elder Assaulted by Youth in Gundappa Shed
ಶಿವಮೊಗ್ಗ, ಜೂನ್ 18, 2025: ನಗರದ ಪ್ರತಿಷ್ಠಿತ ಗುಂಡಪ್ಪ ಶೆಡ್ ಅಂದರೆ ಮಲ್ಲೇಶ್ವರ ನಗರದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಗಾಂಜಾ ನಶೆಯಲ್ಲಿ ಯುವಕರು ದಾಂಧಲೆ ನಡೆಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಸ್ಥಳೀಯರ ಈ ಆರೋಪಕ್ಕೆ ಪೂರಕ ಎಂಬಂತೆ ವಿಡಿಯೋವೊಂದು ವೈರಲ್ ಆಗಿದೆ.

ಇಲ್ಲಿನ ರಸ್ತೆಯಲ್ಲಿ ಬೈಕ್ ನಿಲ್ಲಿಸುವ ವಿಚಾರದಲ್ಲಿ ಪ್ರಶ್ನಿಸಿದ ಹಿರಿಯ ನಾಗರಿಕರೊಬ್ಬರ ಕೆನ್ನೆಗೆ ಗಾಂಜಾ ನಶೆಯಲ್ಲಿದ್ದ ಯುವಕ ಬಾರಿಸಿದ್ದು, ಏಟಿಗೆ ಆ ಹಿರಿಯ ಜೀವ ಕುಸಿದುಬಿದ್ದಿರುವ ದೃಶ್ಯ ವಿಡಿಯೋದಲ್ಲಿದೆ. ವಿಡಿಯೋದಲ್ಲಿ ಯುವಕ ಅರಚಾಡಿ ಎಲ್ಲರ ಮುಂದೆಯೇ ಹಿರಿಯರೊಬ್ಬರ ಮೇಲೆ ಹಲ್ಲೆ ಮಾಡಿರುವ ವರ್ತನೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಭಾಗದ ಜನರ ಆರೋಪಕ್ಕೂ ಈ ಘಟನೆ ಪುಷ್ಟಿ ನೀಡುತ್ತಿದೆ. ಮೇಲಾಗಿ ಶಿವಮೊಗ್ಗ ಕಾನೂನು ಸುವ್ಯವಸ್ಥೆ ಅಕ್ರಮಗಳ ಅಡಿಕ್ಟ್ನಿಂದ ಹಾಳಾಗುತ್ತಿದೆಯೆ? ಎಂಬ ಸಂಶಯ ಮೂಢುತ್ತಿದೆ.

elder Assaulted by Youth in Gundappa Shed
ಇನ್ನೂ ಘಟನೆ ವಿಚಾರಕ್ಕೆ ಬರುವುದಾದರೆ, ಘಟನೆ ನಡೆದ ಕೂಡಲೇ ನೆರೆಹೊರೆಯವರು ಹಿರಿಯ ನಾಗರಿಕರಿಗೆ ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಯುವಕನ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಘಟನೆ ಕೋಟೆ ಪೊಲೀಸ್ ಠಾಣೆಯ ಮೆಟ್ಟಿಲೇರದಿರುವುದು ಅಚ್ಚರಿ ಮೂಡಿಸಿದೆ.

ಈ ಪ್ರದೇಶದಲ್ಲಿ ಅತಿ ವೇಗದ ವಾಹನ ಚಾಲನೆ ಮತ್ತು ಬೈಕ್ ವೀಲಿಂಗ್ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರ ಮನೆ ಸನಿಹದಲ್ಲೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ವೈರಲ್ ವೀಡಿಯೊ ಆಧಾರದ ಮೇಲೆ ಕೋಟೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತುಂಗಾ ಸೇತುವೆ ಕೆಳಗೆ ಅಕ್ರಮ ಮದ್ಯ ಮಾರಾಟ /elder Assaulted by Youth in Gundappa Shed
ಹೊಳೆ ಬಸ್ ಸ್ಟಾಪ್ ಸುತ್ತಮುತ್ತ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಇದು ಎಲ್&ಓ ಸಮಸ್ಯೆ ತಂದಿಡುತ್ತಿದೆ. ಅದರಲ್ಲಿಯು ಗುಂಡಪ್ಪ ಶೆಡ್‌ನ ತಳಭಾಗದಲ್ಲಿರುವ ತುಂಗಾ ಸೇತುವೆ ಕೆಳಗೆ ಮುಂಜಾನೆ 4 ಗಂಟೆಯಿಂದಲೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
elder Assaulted by Youth in Gundappa Shed

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ. ಶಿವಮೊಗ್ಗದಲ್ಲಿ ಸಾರ್ವಜನಿಕರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳ ಪೈಕಿ ಕೆಲವು ಮಾತ್ರ ವರದಿಯಾಗುತ್ತಿದ್ದು, ಪುಂಡರಿಗೆ ಹೆದರಿಕೊಂಡು ಜನರು ಓಡಾಡುವ ಆತಂಕ ಹಲವೆಡೆ ಇದೆ.
ಭದ್ರಾವತಿಯ ಇನ್ನಷ್ಟು ಸುದ್ದಿಗಳಿಗಾಗಿ ಮಲೆನಾಡು ಟುಡೆ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/bhadravati/
Residents of Gundappa Shed, also known as Malleshwara Nagar, in Shivamogga are expressing concern over an increase in criminal activities, particularly involving youths under the influence of ganja. A viral video shows a shocking incident where a youth, allegedly intoxicated, slapped an elderly citizen for questioning him about parking his bike. The force of the blow caused the senior to collapse.
Neighbors immediately rushed to help the elderly person, offering water and comfort. The public has voiced strong anger over the youth’s behavior. Surprisingly, no official complaint has been filed at the Kote Police Station regarding this incident.