elephant ಶೆಟ್ಟಿ ಹಳ್ಳಿ ಕಾಡಿನಲ್ಲಿ ಈಗ ಬಿದಿರು ಅಧಿಕವಾಗಿ ಬೆಳೆದಿದ್ದು, ಆನೆಗಳನ್ನು ಆಕರ್ಷಿಸುತ್ತಿದೆ. ಸಕ್ರೆಬೈಲು ಆನೆ ಬಿಡಾರದ ಸಾಕಾನೆಗಳಗೆ ಮಾತ್ರವಲ್ಲ..ಕಾಡಾನೆಗಳಿಗೂ ಶೆಟ್ಟಿಹಳ್ಳಿ ಕಾಡು ಆಕರ್ಷಿಸುತ್ತಿದೆ. ಈಗಾಗಲೇ ಅರಣ್ಯ ಇಲಾಖೆಯ ಲೆಕ್ಕಚಾರದಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳು ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿವೆ ಇಲ್ಲಿನ ಪರಿಸರದಲ್ಲಿ ಯತೆಚ್ಚವಾಗಿ ಬಿದಿರು ಬೆಳೆದಿದೆ. ಆನೆಗಳಿಗೆ ಬಿದುರು ನೆಚ್ಚಿನ ಆಹಾರವಾಗಿದೆ..ಭದ್ರಾ ಅಭಯಾರಣ್ಯದಿಂದ ಸಾಕಷ್ಟು ಆನೆಗಳು ಶೆಟ್ಟಿಹಳ್ಳಿಯತ್ತ ಮುಖ ಮಾಡುತ್ತಿವೆ.
elephant ಮುತ್ತಿನಕೊಪ್ಪದಿಂದ ಮಂಡಗದ್ದೆಗೆ ಬಂತು ಹೊಸ ಆನೆ
ಮುತ್ತಿನ ಕೊಪ್ಪದಿಂದ ತುಂಗಾ ನದಿ ದಾಟಿಕೊಂಡು ನಿನ್ನೆ ಹೊಸ ಆನೆಯೊಂದು ದಾರಿ ಹುಡುಕಿಕೊಂಡು ಮಂಡಗದ್ದೆಯ ಬಳಿ ಬಂದಿದೆ. ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸಿ ಜನರನ್ನು ಬೆರಗುಗೊಳಿಸಿದೆ. ಮಂಡಗದ್ದೆ, ಸುತ್ತಮುತ್ತಲ ತೋಟಗಳಲ್ಲಿ ಸಂಚರಿಸಿದ್ದು, ಯಾವುದೇ ಬೆಳ ಹಾನಿಯಾಗಿಲ್ಲ. ಈ ಆನೆಯೂ ಕೆಲವು ದಿನಗಳಲ್ಲಿ ಶೆಟ್ಟಿಹಳ್ಳಿ ಕಾಡನ್ನು ಸೇರುತ್ತದೆ ಎಂಬ ನಿರೀಕ್ಷೆಯಿದೆ.
