ಸಿಂಗಲ್ ಫೋಟೋ ಕೂಡ ಸಿಗದ, ನಕ್ಸಲ್ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್ ! ಕೇರಳ ಕೋರ್ಟ್ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್ ಮೋಸ್ಟ್ ನಕ್ಸಲ್ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದೆ.
ಈ ವೇಳೆ ಬಿಜಿಕೆ ಘೋಷಣೆಗಳನ್ನ ಕೂಗಿದ ಘಟನೆ ಕೂಡ ನಡೆಯಿತು. ಇನ್ನೂ ಆರೋಪಿಗಳನ್ನ ವಿಚಾರಣೆಗೊಳಪಡಿಸಿದ ಕೋರ್ಟ್ ಮೂವತ್ತು ದಿನಗಳ ಕಾಲ ರಿಮ್ಯಾಂಡ್ಗೆ ಒಳಪಡಿಸಿದೆ. ಅಲ್ಲದೆ ಕಮಾಂಡೋ ಭದ್ರತೆ ನೀಡಲು ತಿಳಿಸಿದೆ. ಡಿಸೆಂಬರ್ 9 ರವರೆಗೂ ರಿಮ್ಯಾಂಡ್ ಇರಲಿದೆ.
ಶೃಂಗೇರಿ ಮೂಲದ ಬಿಜಿಕೆ ತಮಿಳುನಾಡಿನ ಕುಪ್ಪು ದೇವರಾಜ್ ಎನ್ಕೌಂಟರ್ ಬಳಿಕ ದಕ್ಷಿಣ ಭಾರತದ ನಕ್ಸಲ್ ನಾಯಕನಾಗಿದ್ದ. ಕೋರ್ ಕಮಿಟಿ ಮೆಂಬರ್ ಆಗಿದ್ದ ವೆಸ್ಟರ್ನ್ ಘಾಟ್ ಜೋನಲ್ ನ ಸೆಕ್ರೆಟ್ರಿ ಕೂಡ ಆಗಿದ್ದ. ಇನ್ನೂ ಸಾವಿತ್ರಿಯು ಕಬಿನಿ ದಳ ಕಮಾಂಡರ್ ಆಗಿದ್ದ
ಸುಳಿವು ನೀಡಿದ ರಾಘವೇಂದ್ರ
ಸುಮಾರು 2 ದಶಕಗಳ ಕಾಲ ಕಣ್ಮರೆಯಲ್ಲಿಯೇ ಇದ್ದ ಬಿಜಿಕೆಯನ್ನು ಹಿಡಿಯಲು ಕರ್ನಾಟಕ ಪೊಲೀಸರು ಸಹ ಸಾಕಷ್ಟು ಶ್ರಮವಹಿಸಿದ್ದರು. ಆದರೆ ಆತನ ಸುಳಿವು ಹಾಗೂ ಆತನ ಮುಖಚಹರೆ ಸ್ಪಷ್ಟವಾಗುತ್ತಿರಲಿಲ್ಲ.
ಈ ನಡುವೆ ಕೇರಳ ಪೊಲೀಸರಿಗೆ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ನಕ್ಸಲ್ ವಿಚಾರದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತ್ತು. ಲಿಜೇಶ್ ಅಲಿಯಾಸ್ ರಾಮು ಎಂಬಾತ ಕಳೆದ ಅಕ್ಟೋಬರ್ ಅಂತ್ಯದಲ್ಲಿ ಕೇರಳ ಪೊಲೀಸರ ಮುಂದೆ ಶರಣಾಗಿದ್ದ. ಅಲ್ಲದೆ ರಾಘವೇಂದ್ರ ಎಂಬಾತನನ್ನ ಕೇರಳ ಪೊಲೀಸರು 2 ದಿನಗಳ ಹಿಂದಷ್ಟೆ ಬಂಧಿಸಿದ್ದರು.
ಇವರಿಬ್ಬರ ವಿಚಾರಣೆ ವೇಳೆ ಹೇಳಿಕೊಂಡಂತೆ ಕಬಿನಿ ದಳದಲ್ಲಿ ಡೆಪ್ಯೂಟಿ ಕಮಾಂಡರ್ ಆಗಿದ್ದ ಲಿಜೇಶ್ ಅಲಿಯಾಸ್ ರಾಮು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಇನ್ನೂ ಕಳೆದ ಕೆಲವು ವರ್ಷಗಳಿಂದ ನಕ್ಸಲ್ ಗುಂಪಿನ ಕೊರಿಯರ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಬಿಜಿಕೆ ಹಾಗೂ ಸಾವಿತ್ರಿ ಸೇರಿದಂತೆ ಹಲವರ ಬಗ್ಗೆ ಮಾಹಿತಿ ನೀಡಿದ್ದ.
ಈ ಮಾಹಿತಿಯನ್ನ ಆಧರಿಸಿ ಕೇರಳ ಪೊಲೀಸರು ವೈನಾಡುವಿನ ಸುಲ್ತಾನ್ ಬತ್ತೇರಿಯಲ್ಲಿ ಬಿಜಿಕೆಯನ್ನ ಬಂಧಿಸಿದ್ದಾರೆ. ಅಲ್ಲದೆ ಈತನ ಜೊತೆಗಿದ್ದ ಸಾವಿತ್ರಿಯನ್ನು ಅರೆಸ್ಟ್ ಮಾಡಿದ್ದಾರೆ.
ಸಾವಿತ್ರಿ ಕಬಿನಿ ದಳದ ಕಮಾಂಡರ್ ಆಗಿದ್ದು, ವೈನಾಡು ಕೋಜಿಕೋಡ್ನಲ್ಲಿ ಸಕ್ರಿಯವಾಗಿರುವ ಈ ದಳದ ಮುಖ್ಯಸ್ಥ ವಿಕ್ರಂಗೌಡನ ಪತ್ನಿ ಕೂಡ ಹೌದು,.