ತರುಣ್​ ಸುಧೀರ್​ ನಿರ್ಮಾಣದ ಏಳು ಮಲೆ  ಮೂವಿ ರಿಲೀಸ್ ಡೇಟ್ ಫಿಕ್ಸ್

prathapa thirthahalli
Prathapa thirthahalli - content producer

elumale movie : ತರುಣ್ ಸುಧೀರ್ ನಿರ್ಮಾಣದ ನಟಿ ರಕ್ಷಿತಾ ಪ್ರೇಮ್​​ ರಾಣಾ ನಾಯಕನಾಗಿ ನಟಿಸಿರುವ ಏಳುಮಲೆ ಚಿತ್ರತಂಡದ ರಿಲೀಸ್ ಡೇಟ್ ಘೋಷಣೆಯಾಗಿದೆ. ಈ ಚಿತ್ರ ಇದೇ ಸೆಪ್ಟೆಂಬರ್ 05 ರಂದು  ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ.

ಇದು ರಾಣಾ ಅಭಿನಯಿಸುತ್ತಿರುವ ಎರಡನೇ  ಚಿತ್ರ ಹಾಗೂ ಪ್ರಿಯಾಂಕ ಆಚಾರ್​​ ರವರ ಕೊಚ್ಚಲ ಚಿತ್ರವಾಗಿದೆ. ರಾಣಾ ಈ ಹಿಂದೆ ಪ್ರೇಮ್ ನಿರ್ದೇಶನದ ಏಕಲವ್ಯ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಪಾಗಲ್ ಪ್ರೇಮಿಯಾಗಿ  ಲಾಯರ್ ಆಗಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಅದಾದ ನಂತರ ರಾಣಾ ರವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿತ್ತು. ಅದಾದ ಕೆಲವು ವರ್ಷಗಳ ನಂತರ ಪುನೀತ್ ರಂಗಸ್ವಾಮಿ ನಿರ್ದೇಶನದಲ್ಲಿ ತರುಣ್ ಸುಧೀರ್ ಹಾಗೂ ಅಂಟ್ಲಾಂಟ ನಾಗೇಂದ್ರ ನಿರ್ಮಾಣದಲ್ಲಿ  ರಾಣಾ ಚಿತ್ರ ಘೋಷಣೆಯಾಯಿತು. 

- Advertisement -

ಇದೀಗ ಚಿತ್ರ ತಂಡ ಮೂರು ಹಾಡು ಹಾಗೂ 1 ಟೀಸರ್​​ನ್ನು ರಿಲೀಸ್ ಮಾಡಿದೆ. ಟೀಸರ್ ನಲ್ಲಿ ತಮಿಳು ಹುಡುಗಿ ಹಾಗೂ ಕನ್ನಡದ ಹುಡುಗನ ಪ್ರೇಮಕತೆ ಅವರ ಪ್ರೇಮದ ನಡುವೆ ಬರುವ ಅಡೆತಡೆಗಳು ಕೈಗೆ ಬೇಡಿ ಹಾಕಿಕೊಂಡು ಕೈದಿಯ ರೂಪದಲ್ಲಿರುವ ಹರೀಶ,(ರಾಣಾ) ಹಾಗೂ ಪೊಲೀಸ್ ಪಾತ್ರದಲ್ಲಿರುವ ನಾಗಾಭರಣ ರನ್ನು ನೋಡಬಹುದು.

ಇನ್ನು ಚಿತ್ರದ ಮ್ಯೂಸಿಕ್ ವಿಚಾರಕ್ಕೆ ಬಂದರೆ ಈ ಚಿತ್ರಕ್ಕೆ ತಮಿಳಿನ ಪ್ರಸಿದ್ಧ ಸಂಗೀತ ಸಂಯೋಜಕರಾದ ಡಿ ಇಮ್ಮಾನ್  ಸಂಗೀತ ಸಂಯೋಜಿಸಿದ್ದಾರೆ. ಡಿ ಇಮ್ಮಾನ್ ಇದು ಕನ್ನಡದ ಮೂರನೇ ಚಿತ್ರವಾಗಿದೆ. ಈ ಹಿಂದೆ ಕೋಟಿಗೊಬ್ಬ 02 ಹಾಗೂ ನಟಸಾರ್ವಭೌಮ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಇದೀಗ  ರಾಣಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು,  ಟೀಸರ್ ನಲ್ಲಿರುವ ಹಿನ್ನಲೆ ಸಂಗೀತ ಹಾಗೂ ಈಗಾಗಲೇ ರಿಲೀಸ್​ ಆಗಿರುವ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ.

ಇನ್ನು ಚಿತ್ರದ ತಾರಾಬಳಗವನ್ನು ನೋಡುವುದಾದರೆ. ಈ ಚಿತ್ರದಲ್ಲಿ ಮಹಾನಟಿ ರಿಯಾಲಿಟಿ ಶೋ ಖ್ಯಾತಿಯ ಪ್ರಿಯಾಂಕ ಆಚಾರ್​​ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಜಗಪತಿಬಾಬು ಕಿಶೋರ್ ಟಿಎಸ್ ನಾಗಾಭರಣ ಸೇರಿದಂತೆ ಬಹು ದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇದೆ.

elumale movie

elumale movie
elumale movie

 

Share This Article
Leave a Comment

Leave a Reply

Your email address will not be published. Required fields are marked *