Doddapet police station : ಭೂತ ಬಿಡಿಸಿದ ಮಂತ್ರವಾದಿಗೆ ಬ್ಲ್ಯಾಕ್​ಮೇಲ್​! ‘ವೈರಲ್​’ ಹೆಸರಲ್ಲಿ ಒಂದುವರೆ ಲಕ್ಷ ದುಡ್ಡಿಗೆ ಡಿಮ್ಯಾಂಡ್! ಜನರೇ ಸ್ವಲ್ಪ ಜಾಗ್ರತೆ

 Doddapet police station : ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಕೇಸ್​ವೊಂದು ದಾಖಲಾಗಿದೆ. ದಾಖಲಾಗಿರುವ ದೂರು ಹಾಗೂ ಎಫ್​ಐಆರ್ ಪ್ರಕಾರ, ಮದರಸಾ ಒಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರೊಬ್ಬರಿಗೆ ಬ್ಲ್ಯಾಕ್​ ಮೇಲ್ ಮಾಡಿದ ಆರೋಪ ಮಾಡಲಾಗಿದೆ. 

*Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!*

ನಡೆದಿದ್ದು ಏನು? 

ಮದರಸಾ ಒಂದರ ಶಿಕ್ಷಕರು ಮಾಟ ಮಂತ್ರವನ್ನು ಬಿಡಿಸುವ ವಿದ್ಯೆಯನ್ನು ಸಹ ಕಲಿತಿದ್ದು, ಅವರ ಬಳಿ ಬಂದವರಿಗೆ ಈ ನಿಟ್ಟಿನಲ್ಲಿ ಪೂಜೆ ಮಾಡಿ ಭೂತ ಬಿಡಿಸ್ತಿದ್ದರಂತೆ. ಇದರ ಬಗ್ಗೆ ತಿಳಿದಿದ್ದ ಇಬ್ಬರು ವ್ಯಕ್ತಿಗಳು ಬಂದು, ಅವರ ಪೈಕಿಯಲ್ಲಿಯೇ ಒಬ್ಬರಿಗೆ ಭೂತ ಹಿಡಿದಿದೆ ಬಿಡಿಸಬೇಕು ಎಂದಿದ್ದಾರೆ. ಅಲ್ಲದೆ ಇದಕ್ಕಾಗಿ ಹಣ ಕೊಡುವುದಾಗಿ ತಿಳಿಸಿದ್ದರಂತೆ. ಅದರಂತೆ ಮದರಸಾದ ಶಿಕ್ಷಕರು, ಹೋಗಿ ಪ್ರಾರ್ಥನೆ ಮಾಡಿ, ಏನೇನು ವಿದಿಯಿದೆಯೋ ಅದನ್ನೆಲ್ಲಾ ಮಾಡಿ ಬಂದಿದ್ದಾರೆ. ಆದರೆ ಆ ದಿನ ಬಿಟ್ಟು ಮರುದಿನ ಮತ್ತೆ ಬಂದ ಇಬ್ಬರು, ನೀವು ಡೋಂಗಿ ಬಾಬಾ, ಮಂತ್ರವಾದ ಮಾಡಿದ್ದರ ವಿಡಿಯೋ ಮಾಡಿದ್ದೇವೆ, ಒಂದುವರೆ ಲಕ್ಷ ಕೊಡಿ, ಇಲ್ಲವಾದರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಶಿಕ್ಷಕರು ನೇರವಾಗಿ ದೂರು ಕೊಟ್ಟಿದ್ದು, ಸದ್ಯಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು