DJ Bike rally ban in smg : malenadau today news,ಶಿವಮೊಗ್ಗ : ಮಹತ್ವದ ಬೆಳವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಹಾಗೂ ಬೈಕ್ ರ‍್ಯಾಲಿಯನ್ನು ನಿರ್ಬಂಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೆಲವು ಮಹತ್ವದ ಆದೇಶ (Orders) ಹೊರಡಿಸಿದ್ದಾರೆ.
ಡಿಜೆ , ಬೈಕ್ ರ‍್ಯಾಲಿ ಬ್ಯಾನ್
ಇದೇ ಮುಂಬರುವ ಆಗಸ್ಟ್ 27 ರಿಂದ ಮುಂದಿನ ಸೆಪ್ಟೆಂಬರ್ 15 ರವರೆಗೆ ಡಿಜೆ ಸಿಸ್ಟಂ ಮತ್ತು ಬೈಕ್ ರ‍್ಯಾಲಿಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ.
ಸಾರ್ವಜನಿಕರಿಗೆ, ವಯಸ್ಕರು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಡಿಜೆ ಸಿಸ್ಟಂನ ಸೌಂಡ್ನಿಂದ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನೊಂದೆಡೆ ಬೈಕ್ ರ‍್ಯಾಲಿಗಳಿಂದ ಎಲ್ & ಓ ಗೆ ಸಮಸ್ಯೆಯಾಗಬಹುದು ಎನ್ನುವ ಕಾರಣ ನೀಡಿ ಬೈಕ್ ರ‍್ಯಾಲಿ ನಿರ್ಬಂಧಿಸಲಾಗಿದೆ.
ಗಣಪತಿ ವಿಸರ್ಜನೆಗೆ ರೂಲ್ಸ್
ಇನ್ನೂಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಕೂಡಾ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ನದಿ, ಕೆರೆ ಅಥವಾ ಹಿನ್ನೀರಿನಲ್ಲಿ ತೆಪ್ಪಗಳನ್ನು ಬಳಸಿ ವಿಸರ್ಜನೆ ಮಾಡುವಾಗ ಪ್ರತಿ ತೆಪ್ಪದಲ್ಲಿ ಕೇವಲ 3-4 ಜನರು ಇರಬೇಕು, ಎಲ್ಲರೂ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕು. ನುರಿತ ಈಜುಗಾರರನ್ನ ಹೊಂದಿರಬೇಕು ಎಂದು ಸೂಚಿಸಲಾಗಿದೆ.
Shivamogga DC orders, DJ system ban, Bike rally prohibition, Rules for Ganesha festival, Shivamogga DC Guru Datta Hegde, ಡಿಜೆ ಸಿಸ್ಟಂ ನಿಷೇಧ, ಬೈಕ್ ರ‍್ಯಾಲಿ, ಗಣೇಶ ವಿಸರ್ಜನೆ, ಈದ್ ಮಿಲಾದ್

DJ Bike rally ban in smg
