ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಹರಿದಾಡುವ ಹೆಬ್ಬಾವು ಒಂದು ಮರವನ್ನು ಸುತ್ತಿಕೊಂಡು ಸುರಳಿ ಆಕಾರದಲ್ಲಿ ಹತ್ತುವ ವಿಡಿಯೋವೊಂದು ಈ ವೈರಲ್ ಆಗಿತ್ತು. ಇದೀಗ ಅದೇ ರೀತಿಯ ವಿಡಿಯೋವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಕಾಣ ಸಿಕ್ಕಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಮಲ್ಲೆಸರ ಸಮೀಪದಲ್ಲಿ ಈ ದೃಶ್ಯ ಕಾಣಸಿಕ್ಕಿದೆ. ಇಲ್ಲಿನ ತೋಟವೊಂದರ ಸಮೀಪ ಹೆಬ್ಬಾವು ಮರವೇರುತ್ತಿದ್ದ ದೃಶ್ಯ ಕಂಡು ಬಂದಿದೆ. ಇದನ್ನ ಗಮನಿಸಿದ ಸ್ಥಳೀಯರು ತಮ್ಮ ತಮ್ಮ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾಗಳಲ್ಲಿ ಷೇರ್ ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಆಹಾರವನ್ನು ತಿಂದ ನಂತರ ಹೆಬ್ಬಾವು ಮರವನ್ನು ಸುತ್ತಿಕೊಂಡು ಜೀರ್ಣ ಮಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ಸುರುಳಿ ಸುತ್ತಿಕೊಂಡು ಮರವೇರುವ ಪರಿ ನಾವು ನೋಡಿದ್ದು ಇದೇ ಮೊದಲು ಎನ್ನುವ ಸ್ಥಳೀಯರು ಮಲೆನಾಡು ಪ್ರದೇಶದಲ್ಲಿ ಏನೆಲ್ಲಾ ನಡಿಬೇಕೋ ಅಂತೆಲ್ಲಾ ಮಾತನಾಡಿಕೊಂಡಿದ್ದಾರೆ.

giant python climbing a tree in thirthahalli
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!