ಭದ್ರಾವತಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದ ಮಾಲೀಕರಿಗೆ ಶಾಕ್! ಶಾರ್ಟ್​ ಸರ್ಕಿಟ್​ಗೆ ಧಗಧಗ

SHIVAMOGGA  |  Jan 20, 2024  | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇಲ್ಲಿನ ಹಳದಮ್ಮ  ಬೀದಿಯಲ್ಲಿರುವ ಮನೆಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿಕಾಣಿಸಿಕೊಂಡಿದ್ದು ಮನೆಯಲ್ಲಿರುವ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಈ ಬಗ್ಗೆ ಮಲೆನಾಡು ಟುಡೆಗೆ ವರದಿ ಲಭ್ಯವಾಗಿದೆ 

ಭದ್ರಾವತಿ ಹಳದಮ್ಮಬೀದಿಯಲ್ಲಿ ನಡೆದ ಘಟನೆ ಇದು. ಇಲ್ಲಿನ ನಿವಾಸಿ ವಾಸು ಎಂಬವರಿಗೆ ಸೇರಿದ ಮನೆಯಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಮನೆಯವರು ಕೆಲಸಕ್ಕೆ ಹೋಗಿದ್ದರಿಂದ ಘಟನೆ ವೇಳೇ ಅಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ವಿಚಾರ ತಿಳಿದು ಮನೆಬಂದು ನೋಡಿದ ಮನೆ ಮಾಲೀಕರಿಗೆ ಶಾಕ್ ಆಗಿತ್ತು. ಮನೆಯಲ್ಲದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. 

ಇಷ್ಟೆ ಅಲ್ಲದೆ ಜಾಗ ಮಾರಿ ಬಂದಿದ್ದ ದುಡ್ಡು, ಚಿನ್ನ ಒಡವೆ ಕೂಡ ಮನೆಯೊಳಗೆ ಇತ್ತು. ಅದು ಸಹ ಸುಟ್ಟುಹೋಗಿದೆ ಎಂಬ  ಆತಂಕ ಕಾಡುತ್ತಿದೆ  ಎಂದು ಮನೆ ಮಾಲೀಕರು ಹೇಳಿದ್ದಾರೆ. ಶಾರ್ಟ್ ಸರ್ಕಿಟ್ ನಿಂದ ಹೀಗೆ ಆಗಿರಬಹುದು ಎಂದಿರುವ ಅವರು ಐದಾರು ಲಕ್ಷಕ್ಕೂ ಹೆಚ್ಚು ಹಣ ಹೋಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. 

ಇನ್ನೂ ಅಗ್ನಿಶಾಮಕ ಸಿಬ್ಬಂದಿ 2-3 ಗಂಟೆ ಕಾರ್ಯಾಚರಣೆ ನಡೆಸಿ ಮನೆಯೊಳಗಿನ ಬೆಂಕಿಯನ್ನ ನಂದಿಸಿದ್ದಾರೆ. ಮೊದಲು ಮನೆಯೊಳಗೆ ಯಾರಾದರೂ ಸಿಲುಕಿರಬಹುದು ಎಂಬ ಅನುಮಾನ ಬಂದಿತ್ತು. ಆ  ಬಳಿಕ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಯಾರು ಇರಲಿಲ್ಲ ಎಂದಿದ್ದಾರೆ. 


Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು