ಶಿವಮೊಗ್ಗದಲ್ಲಿಯೂ ಸಿಕ್ಕಸಿಕ್ಕ ವೆಹಿಕಲ್​ಗಳಿಗೆ ಡಿಕ್ಕಿಯಾಗಿ ಡಿವೈಡರ್​ಗೆ ಗುದ್ದಿದ ಕಾರು!ನಡೆದಿದ್ದೇನು ಗೊತ್ತಾ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಹಾಸನದಲ್ಲಿ ಗಣಪತಿ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿಯೊಂದು ಡಿಕ್ಕಿಯಾದ ಘಟನೆ ನಡೆದಿದೆ. ಶಿವಮೊಗ್ಗದಲ್ಲಿಯು ಅಂತಹುದ್ದೆ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಕಾರು ಚಾಲಕನೊಬ್ಬ ಎಗ್ಗಿಲ್ಲದೆ ಕಾರು ಚಲಾಯಿಸಿದ್ದಷ್ಟೆ ಅಲ್ಲದೆ ಸರಣಿ ಅಪಘಾತಗಳನ್ನು ಮಾಡಿದ್ದಾನೆ. ಕುಡಿದು ಟೈಟಾಗಿ ಓವರ್​ ಸ್ಪೀಡ್​ನಲ್ಲಿ ಅಡ್ಡಾಡಿದ ಕಾರು ಚಾಲಕ ಬೈಕ್, ಒಂದು ಆಟೋ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ. ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. 

ಶಿವಮೊಗ್ಗದಲ್ಲಿ ಸಂಚಾರ ನಿಯಮ ಬಹಳ ಕಟ್ಟುನಿಟ್ಟಾಗಿದೆ. ಹಾಗಿದ್ರೂ ರೂಲ್ಸ್​ ಬ್ರೇಕ್ ಮಾಡುವವರಿಗೆ ಕಡಿವಾಣ ಮಾತ್ರ ಬೀಳುತ್ತಿಲ್ಲ ಎಂಬುದೇ ನಿಗೂಢ ಪ್ರಶ್ನೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯ ಘಟನೆ ನಡೆದಿದೆ. 

ಸೀನಪ್ಪಶೆಟ್ಟಿ ಸರ್ಕಲ್​ ಸಮೀಪ ಸ್ಪೀಡ್​ನಲ್ಲಿ ಬಂದಿದ್ದ ಕಾರು ಮೊದಲು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಡಿವೈಡರ್​ಗೆ ಗುದ್ದಿದೆ ಬಳಿಕ  ಅಲ್ಲಿಯೇ ಜಖಂಗೊಂಡು ನಿಂತಿದೆ. 

ಸ್ಥಳೀಯರು ಕಾರನ್ನ ಅಡ್ಡಗಟ್ಟುವಷ್ಟರಲ್ಲಿಯೇ ಕಾರು ಸಿಕ್ಕಸಿಕ್ಕಲ್ಲಿ ಆಕ್ಸಿಡೆಂಟ್ ಮಾಡಾಗಿತ್ತು. ಬಳಿಕ ಸ್ಥಳಕ್ಕೆ ಬಂದ  ಟ್ರಾಫಿಕ್ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆತ ಕುಡಿದು ವಾಹನ ಚಲಾಯಿಸಿದ್ದು ಖಚಿತವಾಗಿದೆ.  

drunk and driving  Car Hits Four Vehicles, 
drunk and driving  Car Hits Four Vehicles,

drunk and driving  Car Hits Four Vehicles, 

 

View this post on Instagram

 

A post shared by KA on line (@kaonlinekannada)

Drunk driving accident Shivamogga, Car accident in Shivamogga, Shivamogga road accident, Drunk driver arrest, Four vehicle accident Shivamogga, ಶಿವಮೊಗ್ಗ ರಸ್ತೆ ಅಪಘಾತ, ಕುಡಿದು ವಾಹನ ಚಾಲನೆ, ಶಿವಮೊಗ್ಗ ಟ್ರಾಫಿಕ್ ಅಪಘಾತ,  road crash, car accident, police arrest, drunk and driving

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 Kannada  Horoscope car decor new
drunk and driving

Leave a Comment