ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ರಿಯಾಲಿಟಿ ಷೋಗಾಗಿ ಡಿ. 14ರಂದು ಬೆಳಗ್ಗೆ 10ಗಂಟೆಗೆ ನಗರದ ಸವಳಂಗ ರಸ್ತೆ ಬಸವೇಶ್ವರ ನಗರ 3ನೇ ಕ್ರಾಸ್ ನ ಆಕ್ಸ್ಫರ್ಡ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಆಡಿಷನ್ ನಡೆಯಲಿದೆ.

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
5ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್ ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮಕ್ಕಳು ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ರಿಯಾಲಿಟಿ ಷೋದಲ್ಲಿ ಜನಪ್ರಿಯ ಟಿವಿ ಕಲಾವಿದರೊಂದಿಗೆ ಪಾಲ್ಗೊಳ್ಳಬಹುದು.
ಅವರಿಗೆ ಅತ್ಯುತಮ ತರಬೇತಿಯನ್ನೂ ನೀಡಲಾಗುತ್ತದೆ. ಮಕ್ಕಳ ಸಂಭಾಷಣಾ ಸಾಮರ್ಥ, ತಕ್ಷಣದ ಪ್ರತಿಕ್ರಿಯೆ, ಕಥೆ ಹೇಳುವ ಶೈಲಿ ಇತ್ಯಾದಿ ಅಂಶಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಶಿವಮೊಗ್ಗದ ಆಡಿಷನ್ನಲ್ಲಿ ಆಯ್ಕೆಯಾದ ಮಕ್ಕಳಿಗೆ ಮುಂದಿನ ಹಂತಗಳ ಆಡಿಷನ್ಸ್ ಮತ್ತು ಅಂತಿಮ ಆಯ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ಆಡಿಷನ್ ಸ್ಥಳದಲ್ಲಿ ನೀಡಲಾಗುವುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ ಮತ್ತು (ಮಕ್ಕಳ ಮತ್ತು ಪೋಷಕರ) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಸಹಿತ ಆಡಿಷನ್ಗೆ ಹಾಜರಾಗಬೇಕೆಂದು ವಾಹಿನಿಯ ಪ್ರಕಟಣೆ ತಿಳಿಸಿದೆ.

ಕೆಎಸ್ಸಿಎ ಶಿವಮೊಗ್ಗ ವಲಯ ಸಂಚಾಲಕ ಹಾಗೂ ನಿರ್ದೇಶಕರಾಗಿ ಡಿ.ಎಸ್. ಅರುಣ್ ಆಯ್ಕೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
