ಹಣಗರೆಕಟ್ಟೆಯಲ್ಲಿ ಹುಂಡಿ ಎಣಿಕೆ, ಸಂಗ್ರಹವಾದ ಹಣವೆಷ್ಟು 

ಹಣಗೆರೆಕಟ್ಟೆ : ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆಯ ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ ಹಾಗೂ ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಎಣಿಕೆ ಕಾರ್ಯವು ಬುಧವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಅವರ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಭಕ್ತರಿಂದ ದೊಡ್ಡ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. 

Hanagerekatte Temple & Dargah Hundi Collection
Hanagerekatte Temple & Dargah Hundi Collection

ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್​ ಆಫ್! ಸಿಗದ ಮಾಹಿತಿ

ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಎಣಿಕೆಯಲ್ಲಿ ಒಟ್ಟು 62,42,145 ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದರಲ್ಲಿ 2,45,695 ರೂಪಾಯಿ ಚಿಲ್ಲರೆ ನಾಣ್ಯಗಳೂ ಸೇರಿವೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಎಣಿಕೆಯ ಸಂದರ್ಭದಲ್ಲಿ 71.95 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. 

ಈ ಸಂದರ್ಭದಲ್ಲಿ  ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಹೊಸಮನಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಪ್ಪ ಹಾಗೂ ಸಮಿತಿಯ ವಿವಿಧ ಸದಸ್ಯರು ಉಪಸ್ಥಿತರಿದ್ದರು. ಕಂದಾಯ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮತ್ತು ಮಾಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಈ ಕಾರ್ಯವನ್ನು ಪೂರೈಸಿದರು.

Hanagerekatte Temple & Dargah Hundi Collection

Hanagerekatte Temple & Dargah Hundi Collection
Hanagerekatte Temple & Dargah Hundi Collection

 

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು