ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 31, 2025: ಪದೇಪದೇ ಅಸಭ್ಯವಾಗಿ ವರ್ತಿಸ್ತಿದ್ದ ಪಕ್ಕದ ಮನೆ ನಿವಾಸಿಯ ವಿರುದ್ಧ ಸಂತ್ರಸ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರ ಸಂಬಂಧ : THE BHARATIYA NYAYA SANHITA (BNS), 2023 (U/s-126(2),352,74,78(2),115(2) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ:
ಶಿವಮೊಗ್ಗ ಜಿಲ್ಲೆ ಪೊಲೀಸ್ ವಿಭಾಗದ ಠಾಣೆಯೊಂದರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರ ನೆರೆಮನೆಯ ನಿವಾಸಿ ಈ ಹಿಂದೆ ಹೆಣ್ಣು ಮಕ್ಕಳನ್ನು ಚುಡಾಯಿಸಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಆದಾಗ್ಯು ತನ್ನ ನಡತೆಯನ್ನ ಸರಿಮಾಡಿಕೊಳ್ಳದ ಆರೋಪಿ, ದೂರುದಾರರ ಮನೆಯ ಬಳಿ ಅನುಮಾನಾಸ್ಪದವಾಗಿ ಓಡಾಡುವುದು, ಕಾಂಪೌಂಡ್ ಹತ್ತುವುದು ಮತ್ತು ರಾತ್ರಿ ಸಮಯದಲ್ಲಿ ಮನೆ ಬಾಗಿಲು ಬಡಿಯುವ ಕೃತ್ಯಗಳನ್ನು ಮುಂದುವರೆಸಿದ್ದ. ಅಲ್ಲದೇ, ದೂರುದಾರರನ್ನು ಕಂಡಾಗ ಕಣ್ಣಸನ್ನೆಯ ಮೂಲಕ ಕರೆಯುವುದು ಹಾಗೂ ಕೆಟ್ಟದಾಗಿ ನೋಡುವ ಮೂಲಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

COTPA ಕಾಯ್ದೆ ಉಲ್ಲಂಘನೆ : ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚು ಪ್ರಕರಣ ದಾಖಲು : ಸಂಗ್ರಹವಾದ ದಂಡವೆಷ್ಟು ಗೊತ್ತಾ..?
ಇದಷ್ಟೆ ಅಲ್ಲದೆ ದಿನಾಂಕ: 27/10/2025 ರಂದು ರಾತ್ರಿ 07:00 ಗಂಟೆಯ ಸುಮಾರಿಗೆ ದೂರುದಾರರು ತಮ್ಮ ಮಗಳ ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಆರೋಪಿ ನಂಜುಂಡ ಏಕಾಏಕಿ ದಾರಿಗೆ ಅಡ್ಡಗಟ್ಟಿ, ಕೆಟ್ಟ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೆ ದೂರುದಾರರ ತಲೆಯನ್ನು ಹಿಡಿದು ಎಳೆದಾಡಿ ಆಸಭ್ಯವಾಗಿ ವರ್ತಿಸಲು ಯತ್ನಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
 
 
 
  
  
  
 