ಅನಂತ ಕುಮಾರ್ ಹೆಗೆಡೆ ಮಾತಿಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಏನು ಹೇಳಿದ್ರು ಗೊತ್ತಾ

Malenadu Today

SHIVAMOGGA  |  Jan 16, 2024  |   ಸಂಸದ ಅನಂತಕುಮಾರ್ ಹೆಗೆಡೆ ಯವರು (Anantkumar Hegde) ಆಡಿದ ಮಾತಿನ ಸಂಬಂಧ ಶಿವಮೊಗ್ಗ ಜಿಲ್ಲೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಳೂರು ಗೋಪಾಲಕೃಷ್ಣರವರಿಗೆ ಕೆಟ್ಟದಾಗಿ ಬೈಯ್ಯುವುದನ್ನ ಹೇಳಿಕೊಡುವ ಅಗತ್ಯವಿಲ್ಲ. ನಮಗೂ ಕೆಟ್ಟದಾಗಿ ಮಾತನಾಡಲು ಬರುತ್ತದೆ. ಆದರೆ ಈ ಬಗ್ಗೆ ಬಿಜೆಪಿ ಹಾಗೂ ಅವರು ಯೋಜನೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ರು. 

ಬೇಳೂರು ಗೋಪಾಲಕೃಷ್ಣ  Belur Gopalakrishna 

ಅನಂತ್ ಕುಮಾರ್ ಹೆಗಡೆ ರವರ ಸ್ವಲ್ಪ ಆರೋಗ್ಯ ಸರಿ ಇಲ್ಲದೆ ಸ್ವಲ್ಪಕಾಲ ದೂರ ಇದ್ದರು. ಇದೀಗ ಅವರಿಗೆ ಮಾನಸಿಕವಾಗಿ ಏನಾಗಿದೆ ಗೊತ್ತಿಲ್ಲ . ಮುಂಚೆಯಿಂದ ಅವರು ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡವರು, ಗೊಂದಲ ಮಾಡುವುದು, ಗೊಂದಲ ಸೃಷ್ಟಿಸುದು ಅವರ ಗುಣ ಹಾಗಂತ ಏನೇನೋ ಮಾತನಾಡುವುದು ಸರಿಯಲ್ಲ. ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ ಎಂದರು

ಒಬ್ಬ ಎಂಪಿಯಾದ ವ್ಯಕ್ತಿ ಮುಖ್ಯಮಂತ್ರಿ ಬಗ್ಗೆ ಏನು ಹೇಳಬೇಕು ಎಂದು ಯೋಚನೆ ಮಾಡಬೇಕು ಎಂದು ಅವರು ತತ್ವ ಸಿದ್ದಾಂತದ ಬಗ್ಗೆ ಮಾತನಾಡು ಬಿಜೆಪಿ ಪಕ್ಷ ಈ ಬಗ್ಗೆ ಚಿಂತಿಸಬೇಕು.ಈಗ ಏನು ಹೇಳುತ್ತದೆ ಬಿಜೆಪಿ ಪಕ್ಷ ಎಂದು ಪ್ರಶ್ನಿಸಿದರು. 

ಬಿಜೆಪಿಯವರ ಸ್ವಾಭಿಮಾನ ತತ್ವ, ಸಂಸ್ಕೃತಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು ಈ ರೀತಿ ಮಾತನಾಡುವುದು ತಪ್ಪು ಎಂದು ಹೇಳುತ್ತೇನೆ ಎಂದಿದ್ದಾರೆ 


Share This Article