ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್​ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ

ajjimane ganesh

ನವೆಂಬರ್ 13,  2025 : ಮಲೆನಾಡು ಟುಡೆ , ಶಿವಮೊಗ್ಗ : ನಗರದಲ್ಲಿ ನಾಳೆ ಮಧುಮೇಹ ಜಾಗೃತಿ ಶಿಬಿರ ನಡೆಯಲಿದೆ.ಇದಷ್ಟೆ ಅಲ್ಲದೆ ಇನ್ನಷ್ಟು ಮಾಹಿತಿ ವಿಚಾರಗಳು ಇಲ್ಲಿದೆ. 

Free Diabetes Camp Tomorrow at Nanjappa Life Care; Applications Open for Ex-Servicemen Board; MESCOM Meeting at Soraba
Free Diabetes Camp Tomorrow at Nanjappa Life Care; Applications Open for Ex-Servicemen Board; MESCOM Meeting at Soraba

ನಾಳೆ ಮಧುಮೇಹ ಜಾಗೃತಿ ಶಿಬಿರ

 ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ನವೆಂಬರ್ 14ರ ಬೆಳಿಗ್ಗೆ 9 ರಿಂದ ಮಧುಮೇಹ ಮಾಹಿತಿ ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶ (ಆರ್.ಬಿ.ಎಸ್.), ರಕ್ತದೊತ್ತಡ (ಬಿ.ಪಿ.), ಬಾಡಿ ಮಾಸ್ ಇಂಡೆಕ್ಸ್ ಉಚಿತ ಪರೀಕ್ಷೆ ಮಾಡಲಾಗುವುದು ಎಂದು ನಂಜಪ್ಪ ಲೈಫ್‌ ಕೇರ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪಾಯಕಾರಿ ಅಂಶ ಎಂದರೆ ಶೇ 50ರಷ್ಟು ಜನರಿಗೆ ತಮಗೆ ಮಧುಮೇಹದ ಕಾಯಿಲೆ ಇದೆ ಅನ್ನುವುದೇ ಗೊತ್ತಿಲ್ಲ. ಆದ್ದರಿಂದ.ಸ್ವಯಂ ಪರೀಕ್ಷೆ ಮಾಡಿಸಿಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಕೋರಿದ್ದಾರೆ.

ಅರ್ಜಿ ಆಹ್ವಾನ

ಶಿವಮೊಗ್ಗ: ಮಾಜಿ ಸೈನಿಕರ ಕಲ್ಯಾಣ ಯೋಜನೆಗಳಿಗೆ ಪೂರಕವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸೈನಿಕ ಮಂಡಳಿಯನ್ನು ಪುನರ್‌ ರಚಿಸಲಾಗುತ್ತಿದೆ. ಪ್ರತಿ ಜಿಲ್ಲೆಯಿಂದ ಒಬ್ಬರು ಮಾಜಿ ಸೈನಿಕರು ಅಧಿಕಾರೇತರ ಸದಸ್ಯರಾಗಬಹುದಾಗಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ಮಂಡಳಿಯಲ್ಲಿ ವೇತನ-ಭತ್ಯೆ ರಹಿತವಾಗಿ ಸ್ವ-ಇಚ್ಛೆಯಿಂದ ಕಾರ್ಯ ನಿರ್ವಹಿಸಲು ಅರ್ಜಿ ಸಲ್ಲಿಸಬಹುದು, ಆಸಕ್ತರು ಸ್ವ–ವಿವರಗಳನ್ನೊಳಗೊಂಡ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನ. 15ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220925ಗೆ ಸಂಪರ್ಕಿಸಬಹುದು

Free Diabetes Camp Tomorrow at Nanjappa Life Care; Applications Open for Ex-Servicemen Board; MESCOM Meeting at Soraba
Free Diabetes Camp Tomorrow at Nanjappa Life Care; Applications Open for Ex-Servicemen Board; MESCOM Meeting at Soraba

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

ಜನಸಂಪರ್ಕ ಸಭೆ ನಾಳೆ

ಶಿವಮೊಗ್ಗ: ಸೊರಬ ತಾಲ್ಲೂಕಿನ ಆನವಟ್ಟಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನ. 14ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಮಾಹಿತಿಗಾಗಿ ಮೊ. ಸಂಖ್ಯೆ 9448998783ಗೆ ಸಂಪರ್ಕಿಸಬಹುದು.

ಶಿವಮೊಗ್ಗ ನಗರದಲ್ಲಿ ಇಂದಿನಿಂದಲೇ ಭಾರೀ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಆದೇಶ : ಕಾರಣವೇನು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Free Diabetes Camp Tomorrow at Nanjappa Life Care; Applications Open for Ex-Servicemen Board; MESCOM Meeting at Soraba

Share This Article