಯಾದಿಂದ ಬಂದ 48 ಗಂಟೆಗಳಲ್ಲೇ ಯುವಕ ಹೃದಯಾಘಾತದಿಂದ ಸಾವು

prathapa thirthahalli
Prathapa thirthahalli - content producer

Heart Attack ರಿಪ್ಪನ್‌ಪೇಟೆ, ನವೆಂಬರ್ 11, 2025, ಮಲೆನಾಡುಟುಡೆ ನ್ಯೂಸ್: ವಿದೇಶದಲ್ಲಿ ದುಡಿದು ತಾಯ್ನಾಡಿಗೆ ಮರಳಿದ ಕೇವಲ ಎರಡು ದಿನಗಳಲ್ಲೇ ಯುವಕನೊಬ್ಬ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ ಘಟನೆ ರಿಪ್ಪನ್‌ಪೇಟೆಯ ಮದೀನಾ ಕಾಲೋನಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. 

Heart Attack  Young Man Imran Dies of Heart Attack in Ripponpete
Imran

ಶಿವಮೊಗ್ಗ : ಚಿನ್ನದ ಸರವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ವ್ಯಕ್ತಿ

ಮೃತರನ್ನು 36 ವರ್ಷ ವಯಸ್ಸಿನ ಇಮ್ರಾನ್ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವೃತ್ತಿಪರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಕೇವಲ ಎರಡು ದಿನಗಳ ಹಿಂದೆ ಕುಟುಂಬವನ್ನು ಸೇರಲು ಸ್ವಗ್ರಾಮಕ್ಕೆ ಮರಳಿದ್ದರು. 

ದುರದೃಷ್ಟವಶಾತ್, ಇಂದು ಬೆಳಗಿನ ಜಾವ ಇಮ್ರಾನ್ ಅವರಿಗೆ ತಮ್ಮ ಮನೆಯಲ್ಲಿ ತೀವ್ರವಾದ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಶಿವಮೊಗ್ಗದ  ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಲಾಯಿತಾದರೂ, ಮಾರ್ಗ ಮಧ್ಯದಲ್ಲಿಯೇ ಅವರು ಪ್ರಾಣ ಕಳೆದುಕೊಂಡರು.

  Young Man Imran Dies of Heart Attack in Ripponpete

Heart Attack  Young Man Imran Dies of Heart Attack in Ripponpete

 

Share This Article