ed raid in sagara 21-06-25 : ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ | ನಡೆದಿದ್ದೇನು
ಸಾಗರದ ಕೆಳದಿ ರಸ್ತೆಯಲ್ಲಿರುವ ನಗರ ಸಭಾ ಸದಸ್ಯ ಟಿಪ್ ಟಾಪ್ ಬಷೀರ್ ರವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ.
ಒಟ್ಟು 7 ಅಧಿಕಾರಿಗಳು ಸಾಗರದ ಬಷೀರ್ ಮನೆಯಲ್ಲಿ 18 ಗಂಟೆಗಳ ಕಾಲ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಂತರ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಬಷೀರ್ರವರಿಗೆ ನೋಟಿಸ್ ಕೊಟ್ಟು ಬುಧವಾರ ಬರುವಂತೆ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಷೀರ್ ಇ ಡಿ ಅಧಿಕಾರಿಗಳು ಹೋಟೆಲ್ ವ್ಯವಹಾರದ ಬಗ್ಗೆ ಹಾಗೂ ಅದರಲ್ಲಿ ಪಾಲುದಾರಿಕೆ ಹೊಂದಿದ್ದ ನಾವುಂದ ಇಕ್ಬಾಲ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಎಲ್ಲಾ ದಾಖಲೆಗಳು ಪಾರದರ್ಶವಾಗಿರುವುದರಿಂದ ಯಾವುದೇ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ. ಕತಾರ್ ನಿಂದ ಹಣ ವರ್ಗಾವಣೆ ಕುರಿತು ಕೇಳಿದರು ಅದರ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.