Good day ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತುವಿನಲ್ಲಿ ಮಾರ್ಗಶಿರ ಮಾಸದ ಶುಭ ದಿನವಾದ ಇಂದು ರಾತ್ರಿ 7.25 ರವರೆಗೆ ಬಹುಳ ನವಮಿ ತಿಥಿ ಇರುತ್ತದೆ, ನಂತರ ದಶಮಿ ತಿಥಿ ಆರಂಭವಾಗುತ್ತದೆ. ನಕ್ಷತ್ರದ ವಿಚಾರಕ್ಕೆ ಬಂದರೆ, ಹಸ್ತ ನಕ್ಷತ್ರದ ಈ ದಿನ ಶುಭ ಕಾರ್ಯಗಳಿಗೆ ಉತ್ತಮವಾದ ಅಮೃತ ಘಳಿಗೆ ಮುಂಜಾನೆ 4.36 ರಿಂದ 6.20 ರವರೆಗೆ ಇದೆ. ರಾಹುಕಾಲವು ಬೆಳಗ್ಗೆ 9.00 ರಿಂದ 10.30 ರವರೆಗೆ ಇದ್ದು ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಆರೋಗ್ಯ, ವ್ಯವಹಾರ, ಉದ್ಯೋಗ, ದಿನವಿಶೇಷ! ಇವತ್ತಿನ ದಿನಭವಿಷ್ಯ!
ಇವತ್ತಿನ ರಾಶಿಫಲ/ Good day
ಮೇಷ : ವ್ಯವಹಾರಗಳಲ್ಲಿ ಪ್ರಗತಿ. ವಸ್ತು ಲಾಭ. ಸ್ನೇಹಿತರೊಂದಿಗೆ ಹಿಂದೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯ ತಿಳಿಯಾಗುತ್ತವೆ. ಹೊಸ ಉದ್ಯೋಗ ಸಂಪಾದಿಸುವಿರಿ. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ ಸುಗಮವಾಗಿ ಸಾಗಲಿದೆ, ಉದ್ಯೋಗದಲ್ಲಿ ಹೊಸ ಹುರುಪು
ವೃಷಭ : ಕೆಲಸಗಳಲ್ಲಿ ಅಡೆತಡೆ. ದೂರ ಪ್ರಯಾಣ. ಮನೆ ಮತ್ತು ಹೊರಗೆ ಸಣ್ಣಪುಟ್ಟ ಸಮಸ್ಯೆ ಎದುರಿಸಬೇಕಾಗಬಹುದು. ಅನಾರೋಗ್ಯದ ಚಿಂತೆ. ಕುಟುಂಬದಲ್ಲಿ ಆರ್ಥಿಕ ಒತ್ತಡ. ದೈವ ದರ್ಶನ. ವ್ಯಾಪಾರ ವ್ಯವಹಾರ ಸಾಧಾರಣವಾಗಿ ಮುಂದುವರೆಯುತ್ತವೆ ಮತ್ತು ಉದ್ಯೋಗದಲ್ಲಿ ಕೆಲಸದ ಭಾರವ ಹೆಚ್ಚು.

ಮಿಥುನ : ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಕೈಗೆತ್ತಿಕೊಂಡ ಕೆಲಸ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ಬಂಧುಮಿತ್ರರೊಂದಿಗೆ ವಾಗ್ವಾದ. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ-ವ್ಯವಹಾರದಲ್ಲಿ ಉತ್ಸಾಹ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ
ಕರ್ಕಾಟಕ : ಉತ್ತಮ ಬಾಂಧವ್ಯವದ ದಿನ, ವಿನೋದ ಕೂಟಗಳಲ್ಲಿ ಪಾಲ್ಗೊಳ್ಳುವಿರಿ. ಕೈಗೆತ್ತಿಕೊಂಡಿರುವ ಕೆಲಸ ಪೂರ್ಣವಾಗುವುದು, ಹೊಸ ವಸ್ತು ಮತ್ತು ವಸ್ತ್ರ ಲಾಭ. ಪ್ರಮುಖ ನಿರ್ಣಯ ಕೈಗೊಳ್ಳಲು ಇದು ಉತ್ತಮ ಸಮಯ. ವ್ಯಾಪಾರ ವಿಸ್ತರಣೆ, ಉದ್ಯೋಗದಲ್ಲಿನ ಒತ್ತಡ.
ಸಿಂಹ: ಸ್ನೇಹಿತರು ಮತ್ತು ಬಂಧುಗಳೊಂದಿಗೆ ಅನಗತ್ಯವಾದ ವಾಗ್ವಾದ. ಅನಿರೀಕ್ಷಿತ ಪ್ರಯಾಣ. ಪ್ರಮುಖ ಕೆಲಸ ಮುಂದಕ್ಕೆ ಹೋಗಬಹುದು ಗೊಂದಲಮಯ ಆಲೋಚನೆ . ದೈವಚಿಂತನೆ. ವ್ಯಾಪಾರದಲ್ಲಿ ಧನಲಾಭ, ಉದ್ಯೋಗದಲ್ಲಿ ಇಲ್ಲದ ಹೊಸ ಸಾಧ್ಯತೆಗಳು ಕಣ್ಮುಂದೆ ಬರುವುದು.
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಕನ್ಯಾ : ಮನರಂಜನೆಯ ದಿನ, ಆರ್ಥಿಕ ಇಕ್ಕಟ್ಟು ನಿವಾರಣೆ. ಆಸ್ತಿ ಸಂಬಂಧಿತ ವಿವಾದಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಮಾತುಕತೆ ಯಶಸ್ವಿಯಾಗಿ ಮುಗಿಯುತ್ತವೆ. ವ್ಯಾಪಾರ ಪುನಃ ಚೇತರಿಸಿಕೊಳ್ಳುತ್ತವೆ. ಉದ್ಯೋಗದಲ್ಲಿ ಬಯಸಿದಂತಹ ಬದಲಾವಣೆ ಕಾಣುವಿರಿ
ತುಲಾ : ಒತ್ತಡ ಎದುರಾಗಬಹುದು. ಆಧ್ಯಾತ್ಮಿಕ ಚಿಂತನೆಯಲ್ಲಿ ಹೆಚ್ಚು ಸಮಯ ಕಳೆಯುವರು. ಕೆಲಸ ಕಾರ್ಯಗಳಲ್ಲಿ ಹೊಸ ಸಾಧ್ಯತೆ , ಶ್ರಮ ಹೆಚ್ಚಾಗಬಹುದು. ಆಸ್ತಿ ವಿವಾದ, ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು.
ವೃಶ್ಚಿಕ : ವಿಶೇಷ ಕಾರ್ಯಕ್ರಮದ ಆಹ್ವಾನ ಬರಲಿವೆ. ಕೈಗೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಕೆಲವೊಂದು ಬದಲಾವಣೆ ಮಾಡುವಿರಿ. ದೇವಾಲಯಗಳಿಗೆ ಭೇಟಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುತ್ತಾರೆ. ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಹೊಸ ಸ್ಥಾನಮಾನ

ಧನುಸ್ಸು : ಸ್ನೇಹಿತರಿಂದ ಧನಲಾಭ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವರು. ಕೈಗೊಂಡಿರುವ ಕೆಲಸ ಅಡೆತಡೆ ಇಲ್ಲದೆ ಸಾಗುತ್ತವೆ. ಹೊಸ ಒಪ್ಪಂದಗಳಿಗೆ ಸಹಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಹೊಸ ವಿಶೇಷ.
ಮಕರ : ವ್ಯವಹಾರ ನಿಧಾನವಾಗುವ ಸಾಧ್ಯತೆ ಇದೆ. ದೂರ ಪ್ರಯಾಣ. ಕುಟುಂಬದ ಸದಸ್ಯರೊಂದಿಗೆ ಮುನಿಸು, ಆಸ್ತಿ ಸಂಬಂಧಿತ ವಿವಾದ. ಅನಾರೋಗ್ಯದ ಸಮಸ್ಯೆ. ಅನಗತ್ಯ ಶ್ರಮ ಅನಿವಾರ್ಯ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ
ಮಲೆನಾಡು APMCಗಳಲ್ಲಿ ಅಡಿಕೆ ವಹಿವಾಟು ಜೋರು! ಶಿವಮೊಗ್ಗ, ಸಾಗರ, ಯಲ್ಲಾಪುರ, ಶಿರಸಿ! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ
ಕುಂಭ : ಸ್ನೇಹಿತರೊಂದಿಗೆ ವಾಗ್ವಾದ. ಹೊಸ ಉದ್ಯೋಗ ಪ್ರಯತ್ನ. ಆರೋಗ್ಯದ ಸಮಸ್ಯೆ ಕಾಡಬಹುದು. ಕೆಲವು ವ್ಯವಹಾರ ನಿಧಾನವಾಗಿ ಸಾಗುತ್ತವೆ. ಸಹೋದರರಿಂದ ಒತ್ತಡ. ವ್ಯಾಪಾರ ಸಣ್ಣ ಪ್ರಮಾಣದ ಲಾಭ ತಂದುಕೊಡುತ್ತವೆ. ಉದ್ಯೋಗಗಳಲ್ಲಿ ಹೆಚ್ಚಿನ ಒತ್ತಡ ಎದುರಿಸಬೇಕಾಗುತ್ತದೆ.
ಮೀನ : ಶುಭವಾರ್ತೆ, ಆರ್ಥಿಕ ಪರಿಸ್ಥಿತಿ ತೃಪ್ತಿ ನೀಡುತ್ತದೆ. ಕೆಲವು ಸಮಸ್ಯೆ. ಹೊಸ ವಾಹನ ಯೋಗ. ವ್ಯಾಪಾರ-ವ್ಯವಹಾರ ಸರಾಗವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕೆಲಸದ ಭಾರ ಜಾಸ್ತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

