ಗ್ರಂಥಾಲಯದಿಂದ ವಾಪಸ್​ ಬರುತ್ತಿದ್ದ ಯುವತಿಯ ಮೇಲೆ ಗುಂಡು ಹಾರಿಸಿದ ವ್ಯಕ್ತಿ : ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

prathapa thirthahalli
Prathapa thirthahalli - content producer

Girl Shot at Near Home ಫರಿದಾಬಾದ್ (ಹರಿಯಾಣ): ನಗರದಲ್ಲಿ ಗ್ರಂಥಾಲಯದಿಂದ ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳಿಗೆ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ. ಆತ ಗುಂಡು ಹಾರಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆ ನಿನ್ನೆ ಸೋಮವಾರ  ಸಂಜೆ ಸುಮಾರು 5.30 ಗಂಟೆಗೆ ಯುವತಿಯ ಮನೆಯ ಸಮೀಪದಲ್ಲಿ ನಡೆದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸದ್ದಾರೆ.

- Advertisement -

ಘಟನೆಯ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಮಾಹಿತಿ ಬಂದ ತಕ್ಷಣವೇ ನಾವು ಸ್ಥಳಕ್ಕೆ ತಲುಪಿದೆವು ಮತ್ತು ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ (FIR) ಅನ್ನು ದಾಖಲಿಸಲಾಗಿದೆ,ಎಂದು ತಿಳಿಸಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಗೆ ಗುಂಡು ಹಾರಿಸಿದ ಯುವಕ ಆಕೆಗೆ ಪರಿಚಯವಿರುವವನು ಎಂದೇ ತಿಳಿದುಬಂದಿದೆ. ಆಕೆ ಗ್ರಂಥಾಲಯದಿಂದ ಮನೆಗೆ ಬರುತ್ತಿದ್ದಾಗ ಈ ದಾಳಿ ನಡೆಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

Girl Shot at Near Home

Share This Article