dinesh gundu rao statement on physiotherapy ಶಿವಮೊಗ್ಗ, malenadu today news : August 20 2025 : ಸದನ ಕಲಾಪದಲ್ಲಿ ಶಿವಮೊಗ್ಗವೂ ಸೇರಿದಂತೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಪಿಜಿಯೋ ಥೆರಪಿ ಸೇವೆ ಒದಗಿಸಲು ಕ್ರಮ ಕೈಗೊಳ್ಳುವುದರ ಜೊತೆಯಲ್ಲಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣದ ಸಂಬಂಧ ಮಹತ್ವದ ಹೇಳಿಕೆಗಳು ಕೇಳಿಬಂದಿದೆ. ಮೊದಲನೆಯದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದ 31 ಜಿಲ್ಲಾ ಆಸ್ಪತ್ರೆಗಳಲ್ಲಿ ಫಿಜಿಯೋಥೆರಪಿ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ. ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಎಲ್ಲಾ ಜಿಲ್ಲೆಗಳಲ್ಲಿ ಪಿಸಿಯೋ ಥೆರಪಿ ಸೇವೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣದಲ್ಲಿ 12 ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ನಗರದ 03 ಪ್ರಮುಖ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಾಳುಗಳು, ಅನಾರೋಗ್ಯದವರು ಹಾಗೂ ಅಂಗವಿಕಲರಿಗೆ ಜಿಲ್ಲಾಸ್ಪತ್ರೆಗಳಲ್ಲಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗುತ್ತಿದೆ. ಎಲೆಕ್ಟೋಥೆರಪಿ, ಇಂಟರ್ಫರೆನ್ಷಿಯಲ್ ಥೆರಪಿ (IFT), ಅಲ್ವಾಸೌಂಡ್ ಥೆರಪಿ, ಟ್ರಾನ್‌ಸ್ಟುಟೇನಿಯಸ್ ಎಲೆಕ್ಟಿಕಲ್ ನರ್ವ ಸ್ವಿಮ್ಯುಲೇಶನ್ (TENS), ಟ್ರಾಕ್ಶನ್, ಸ್ಟಿಮುಲೇಷನ್, ಶಾರ್ಟ್‌ವೇವ್ ಡಯಾಥರ್ಮಿ (SWD) ಸೇವೆಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿನ ಆಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಮಾಸಿಕವಾಗಿ 1400 ರಿಂದ 1500 ರವರೆಗೆ ರೋಗಿಗಳಿಗೆ ಸೇವೆಯನ್ನು ನೀಡಲಾಗುತ್ತಿದೆ.

15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್ ಬ್ಲಾಷ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/
ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯಲ್ಲಿ, 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,33,182 ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಸೇವೆಯನ್ನು ಒದಗಿಸಲಾಗಿರುತ್ತದೆ ಹಾಗೂ ಒಟ್ಟು 2,34,631 ರೋಗಿಗಳಿಗೆ ಮನೆ ಭೇಟಿ ನೀಡಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗಿದೆ. 2025-26ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯದಲ್ಲಿ ಒಟ್ಟು 30,386 ರೋಗಿಗಳಿಗೆ ಜಿಲ್ಲಾಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಸೇವೆಯನ್ನು ಒದಗಿಸಲಾಗಿರುತ್ತದೆ ಹಾಗೂ ಒಟ್ಟು 39,944 ರೋಗಿಗಳಿಗೆ ಮನೆ ಭೇಟಿ ನೀಡಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗಿದೆ.
ರಾಜ್ಯದ ಎಲ್ಲಾ 31 ಜಿಲ್ಲಾ ಆಸ್ಪತ್ರೆಗಳ ಫಿಜಿಯೋಥೆರಪಿ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (NP-NCD) ಅಡಿಯಲ್ಲಿ ಒಬ್ಬರು ಫಿಜಿಯೋಥೆರಪಿಸ್ಟ್ ರವರನ್ನು ಹಾಗೂ ರಾಷ್ಟ್ರೀಯ ಹಿರಿಯರ ನಾಗರೀಕರ ಆರೋಗ್ಯ ಆರೈಕೆ ಕಾರ್ಯಕ್ರಮ (NPHCE) ಅಡಿಯಲ್ಲಿ 15 ಜಿಲ್ಲಾಸ್ಪತ್ರೆಗಳಿಗೆ ಒಬ್ಬರು ಫಿಜಿಯೋಥೆರಪಿಸ್ಟ್ ರವರನ್ನು NHM ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿರುವ ಫಿಜಿಯೋಥೆರಪಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.,
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
dinesh gundu rao statement on physiotherapy
