ghibli photos 06-06-25 ಘಿಬ್ಲಿ ಫೋಟೋ ಹಂಚಿಕೊಂಡು ರಿಷಬ್​ ಶೆಟ್ಟಿ ಭಾವನಾತ್ಮಕ ಪೋಸ್ಟ್​

prathapa thirthahalli
Prathapa thirthahalli - content producer

ghibli photos ಘಿಬ್ಲಿ ಫೋಟೋ ಹಂಚಿಕೊಂಡು ರಿಷಬ್​ ಶೆಟ್ಟಿ ಭಾವನಾತ್ಮಕ ಪೋಸ್ಟ್​

ಕನ್ನಡದ ನಟ ಹಾಗೂ ನಿರ್ದೇಶಕ ರಕ್ಷಿತ್​ ಶೆಟ್ಟಿ ಇಂದು 42 ನೇ ವಂಸತಕ್ಕೆ ಕಾಲಿಡುತ್ತಿದ್ದು, ಇದರ ನಡುವೆ ರಕ್ಷಿತ್​ ಶೆಟ್ಟಿಗೆ ಅನೇಕ ಗಣ್ಯರು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅದರಂತೆ ಡಿವೈನ್​ ಸ್ಟಾರ್​ ರಿಷಬ್​​ ಶೆಟ್ಟಿ ಸಹ ರಕ್ಷಿತ್​ ಶೆಟ್ಟಿಯೊಂದಿಗಿನ ಘಿಬ್ಲಿ ಫೋಟೋ ಹಂಚಿಕೊಂಡು ಭಾವನಾತ್ಮಕವಾಗಿ ಶುಭಕೋರಿದ್ದಾರೆ.

ghibli photos ಈ ಕುರಿತು ರಕ್ಷಿತ್​ ಶೆಟ್ಟಿಯೊಂದಿಗೆ ಬೈಕ್​ನಲ್ಲಿ ತೆರಳುತ್ತಿರುವ ಫೋಟೋವನ್ನು ಶೇರ್​ ಮಾಡಿರುವ ರಿಷಬ್​ ಶೆಟ್ಟಿ ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗಾ ಎಂದು ಭಾವನಾತ್ಮಕವಾಗಿ ಬರೆದು ಕೊಂಡಿದ್ದಾರೆ.

 

 

Share This Article